Get Updates
Get notified of breaking news, exclusive insights, and must-see stories!

ಕರ್ನಾಟಕ; ಸರ್ಕಾರಿ ನೌಕರರ ರಜೆ ನಿಯಮ ತಿಳಿಯಿರಿ

ಬೆಂಗಳೂರು, ಅಕ್ಟೋಬರ್ 13; ಕರ್ನಾಟಕದ ಸರ್ಕಾರಿ ನೌಕರರಿಗೆ ವಿವಿಧ ಬಗೆಯ ಸೌಲಭ್ಯಗಳು ಇರುತ್ತವೆ. ಅವುಗಳಲ್ಲಿ ರಜೆಗಳು ಸಹ ಸೇರಿರುತ್ತವೆ. ನೌಕರನು ನಿಬಂಧನೆಗಳಿಗೆ ಒಳಪಟ್ಟು ರಜಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ರಜೆ ನಿಯಮಗಳು 106 ರಿಂದ 206ರ ತನಕ ಇದೆ. ವಿವಿಧ ನಿಯಮಗಳ ಅನ್ವಯ ವಿವಿಧ ರಜೆಗಳು ಬರುತ್ತವೆ. ನಿಯಮ 107ರ ಅನ್ವಯ ರಜೆಯನ್ನು ಹಕ್ಕು ಎಂದು ಸಾಧಿಸಲಾಗದು. ರಜೆ ಕೋರಿ ಮನವಿ ಸಲ್ಲಿಸಿದಾಗ ಅಂಗೀಕರಿಸಬಹುದು, ನಿರಾಕರಿಸಬಹುದು.

ಸರ್ಕಾರಿ ನೌಕರರಿಗೆ ಸುಮಾರು 11 ಬಗೆಯ ರಜೆಗಳು ಸಿಗುತ್ತವೆ. ವಿವಿಧ ನಿಯಮಗಳ ಅನ್ವಯ ಈ ರಜೆಗಳನ್ನು ಪಡೆಯಬೇಕಾಗಿದೆ. ಸರ್ಕಾರಿ ನೌಕರನ ಸೇವೆಯ ಮೊದಲ ಒಂದು ತಿಂಗಳ ಕರ್ತವ್ಯದ ನಂತರ ಒಂದು ದಿನದ ರಜೆ ಸಾಂದರ್ಭಿಕ ರಜೆಯಾಗಿದೆ.

ನೌಕರರು ಸಾಂದರ್ಭಿಕ ರಜೆ (ಆಕಸ್ಮಿಕ ರಜೆ), ವಿಶೇಷ ಸಾಂದರ್ಭಿಕ ರಜೆ, ಗಳಿಕೆ ರಜೆ, ಅರ್ಧ ವೇತನ ರಜೆ, ಪರಿವರ್ತಿತ ರಜೆ, ಹಕ್ಕಿಲ್ಲದ ರಜೆ, ಅಸಾಧಾರಣ ರಜೆ, ಪರೀಕ್ಷಾ ರಜೆ, ಹೆರಿಗೆ ರಜೆ, ಪಿತೃತ್ವ ರಜೆ, ವಿಶೇಷ ದುರ್ಬಲತೆ ರಜೆ ಹೀಗೆ ವಿವಿಧ ರಜೆಗಳು ಲಭ್ಯವಿದೆ. ಸರ್ಕಾರಿ ನೌಕರರ 106 ರಿಂದ 206ರ ನಿಯಮಗಳ ರಜೆಯ ವಿವರಗಳು..

ನಿಯಮ 106, ರಜೆ ಎಂದರೇನು?

ನಿಯಮ 106, ರಜೆ ಎಂದರೇನು?

ರಜೆ ಎಂದರೇ , ಗಳಿಕೆ ರಜೆ, ಅರ್ಧ ವೇತನ ರಜೆ, ಪರಿವರ್ತಿತ ರಜೆ, ಗಳಿಸಿರದ ರಜೆ, ಅಸಾಧಾರಣ ರಜೆ, ಮಾತೃತ್ವ ರಜೆ, ಪಿತೃತ್ವ ರಜೆ ಇತ್ಯಾದಿ. ನಿಯಮ 106 (ಎ) ಅನಧಿಕೃತ ಗೈರುಹಾಜರಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಸಮರ್ಥನೀಯ ಕಾರಣಗಳು ಇಲ್ಲದೇ ಗೈರುಹಾಜರಾದರೆ ಅದು ಅನಧಿಕೃತ ಗೈರು ಹಾಜರಿ.

