ಬೆಂಗಳೂರಿನಲ್ಲಿ ಹೈ ಅಲರ್ಟ್ : ಎರಡು ವರ್ಷದಿಂದ ನಗರದಲ್ಲಿದ್ದ ಉಗ್ರಗಾಮಿ ಅರೆಸ್ಟ್
ಬೆಂಗಳೂರು, ಜೂ. 07: ರಾಜಧಾನಿಯ ಮಸೀದಿಯೊಂದರಲ್ಲಿ ಎರಡು ವರ್ಷದಿಂದ ನೆಲೆಸಿದ್ದ ಹಿಜ್ಬುಲ್ ಮುಜಾಹಿದ್ದೀನ್ ಶಂಕಿತ ಉಗ್ರರಾಮಿ ತಾಲೀಬ್ ಹುಸೇನ್ ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿರುವದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಪೊಲೀಸರ ಸಹಾಯದಿಂದ ಉಗ್ರನನ್ನು ಬಂಧಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
Recommended Video
ಜೂ. 03 ರಂದು ಬೆಂಗಳೂರಿನ ಶ್ರೀರಾಂಪುರ ಪೊಲೀಸರು ಹಾಗೂ ಜಮ್ಮು ಕಾಶ್ಮೀರ ಪೊಲೀರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶ್ರೀರಾಂಪುರದ ಓಕಳೀಪುರಂ ಮಸೀದಿಯ ಪಕ್ಕದಲ್ಲಿ ನೆಲೆಸಿದ್ದ. ಜಮ್ಮು ಕಾಶ್ಮೀರದ ನಿವಾಸಿ ತಾಲಿಬ್ ಹುಸೇನ್ (38) ಹಿಜಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಅಗಿದ್ದ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಹಿಟ್ ಲಿಸ್ಟ್ ನಲ್ಲಿದ್ದ ಎಂದು ಹೇಳಲಾಗುತ್ತಿದೆ. ತಾಲೀಬ್ ಹುಸೇನ್ ಬಂಧನವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ಜಮ್ಮು ಮತ್ತು ಕಾಶ್ಮೀರದ ಡಿಜಿ ಖಚಿತಪಡಿಸಿದ್ದಾರೆ.
ಸ್ಯಾಟ್‌ಲೈಟ್ ಫೋನ್‌ನಿಂದ ಸುಳಿವು:
ಓಕಳೀಪುರಂ ನ ಮಸೀದಿ ಪಕ್ಕದಲ್ಲಿದ್ದ ತಾಲಿಬ್ ಹುಸೇನ್ ಸ್ಯಾಟ್ ಲೈಟ್ ಪೋನ್ ಬಳಕೆ ಮಾಡಿದ್ದ. ಯಾರಿಗೂ ಅನುಮಾನ ಬಾರದಂತೆ ಮಸೀದಿಗೆ ಹೋಗಿ ನಮಾಜ್ ಮಾಡುತ್ತಿದ್ದ. ಅಲ್ಲದೇ ಕೆಲವು ಅನಾಥಾಶ್ರಮಗಳಿಗೆ ಹೋಗಿ ಊಟ ನೀಡುತ್ತಿದ್ದ. ತಾಲಿಬ್ ತನ್ನ ಆಪ್ತನ ಜತೆಗೆ ಬಂದಿದ್ದು, ಆತ ವಾಪಸು ಜಮ್ಮುವಿಗೆ ತೆರಳಿದ್ದ. ಈ ಕುರಿತ ಮಾಹಿತಿ ಸಂಗ್ರಹಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದರು.

ಓಕಳೀಪುರಂ ಮಸೀದಿ ಬಳಿ ನೆಲೆಸಿದ್ದ ತಾಲಿಬ್ ಹುಸೇನ್ ನ ಮಾಹಿತಿ ಸಂಗ್ರಹಿಸಿದ್ದು, ಬೆಂಗಳೂರು ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಉಗ್ರಗಾಮಿ ಬಂಧನಕ್ಕೆ ಒಳಗಾಗುತ್ತಿದ್ದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ:
ಬಂಧಿತ ಉಗ್ರನ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೋ ನಮಗೆ ಮಾಹಿತಿ ನೀಡಿಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ಬಾರಿ ಉಗ್ರಗಾಮಿಗಳನ್ನು ಪತ್ತೆ ಮಾಡಿ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ವಹಿಸಲಾಗಿದೆ. ಬಂಧಿತ ಉಗ್ರ ಎಲ್ಲಿ ಉಳಿದುಕೊಂಡಿದ್ದ. ಆತ ಏನು ಕೆಲಸ ಮಾಡುತ್ತಿದ್ದ. ಏನಾದರೂ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ರೂಪಿಸಿದ್ದನೇ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications