ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಲಗ್ನಕ್ಕೆ ವಿಘ್ನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ, ಏಪ್ರಿಲ್ 12 : ಹಿಂದೂ ಯುವತಿ, ಮುಸ್ಲಿಂ ಯುವಕ ನಡುವಿನ ವಿವಾಹಕ್ಕೆ ಯುವತಿ ಮನೆಯವರ ಒಪ್ಪಿಗೆಯಿದ್ದರೂ ಇದೊಂದು ಲವ್ ಜಿಹಾದ್ ಎಂದು ಆರೋಪಿಸಿ ಯುವತಿಯ ಮನೆ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಮಂಡ್ಯದಲ್ಲಿ ನಡೆದಿದೆ.

ಪ್ರೇಮಿಗಳಿಬ್ಬರು ಹನ್ನೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಶಕೀಲ್ ಹಾಗೂ ಆಶಿತಾ ಅವರ ಮದುವೆಯನ್ನು ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಏಪ್ರಿಲ್ 17ರಂದು ಮೈಸೂರಿನ ತಾಜ್ ಕನ್ವೆಂನ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.

ವಿಷಯ ತಿಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಯುವಕ ಹಿಂದೂ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ ಎಂದು ಆರೋಪಿಸಿ ಮುಖಂಡರಾದ ಸಿ.ಟಿ. ಮಂಜುನಾಥ್, ಪಂಚಾಕ್ಷರಿ, ಮಂಜು ಮೊದಲಾದವರು ಪ್ರತಿಭಟನೆ ನಡೆಸಿದರು. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ.2?]

Hindu bride muslim groom : Love marriage opposed in Mandya

ಒಪ್ಪಿಗೆಯ ಮದುವೆ : ಮಂಡ್ಯದ ಅಶೋಕನಗರ ಎರಡನೇ ಕ್ರಾಸ್‌ನಲ್ಲಿ ವಾಸವಾಗಿರುವ ಡಾ.ಎಚ್.ವಿ.ನರೇಂದ್ರಬಾಬು ಹಾಗೂ ಗಾಂಧಿನಗರ ನಿವಾಸಿ ಹಾಗೂ ಅಕ್ಕಿ, ಬೆಲ್ಲದ ವ್ಯಾಪಾರಿ ಮುಖ್ತಾರ್ ಅಹಮದ್ ಇಬ್ಬರೂ ಬಾಲ್ಯ ಸ್ನೇಹಿತರು. ಆ ಸ್ನೇಹ ಇಲ್ಲಿಯವರೆಗೂ ಮುಂದುವರೆದುಕೊಂಡು ಬಂದಿತ್ತು.

ಈ ನಡುವೆ ನರೇಂದ್ರಬಾಬು ಮಗಳು ಆಶಿತಾ ಮತ್ತು ಮುಖ್ತಾರ್ ಅಹಮದ್ ಪುತ್ರ ಶಕೀಲ್ ನಡುವೆ ಬಾಲ್ಯದ ಗೆಳೆತನ ಸ್ನೇಹವಾಗಿ ಬೆಳೆದು ನಂತರ ಪ್ರೀತಿಗೆ ತಿರುಗಿದೆ. ಎರಡೂ ಕುಟುಂಬದವರೂ ಒಪ್ಪಿಗೆ ಸೂಚಿಸಿ ಮದುವೆಗೆ ನಿಗದಿಪಡಿಸಿದ್ದರು. ಇದನ್ನು ವಿರೋಧಿಸಿ ಹಿಂದೂಪರ ಸಂಘಟನೆಯವರು ಯುವತಿಯ ಮನೆ ಎದುರು ಪ್ರತಿಭಟನೆ ನಡೆಸಿದರು. [ವಿವಾದಾತ್ಮಕ 'ಲವ್ ಜಿಹಾದ್'? ಎಂದರೇನು]

