ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ : ಡಾ.ಜಿ ಪರಮೇಶ್ವರ್‌ ಹೇಳಿದ್ದೇನು?

ಬೆಂಗಳೂರು, ಜನವರಿ 24: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿದೆ. ಲೋಕಸಮರದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ನಾಯಕರು, ಈ ಹಿಂದೆ ಕಾಂಗ್ರೆಸ್‌ ಸೇರ್ಪಡೆಯಾದ ನಾಯಕರನ್ನ ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ ಎಸ್‌ ಈಶ್ವರಪ್ಪ ಅವರು ಮತ್ತೆ ಬಿಜೆಪಿ ಜಗದೀಶ್‌ ಶೆಟ್ಟರ್‌ ಬರುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿ ಪಾಳಯದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಚಿವ ಪರಮೇಶ್ವರ್ ಉತ್ತರ ನೀಡಿದ್ದಾರೆ.

 Home Minister Parameshwar Reaction On Jagadish Shettar Joining BJP

ಕಲಬರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣ ಮಾತನಾಡಿ, ಕಲಬರುಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಈಗಾಗಲೇ ನಾಲ್ವರ ಬಂಧನವಾಗಿದ್ದು, ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮವನ್ನು ಜರಗಿಸಲಾಗುವುದು ಎಂದು ಡಾ. ಜಿ ಪರಮೇಶ್ವರ್ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಇದಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂದು ಗೊತ್ತಾಗಲು ತನಿಖೆಗೆ ಹೇಳಿದ್ದೇನೆ. ಯಾಕೆಂದ್ರೆ ಈ ಘಟನೆ ಆಗಬೇಕಾದರೆ ಏನಾದರೂ ಉದ್ದೇಶ ಇರುತ್ತದೆ ಎಂದರು.

ಈ ನಿಟ್ಟಿನಲ್ಲಿ ವಿಚಾರಣೆಯನ್ನು ನಡೆಸಿ ಮುಂದಕ್ಕೆ ಸೂಕ್ತ ತನಿಖೆ ಕ್ರಮಕೈಗೊಳ್ಳುತ್ತೇವೆ. ಆರೋಪಿಗಳನ್ನು ನಾಯ್ಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದರು. ಇನ್ನು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಬಿಜೆಪಿ ಆಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಅವರಿಗೆ ಯಾರು ಮಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಆವಾಗ ಅವರೇ ಸುಮ್ಮನಾಗುತ್ತಾರೆ. ಮಾಹಿತಿ ಕೆಲವೊಂದು ಹೇಳೊಕ್ಕೆ ಆಗಲ್ಲ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು. ಪ್ರತಿಮೆಗೆ ಅವಮಾನ ಮಾಡಲು ಯಾರು ಹೇಳಿಕೊಟ್ಟಿದ್ದಾರೆ ಹಾಗೂ ಇದರ ಹಿಂದೆ ಯಾರಿದ್ದಾರೆ? ಎಲ್ಲವೂ ಕೂಡ ಪರಿಶೀಲನೆ ನಡೆಸಬೇಕಾಗುತ್ತೆ ಎಂದು ಹೇಳಿದರು.

ಮಂಗಳವಾರ ನಡೆದ ಪಿಎಸ್‌ಐ ಪರೀಕ್ಷಾ ಕೊಠಡಿಗೆ ಯಾರಿಗೂ ಹಿಂದಿನಲ್ಲಿ ಬ್ಲೂಟೂತ್‌ಗಳನ್ನು ತರಲು ಸಾಧ್ಯವಾಗಿಲ್ಲ. ಬಹಳ ದಿನದಿಂದ ನಿರೀಕ್ಷೆ ಮಾಡಿದ ಪಿಎಸ್ಐ ಪರೀಕ್ಷೆ ಬಹಳ ಸುಗಮವಾಗಿ ಆಗಿದೆ. ಯಾರೂ ಕೂಡ ಬ್ಲೂಟೂತ್‌ಗಳು ತೆಗೆದುಕೊಂಡು ಒಳಗಡೆ ಹೋಗುವ ತರುವ ಪ್ರಯತ್ನ ಸಾಧ್ಯವಾಗಿಲ್ಲ. ಆ ರೀತಿ ಪ್ರಯತ್ನ ಕೂಡ ಆಗಿಲ್ಲ ಎಂದು ಭಾವಿಸುತ್ತೇನೆ ಎಂದರು.

ಸುಮಾರು 54,000 ಜನ ಪರೀಕ್ಷೆ ಬರೆಯಬೇಕಿತ್ತು, ಅದರಲ್ಲಿ 65 ರಿಂದ 70% ಪರೀಕ್ಷೆ ಬರೆದಿದ್ದಾರೆ . ಅದನ್ನು ವ್ಯಾಲ್ಯೂಯೇಷನ್ ಮಾಡಿ ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆಯನ್ನು ಮಾಡುತ್ತೇವೆ. ಇದರ ಬಳಿಕ 403 ಸಬ್ ಇನ್ಸ್‌ಪೆಕ್ಟರ್‌ಗಳ ಪರೀಕ್ಷೆ ಮಾಡಬೇಕು. ಅದನ್ನು ಕೂಡ ಕೆಇಎ ಅವರಿಗೆ ವಹಿಸಬೇಕು ಅಂತ ಯೋಚಿಸಿದ್ದೇವೆ ಎಂದರು.

ಮೊದಲನೆದಾಗಿ ಕೆಇಎ ನಿರ್ದೇಶಕಿ ರಮ್ಯಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡಿಕೊಟ್ಟಿದ್ದಾರೆ . ಅದೇ ಪ್ರಕಾರ ಮುಂದೆ ಕೂಡ ಮಾಡಿದರೆ ಯಾವುದೇ ಗೊಂದಲಕ್ಕೆ ಆಸ್ಪದ ಇರುವುದಿಲ್ಲ. 403 ಹುದ್ದೆಗಳ ಆಯ್ಕೆ ಬಗ್ಗೆ ನೋಟಿಫಿಕೇಶನ್ ಆಗಿದೆ. ದೈಹಿಕ ಪರೀಕ್ಷೆ ಕೂಡ ಆಗಿದ್ದು ಲಿಖಿತ ಪರೀಕ್ಷೆ ನಡೆಯಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ 948 ಸಬ್ ಇನ್ಸ್‌ಪೆಕ್ಟರ್‌ಗಳು ಸಿಕ್ತಾರೆ . ಇದಾದ ಮೇಲೆ 660 ಸಬ್ ಇನ್ಸ್ಪೆಕ್ಟರ್ ಗಳಿಗೆ ಆಯ್ಕೆ ನಡೆಯಬೇಕಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+