ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನ ಪೊಲೀಸ್ ಆಯುಕ್ತರಾಗಿ ಹಿತೇಂದ್ರ

By Mahesh
|
Google Oneindia Kannada News

ಮಂಗಳೂರು, ಡಿ.13: ಮಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್ ಆಗಿ ಕಾರಾಗೃಹ ವಿಭಾಗದ ಡಿಐಜಿ ಆರ್.ಹಿತೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಕಮಿಷನರ್ ಆಗಿದ್ದ ಮನೀಶ್ ಕರ್ಬೀಕರ್ ರನ್ನು ರಾಜ್ಯ ರಿಸರ್ವ್ ಪೊಲೀಸ್ ಡಿಐಜಿ ಯಾಗಿ ರಾಜ್ಯ ಸರ್ಕಾರ ವರ್ಗಾಯಿಸಿ ಆದೇಶ ಹೊರಡಿಸಿದೆ. ಮನೀಶ್ ಕರ್ಬಿಕರ್ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮಂಗಳೂರು ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

1996ನೆ ಬ್ಯಾಚಿನ ಐಪಿಎಸ್ ಅಧಿಕಾರಿ ಯಾಗಿರುವ ಆರ್. ಹಿತೇಂದ್ರ ಏಳು ವರ್ಷಗಳ ಕಾಲ ಸಿಬಿಐಯಲ್ಲಿ ಸೇವೆ ಸಲ್ಲಿಸಿದ್ದು, ಈ ಸಮಯದಲ್ಲಿ ರಾಜ್ಯದಿಂದ ಹೊರಗೆ ಬೇರೆ ಬೇರೆ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಐಎಎಸ್ ವರ್ಗಾವಣೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರನ್ನು ಬೆಂಗಳೂರು ಕಾರ್ಮಿಕ ಇಲಾಖೆಯ ಕಮಿಷನರ್ ಆಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

Hitendra is new Mangalore police Commissioner

ಕಳೆದ 2012ರ ಡಿ.3ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡಿದ್ದ ಎನ್.ಪ್ರಕಾಶ್ ರನ್ನು ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ವರ್ಗಾಯಿಸಿ ಹರ್ಷ ಗುಪ್ತಾರನ್ನು ನೇಮಿಸಲಾಗಿತ್ತು. ಚುನಾವಣೆ ಮುಗಿಯುತ್ತಿದ್ದಂತೆಯೇ ಪ್ರಕಾಶ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಮರುನೇಮಕ ಗೊಂಡಿದ್ದರು. ಇವರಿಂದ ತೆರವಾದ ಸ್ಥಾನಕ್ಕೆ ಯಾರನ್ನೂ ನೇಮಿಸಲಾಗಿಲ್ಲ.

ಐಪಿಎಸ್ ವರ್ಗಾವಣೆ: ಇದರ ಜತೆಗೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೆ.ಎಸ್.ಆರ್.ಚರಣ್ ರೆಡ್ಡಿಯನ್ನು ಐಜಿಪಿ ಹಾಗೂ ಗೃಹ ಇಲಾಖೆಯ ಸರಕಾರದ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಮುಂದಿನ ಆದೇಶ ಹೊರ ಬೀಳುವ ತನಕ ಬೆಂಗಳೂರಿನ ತರಬೇತಿ ವಿಭಾಗದ ಐಜಿಪಿಯನ್ನಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

ಆರ್.ಹಿತೇಂದ್ರ-ಡಿಐಜಿಪಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ, ಬಿ.ಎ.ಪದ್ಮಾನಯನ್-ಬೆಂಗಳೂರು ಕಾರಾಗೃಹದ ಡಿಐಜಿಪಿ, ಮನೀಶ್ ಖರ್ಬೀಕರ್- ರಾಜ್ಯ ಮೀಸಲು ಪಡೆ (ಬೆಂಗಳೂರು)ಯ ಡಿಐಜಿಪಿ ಹಾಗೂ ರವೀಂದ್ರ ಪ್ರಸಾದ್-ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

English summary
In a minor reshuffle, the State government changed the postings of five IPS officers, including the Police Commissioners of Mangalore and Hubli-Dharward, on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X