ಆ ದಿನಗಳಿಗೆ ಸರ್ಕಾರಿ ನೌಕರನು ಯಾವುದೇ ರೀತಿಯ ವೇತನವನ್ನು ಪಡೆಯಲು ಹಕ್ಕುಳ್ಳವನಾಗಿರುವುದಿಲ್ಲ ಅಂತಹ ಗೈರು ಹಾಜರು ಅವಧಿಯು ಅರ್ಧವೇತನ ರಜೆಯಾಗಿದ್ದರೆ ಬಾಕಿ ಇರುವ ಅರ್ಧವೇತನ ರಜೆಗೆ ಖರ್ಚುಹಾಕತಕ್ಕದ್ದು ಮತ್ತು ಉಳಿದಂತೆ ವೇತನ ರಹಿತ ರಜೆ ಎಂದು ಮಂಜೂರು ಮಾಡಬಹುದು. ಹಾಗೂ ತಾನೂ ಕಛೇರಿಗೆ ಗೈರು ಹಾಜರಾಗಲು ತನ್ನ ಹತೋಟಿಗೆ ಮೀರಿದ ಕಾರಣದಿಂದಾಗಿ ಎಂದು ರಜೆ ಮಂಜೂರು ಮಾಡುವ ಪ್ರಾಧಿಕಾರದ ಸಕ್ಷಮ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕು ತಪ್ಪಿದ್ದಲ್ಲಿ ತನ್ನ ದುರ್ನಡತೆಗಾಗಿ ಶಿಸ್ತು ಕ್ರಮವನ್ನು ಒಳಪಡುತ್ತಾನೆ.

ಸರ್ಕಾರಿ ನೌಕರನು ಕಛೇರಿ ಪ್ರಾರಂಭವಾಗಲು ನಿಗಧಿಪಡಿಸಿದ ಸಮಯದಿಂದ 10 ನಿಮಿಷಗಳ ಗ್ರೇಸ್ ಅವಧಿಯ ಮುಕ್ತಾಯವಾದ ನಂತರ ಆದರೇ ಮಧ್ಯಾಹ್ನ 2 ಗಂಟೆಯ ಒಳಗಡೆ ಕಛೇರಿಗೆ ಹಾಜರಾದರೆ ಅವನು ಅಂತಹ ಪ್ರತಿಯೊ೦ದು ವಿಳಂಭಕ್ಕೆ ಅರ್ಧ ದಿನದ ಸಾಂಧರ್ಬಿಕ ರಜೆಯನ್ನು ಕಳೆದುಕೊಳ್ಳುತ್ತಾನೆ. ಒಂದು ವೇಳೆ ಸಾಂಧರ್ಬಿಕ ರಜೆ ಇರದಿದ್ದಲ್ಲಿ ಗಳಿಕೆ ರಜೆ, ಅರ್ಧ ವೇತನ ರಜೆಯನ್ನು ಕಳೆದುಕೊಳ್ಳುತ್ತಾನೆ. ಶಿಸ್ತು ಪ್ರಾಧಿಕಾರವು ಅನಧಿಕೃತ ಗೈರು ಹಾಜರಿ ಅವಧಿಯನ್ನು ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅಂತಹ ಅವಧಿಯನ್ನು ಲೆಕ್ಕಕ್ಕಿಲ್ಲದ ದಿನ ಅಥವಾ ಅವಧಿ ಅಥವಾ ಅಂಗೀಕಾರರ್ಹ ರಜೆ ಎಂದಾದರೂ ಪರಿಗಣಿಸಬಹುದು ಅವರ ವಿವೇಚನೆ ಬಿಟ್ಟಿದ್ದು.

ಕೆಲಸಕ್ಕೆ ಗೈರಾಗುವುದು

ಕೆಲಸಕ್ಕೆ ಗೈರಾಗುವುದು

106 (ಬಿ) ಅನ್ವಯ ಮುಷ್ಕರದ ಕಾರಣದಿಂದಾಗಿ ಕೆಲಸಕ್ಕೆ ಗೈರು ಹಾಜರಾಗುವ ಯಾವುದೇ ನೌಕರ ಈ ನಿಯಮಗಳ ಮೇರೆಗೆ ಯಾವುದೇ ರಜೆಗೆ ಹಕ್ಕುಉಳ್ಳವನಾಗಿರುವುದಿಲ್ಲ.

