ಮೂರನೇ ಲಾಕ್ ಡೌನ್ ನಂತರ ಏನು? ಸುಳಿವು ಕೊಟ್ಟ ಗೃಹಸಚಿವ ಬೊಮ್ಮಾಯಿ

ಬೆಂಗಳೂರು, ಮೇ 7: ಸ್ವಯಂ ಕ್ವಾರಂಟೈನ್ ನಿಂದ ಹೊರ ಬಂದಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೂರನೇ ಲಾಕ್ ಡೌನ್ ನಂತರ ಏನು ಎನ್ನುವುದರ ಬಗ್ಗೆ ಸುಳಿವು ನೀಡಿದ್ದಾರೆ.

Recommended Video

      ಸರ್ಕಾರ ನಮಗೆ ಏನ್ ಕೊಡೋದು ಬೇಡ ಮದ್ಯ ಮಾರಾಟ ನಿಲ್ಸಿದ್ರೆ ಸಾಕು | Oneindia Kannada

      "ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ ಎನ್ನುವ ಕಾರಣಕ್ಕಾಗಿ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ, ಇದರರ್ಥ ಕೊರೊನಾ ಕಮ್ಮಿಯಾಗಿದೆ ಎಂದಲ್ಲ" ಎಂದು ಬೊಮ್ಮಾಯಿ ಹೇಳಿದ್ದಾರೆ.

      "ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಕೊರೊನಾವನ್ನು ಸಂಪೂರ್ಣ ತೊಲಗಿಸಲು ಸಾಧ್ಯ. ಮೂರನೇ ಲಾಕ್ ಡೌನ್ ಅನ್ನು ಯಶಸ್ವಿಗೊಳಿಸುವ ಸಂಪೂರ್ಣ ಜವಾಬ್ದಾರಿ ಜನರದ್ದು"ಎಂದು ಬೊಮ್ಮಾಯಿ ಪುನರುಚ್ಚಿಸಿದ್ದಾರೆ.

      What After Third Lockdown? State Home Minister Basavaraj Bommai Reaction

      "ಮೇ ಹದಿನೇಳರ ನಂತರ ಕೊರೊನಾ ನಿಯಂತ್ರಣಕ್ಕೆ ಬರದೇ ಇದ್ದಲ್ಲಿ, ಮುಂದೆ ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಸರಕಾರಕ್ಕೆ ಬರಲಿದೆ"ಎಂದು ಗೃಹಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.

      "ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕೇಂದ್ರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು" ಬೊಮ್ಮಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

      "ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ವಾಸ್ತವ ಇದ್ದರೆ ಆರೋಪ ಮಾಡಲಿ. ಆರೋಪ ಮಾಡಬೇಕು ಅಂತಾನೆ ಮಾಡೋದು ಸರಿಯಲ್ಲ" ಎಂದು ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಅಸಮಾಧಾನ ಹೊರಹಾಕಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+