ವಧುವಿನ ತಂದೆಯ ಉವಾಚ : ಈ ಕುರಿತಂತೆ ಯುವತಿಯ ತಂದೆ ಡಾ.ಎಚ್.ವಿ.ನರೇಂದ್ರಬಾಬು ಪ್ರತಿಕ್ರಿಯಿಸಿ, "ನನ್ನ ಮಗಳು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿಲ್ಲ. ಆಕೆ ವಿದ್ಯಾವಂತೆ. ಮನಸಾರೆ ಒಪ್ಪಿ ಶಕೀಲ್‌ನನ್ನು ಮದುವೆಯಾಗುತ್ತಿದ್ದಾಳೆ. ಮಗಳ ಆಸೆಯನ್ನು ಈಡೇರಿಸುವುದು ತಂದೆ-ತಾಯಿಯ ಜವಾಬ್ದಾರಿ" ಎಂದು ಮದುವೆಗೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.

ಗಂಡಿನ ಅಪ್ಪ ಹೇಳುವುದು ಹೀಗೆ : ಇನ್ನೊಂದೆಡೆ, ಯುವಕನ ತಂದೆ ಮುಖ್ತಾರ್ ಅಹಮದ್ ಮಾತನಾಡಿ, "ನಾನು ಮತ್ತು ನರೇಂದ್ರ ಬಾಬು ಬಾಲ್ಯ ಸ್ನೇಹಿತರು. ನನ್ನ ಮಗ ಶಕೀಲ್ ಹಾಗೂ ನರೇಂದ್ರಬಾಬು ಮಗಳು ಆಶಿತಾ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ನನ್ನ ಸ್ನೇಹಿತನ ಜೊತೆಯೂ ಮಾತನಾಡಿದೆ. ಆತನೂ ಸಂತೋಷದಿಂದ ಒಪ್ಪಿಕೊಂಡಿದ್ದಾನೆ. ಇಬ್ಬರ ಮದುವೆ ಮೈಸೂರಿನಲ್ಲಿ ನಿಗದಿಯಾಗಿದೆ. ನಾವು ಆಶಿತಾಳನ್ನು ಸೊಸೆಯಾಗಿ ಸ್ವೀಕರಿಸಲು ಒಪ್ಪಿದ್ದೇವೆ. ಮುಸ್ಲಿಂ ಧರ್ಮಕ್ಕೆ ಆಕೆ ಮತಾಂತರವೂ ಆಗಿಲ್ಲ, ಮದುವೆಗೆ ಯಾವುದೇ ಷರತ್ತು ವಿಧಿಸಿಲ್ಲ" ಎಂದು ಹೇಳಿದ್ದಾರೆ.

ಆದರೆ ಇದ್ಯಾವುದನ್ನೂ ಒಪ್ಪದ ಹಿಂದೂಪರ ಸಂಘಟನೆಗಳ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಪ್ರಜ್ಞಾವಂತರಾದ ಓದುಗರೆ, ನೀವೇ ಹೇಳಿ. ಹಿಂದೂ ಮುಸ್ಲಿಂ ಪರಸ್ಪರ ಪ್ರೀತಿಸಿ ಮದುವೆಯಾಗುವುದು ತಪ್ಪಾ? ಅಂತರ್ಜಾತೀಯ ವಿವಾಹವಾದರೂ, ಪರಸ್ಪರ ಒಪ್ಪಿರುವ ಈ ಮದುವೆಯನ್ನು ಮಾನ್ಯ ಮಾಡಬೇಕೋ ಬೇಡವೋ? [ಲವ್ ಜಿಹಾದ್ ಹಿಂದೆ ಅಂತಾರಾಷ್ಟ್ರೀಯ ಕುತಂತ್ರ]

English summary
Should marriage between hindu bride and muslim groom be allowed or not? Both the families in Mandya have agreed for the marriage, but hindu organization has created issue by alleging that it is love jihad and muslims are forcing hindus to marry him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X