ಮುಷ್ಕರದಲ್ಲಿ ಭಾಗವಹಿಸದ ಕಾರಣದಿಂದಾಗಿ ಕೆಲಸಕ್ಕೆ ಗೈರು ಹಾಜರಾಗುವ ಅಥವ ಕೆಲಸವನ್ನು ನಿಲ್ಲಿಸುವ ಸರ್ಕಾರಿ ನೌಕರನು ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆಯನ್ನು ಕಳೆದುಕೊಳ್ಳತಕ್ಕದ್ದು.

ಮುಷ್ಕರ ಎಂದರೇ ಕರ್ನಾಟಕ ರಾಜ್ಯ ಸರ್ಕಾರಿ ಸೇವಾ (ಮುಷ್ಕರ ವಿರೋಧ) ಅಧಿನಿಯಮ 1966ರಲ್ಲಿ ಇರುವಂತೆ ಕರ್ತವ್ಯದ ಮೇಲೆ ಇದ್ದರೂ ಲೇಖನಿ ಮುಷ್ಕರ ಮಾಡಿ ಸುಮ್ಮನೆ ಕುಳಿತುಕೊಳ್ಳುವುದು ಹಾಗೂ ಇನ್ನಿತರೆ ಮುಷ್ಕರದಲ್ಲಿ ಭಾಗವಹಿಸುವುದನ್ನು ಒಳಗೊಂಡಂತೆ.

ನಿಯಮ 107, 108

ನಿಯಮ 107, 108

ನಿಯಮ 107ರ ಅನ್ವಯ ರಜೆಯನ್ನು ಹಕ್ಕೆಂಬಂತೆ ಸಾಧಿಸಲಾಗದು. ಸರ್ಕಾರಿ ನೌಕರನು ಯಾವುದೇ ರೀತಿಯ ರಜೆಯನ್ನು ಕೋರಿ ಮನವಿಯನ್ನು ಸಲ್ಲಿಸಿದಾಗ ಅಂಗೀಕರಿಸಬಹುದು ಅಥವ ನಿರಾಕರಿಸಬಹುದು.

ನಿಯಮ 108; ಸರ್ಕಾರವು ಸಂದರ್ಭದ ವಿಶೇಷ ಸನ್ನಿವೇಶಗಳನ್ನು ಗಮನಿಸಿ ಅನ್ಯತಾ ನಿರ್ಧರಿಸದ ಹೊರತು, ರಜೆಯನ್ನು ಪಡೆಯದೇ ನಾಲ್ಕು ತಿಂಗಳು ಅಥವ ಅದಕ್ಕಿಂತ ಹೆಚ್ಚು ಅವಧಿಯವರೆಗೆ ಕರ್ತವ್ಯದಿಂದ ಗೈರು ಹಾಜರಾದ ನೌಕರನನ್ನು ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು)-1957ರಲ್ಲಿ ವಿಧಿಸಿದ ಕಾರ್ಯವಿಧಾನವನ್ನು ಅನುಸರಿಸಿದ ತರುವಾಯ ನೌಕರನನ್ನು ವಜಾ ಮಾಡುವುಕ್ಕೆ ಮತ್ತು ತೆಗೆದುಹಾಕಲಿಕ್ಕೆ ಗುರಿಯಾಗಬಹುದು.

ರಜೆಯನ್ನು ಮಂಜೂರು ಮಾಡಬಹುದು

ರಜೆಯನ್ನು ಮಂಜೂರು ಮಾಡಬಹುದು

ನಿಯಮ 109; ಸಾಂದರ್ಭಿಕ ರಜೆಯನ್ನು ಹೊರತುಪಡಿಸಿ ಇನ್ಯಾವುದೇ ರಜೆಯನ್ನು ಸಂಯೋಜಿಸಿ ಮತ್ತು ಮುಂದುವರೆಸಿ ರಜೆಯನ್ನು ಮಂಜೂರು ಮಾಡಬಹುದು.

ನಿಯಮ 111; ಒಬ್ಬ ಅಧಿಕಾರಿಗೆ ಯಾವುದೇ ಕಾಲದಲ್ಲಿ ಅವನ ಲೆಕ್ಕದಲ್ಲಿ ಪೂರ್ಣ/ ಯಾವುದೇ ಭಾಗಶಃ ಇರುವ ಗಳಿಕೆ ರಜೆಯನ್ನು ಮಂಜೂರು ಮಾಡಬಹುದು ಆದರೆ ನಿಯಮ 112 (9)ರಲ್ಲಿ ನಿರ್ಧಿಷ್ಟಪಡಿಸಿರುವ ಪರಿಮಿತಿಗೆ ಒಳಪಟ್ಟು ಮಂಜೂರು ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+