Hijab Case Judgement: ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ತೀರ್ಪಿನ ದಿನಾಂಕ ಮತ್ತು ಸಮಯ

ಬೆಂಗಳೂರು ಮಾರ್ಚ್ 15: ಹಿಜಾಬ್ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಮಂಗಳವಾರ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. ನಿಗದಿತ ಶಾಲಾ ಸಮವಸ್ತ್ರವಿರುವ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮುಸ್ಲಿಂ ಬಾಲಕಿಯರಿಗೆ ತರಗತಿಗಳಿಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ಕೋರಿದ ಪ್ರಕರಣವು ರಾಜ್ಯದ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು. ಹಿಜಾಬ್ ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ದಿನಾಂಕ ಮತ್ತು ಸಮಯ ಉಡುಪಿ ಜಿಲ್ಲೆಯ ಅರ್ಜಿದಾರ ಬಾಲಕಿಯರ ಪರ ಹಾಜರಾದ ವಕೀಲರ ಪ್ರಕಾರ, ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ಮಂಗಳವಾರದಂದು ಸರಣಿ ಸಂಖ್ಯೆ 1 ಎಂದು ಪಟ್ಟಿ ಮಾಡಲಾಗಿದೆ ಮತ್ತು ನ್ಯಾಯಾಲಯವು ಬೆಳಗ್ಗೆ 10.30 ರಿಂದ ತೀರ್ಪನ್ನು ಪ್ರಕಟಿಸಲಿದೆ.

ತರಗತಿಯ ಒಳಗೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಉಡುಪಿಯ ಹುಡುಗಿಯರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಝಿ ಅವರನ್ನೊಳಗೊಂಡ ಹೈಕೋರ್ಟ್‌ನ ಪೂರ್ಣ ಪೀಠವನ್ನು ಫೆಬ್ರವರಿ 9 ರಂದು ರಚಿಸಲಾಯಿತು.

ಜನವರಿ 1 ರಂದು, ಉಡುಪಿಯ ಕಾಲೇಜಿನ ಆರು ವಿದ್ಯಾರ್ಥಿನಿಯರು ಕರಾವಳಿ ಪಟ್ಟಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು, ಕಾಲೇಜು ಅಧಿಕಾರಿಗಳು ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸುವುದನ್ನು ವಿರೋಧಿಸಿದರು. ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿಯನ್ನು ಕೋರಿದರು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದರು. ಆದರೆ ಅದನ್ನು ತೆಗೆದು ತರಗತಿಗೆ ಪ್ರವೇಶಿಸುವಂತೆ ಹಿಂದೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಕಾಲೇಜಿನಲ್ಲಿರುವ ಸಮವಸ್ತ್ರವನ್ನೇ ಧರಿಸಬೇಕು ಎಂದು ಪ್ರತಿಭಟನೆಗಳಾದವು. ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಮಾತನಾಡಿ "ಕಳೆದ 35 ವರ್ಷಗಳಲ್ಲಿ ಯಾರೂ ಹಿಜಾಬ್ ಧರಿಸದೆ ವಿದ್ಯಾರ್ಥಿಗಳು ತರಗತಿಗೆ ಬರಬಾರದು ಎನ್ನುವ ನಿಯಮವನ್ನಾಗಲಿ ಸೂಚನೆಯನ್ನಾಗಲಿ ಸಂಸ್ಥೆ ನೀಡಿಲ್ಲ. ಆದರೆ ಈ ಬೇಡಿಕೆಯೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ" ಎಂದು ಹೇಳಿದರು.

Hijab Case Judgement: Date and Time of Karnataka High Court Verdict on the Case

ಬಳಿಕ ಹಿಜಾಬ್ ವರ್ಸಸ್ ಕೇಸರಿ ಸ್ಕಾರ್ಫ್ ಸಮಸ್ಯೆ ಕರ್ನಾಟಕದ ಹಲವು ಭಾಗಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹರಡಿತು. ರಾಜ್ಯ ಸರ್ಕಾರವು ಫೆಬ್ರವರಿ 9 ರಿಂದ ಫೆಬ್ರವರಿ 15 ರವರೆಗೆ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಮತ್ತು ಫೆಬ್ರವರಿ 9 ರಿಂದ ಫೆಬ್ರವರಿ 16 ರವರೆಗೆ ಪದವಿ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಿತು. ನಂತರ ಹುಡುಗಿಯರು ಪರಿಹಾರ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋದರು. ಫೆಬ್ರವರಿ 5 ರಂದು ವಿದ್ಯಾರ್ಥಿಗಳು ಶಾಂತಿ, ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಬಟ್ಟೆಯನ್ನು ಧರಿಸುವುದನ್ನು ನಿರ್ಬಂಧಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸಿದರು. ಹೈಕೋರ್ಟ್‌ನ ಪೂರ್ಣ ಪೀಠವು ಫೆಬ್ರವರಿ 10 ರಿಂದ ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸುತ್ತಿದೆ. ತನ್ನ ಮಧ್ಯಂತರ ಆದೇಶದಲ್ಲಿ, ಪೀಠವು ಆಂದೋಲನದಿಂದ ನಲುಗಿರುವ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ ಮತ್ತು ತಡೆಯಾಜ್ಞೆ ನೀಡಿದೆ. ಅಂತಿಮ ಆದೇಶವನ್ನು ಹೊರಬೀಳುವವರೆಗೆ ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಮತ್ತು ಕೇಸರಿ ಸ್ಕಾರ್ಫ್‌ಗಳನ್ನು ಧರಿಸುವಂತಿಲ್ಲ.

Recommended Video

      ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ: ಹೈಕೋರ್ಟ್ ಮಹತ್ವದ ತೀರ್ಪು | Oneindia Kannada

      v

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+