ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾ ಅಡಕೆ ಬೆಳೆಗಾರರ ಹಿತಾಸಕ್ತಿ ಕಾಳಜಿ ಇರುವ, ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ: ಆರಗ ಜ್ಞಾನೇಂದ್ರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 31: ಸಾಂಪ್ರದಾಯಿಕ ಪ್ರದೇಶದಲ್ಲಿ ಬೆಳೆಯುತ್ತಿರುವ ಅಡಕೆ ರೈತರ ಹಿತ ರಕ್ಷಣೆ ಬಗ್ಗೆ, ಸದನದಲ್ಲಿ ಮಾತನಾಡಿದ್ದನ್ನು, ತಿರುಚಿ, ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ, ಇದನ್ನು ಖಂಡಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಮಾಡಲು, ಬೇರೆ ಏನೂ ಇಲ್ಲದೆ ರಾಜಕೀಯ ವಿರೋಧಿಗಳು, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಅಡಕೆ ಬೆಳೆಗಾರರ ಪರವಾಗಿ, ಮಾತನಾಡಿದ್ದನ್ನು, ಟೀಕೆ ಮಾಡಿದ್ದಾರೆ ಎಂದು ಅಸಮಾಧಾನ ವ್ತಕ್ತಪಡಿಸಿದರು.

ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸುವ ನಗರಗಳಲ್ಲಿ ಬೆಂಗಳೂರು ಒಂದುರಸ್ತೆ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸುವ ನಗರಗಳಲ್ಲಿ ಬೆಂಗಳೂರು ಒಂದು

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸದನದಲ್ಲಿ, ನಾನು ಮಾತನಾಡಿದ, ಒಟ್ಟು ಭಾಷಣದ ಅರ್ಥವನ್ನು ಗ್ರಹಿಸದೆ, ನನ್ನ ಹೇಳಿಕೆಯನ್ನೇ ತಪ್ಪಾಗಿ ಬಿಂಬಿಸಿ, ಅಪಪ್ರಚಾರ ಹಾಗೂ ಸುಳ್ಳನ್ನು ಬಿತ್ತುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Home Minister Araga Jnanendra Said That Slander Is Being Spread Against Me.

ಅಡಕೆ ಬೆಳೆಗಾರರ ಭವಿಷ್ಯವನ್ನೇ ಹೊಸಕಿ ಹಾಕುವ ಪ್ರಯತ್ನದಲ್ಲಿ ಇವರು ಸುಪ್ರೀಂ ಕೋರ್ಟ್ ನಲ್ಲಿ ಅಡಕೆ ಕ್ಯಾನ್ಸರ್ ಗೆ ಕಾರಕ ಎಂದು ಅಫಿಡವಿಟ್ ಸಲ್ಲಿಸಿದ್ದನ್ನು ಯಾರೂ ಮರೆತಿಲ್ಲ. ಇದನ್ನು ವಿರೋಧಿಸಿ, ಅಡಕೆ ಕ್ಯಾನ್ಸರ್ ಕಾರಕ ಅಲ್ಲ, ಅದೊಂದು ಆರೋಗ್ಯ ವರ್ಧಕ ಎಂದು ಯಶಸ್ವಿಯಾಗಿ ವಾದ ಮಂಡಿಸಿ, ರೈತರ ಮೇಲಿದ್ದ ತೂಗು ಕತ್ತಿಯನ್ನು ನಿವಾರಣಾ ಮಾಡುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದನ್ನು ಇಲ್ಲಿ ಸ್ಮರಿಸ ಬಯಸುತ್ತೇನೆ ಎಂದು ಹೇಳಿದರು.

ಸಾಂಪ್ರದಾಯಿಕ ವಾಗಿ ಅಡಕೆ ಬೆಳೆಯುತ್ತಿರುವ ಪ್ರದೇಶದಲ್ಲಿ ಮಾತ್ರ ಬಂದಿರುವ ಹಾಗೂ ರೈತರಿಗೆ ಮಾರಕ ವಾಗಿರುವ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆಗೆ ಸರಕಾರದಿಂದ ಅನುದಾನ ಬಿಡುಗಡೆ ಗೊಳಿಸಿದ್ದೇನೆ. ಎಲೆ ಚುಕ್ಕೆ ರೋಗಕ್ಕೆ ಕಾರಣವಾದ ಅಂಶಗಳ ಮೇಲೆ ಸಂಶೋಧನೆ ನಡೆಸಲು, ಕೇಂದ್ರ ಸರಕಾರದ ಮೇಲೆ ಒತ್ತಡ ತಂದ ಪರಿಣಾಮವಾಗಿ, ಕೇಂದ್ರ ಸಂಶೋಧಕರ ಹಾಗೂ ವಿಜ್ಞಾನಿಗಳ ತಂಡ ಬಂದಿದೆ.

ಮಾರುಕಟ್ಟೆಯಲ್ಲಿ ಅಡಕೆ ಬೆಳೆ ಧಾರಣೆಗೆ ಸ್ತಿರತೆ ಒದಗಿಸಲು ಅನುಕೂಲವಾಗುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದ ಪರಿಣಾಮವಾಗಿ ಅಡಕೆ ಬೆಳೆಯ ಕನಿಷ್ಠ ಉತ್ಪಾದನಾ ವೆಚ್ಚದರ ಹೆಚ್ಚಳಕ್ಕೆ ಸರಕಾರ ಒಪ್ಪಿಕೊಂಡಿದೆ. ಇಷ್ಟರಲ್ಲಿಯೇ ಈ ಸಂಬಂಧ ಆದೇಶ ಹೊರ ಬರಲಿದೆ ಎಂದು ತಿಳಿಸಿದರು.

Home Minister Araga Jnanendra Said That Slander Is Being Spread Against Me.

ಅಡಕೆ ಬೆಳೆಗಾರರ ಹಿತ ಕಾಪಾಡಲು ಕಟಿಬದ್ದ ವಾಗಿರುವ ನನ್ನ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಅಡಕೆ ಧಾರಣೆ ಕ್ವಿಂಟಾಲ್ ಗೆ ಎಂಬತ್ತು ಸಾವಿರ ರೂಪಾಯಿ ವರೆಗೂ ಹೋಗಿತ್ತು, ಅದರ ಪರಿಣಾಮವಾಗಿ ಅಡಕೆ ಬೆಳೆ ಅಸಂಪ್ರದಾಯಿಕ ಪ್ರದೇಶಗಳಲ್ಲಿಯೂ, ವ್ಯಾಪಕವಾಗಿ ವಿಸ್ತಾರ ಗೊಂಡ ಪರಿಣಾಮ ನಂತರದ ದಿನಗಳಲ್ಲಿ 25 ರಿಂದ 30 ಸಾವಿರಕ್ಕೂ ಬಂದಿದ್ದನ್ನು ಮರೆಯಬಾರದು ಎಂದರು.

ಈ ಕಾರಣ ದಿಂದಲೇ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ಅಡಕೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಕೊಡಬಾರದು ಎಂದು ಅಭಿಪ್ರಾಯ ಪಟ್ಟಿದ್ದೇನೆ ಎಂದರು.

English summary
Home Minister Araga Jnanendra said that slander is being spread against me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X