ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್

|
Google Oneindia Kannada News

ಬೆಂಗಳೂರು, ಆಗಸ್ಟ್‌ 5: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರ‍್ಯಾಂಕ್‌ಗಳನ್ನು ನಿರ್ಧರಿಸುವಾಗ ತಮ್ಮ ಪಿಯು ಅಂಕಗಳನ್ನು ಪರಿಗಣಿಸದಿರುವುದನ್ನು ವಿರೋಧಿಸಿ ಪುನರಾವರ್ತಿತ ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ ನಂತರ ಕರ್ನಾಟಕ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ನೋಟಿಸ್ ಜಾರಿ ಮಾಡಿ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದರು. ಈ ವರ್ಷ ಸುಮಾರು 24,000 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರು ತಮ್ಮ ಅಂಕಗಳನ್ನು ಅಂತಿಮ ಅಂಕಕ್ಕೆ ಸೇರಿಸದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆಇಎ ವಿರುದ್ಧ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪ್ರತಿಭಟನೆಕೆಇಎ ವಿರುದ್ಧ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪ್ರತಿಭಟನೆ

ಅರ್ಜಿದಾರರಾದ ಈಶ್ವರ್ ಮತ್ತು ಇತರರು ತಮ್ಮ ವಕೀಲ ಶತಾಬಿಶ್ ಶಿವಣ್ಣ ಅವರ ಮೂಲಕ ಅಂಕಗಳನ್ನು ಪರಿಗಣಿಸದಿರುವುದು ಸಿಇಟಿ-2006 ಪ್ರವೇಶ ನಿಯಮಗಳ ಉಲ್ಲಂಘನೆಯಾಗಿದ್ದು, ರ‍್ಯಾಂಕ್‌ಗಳಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಪುನರಾವರ್ತನೆಗೆ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದರು.

ಕೆಇಎ ನಿರ್ಧಾರ ತಾರತಮ್ಯದಿಂದ ಕೂಡಿದೆ ಎಂದು ವಿದ್ಯಾರ್ಥಿಗಳು ದೂರಿದ್ದರು. ಕೆಇಎ ಆಗಸ್ಟ್ 1, 2022 ರಂದು ಮುಂದಿನ ಸೂಚನೆ ಬರುವವರೆಗೆ ಪರಿಶೀಲನೆ ಪ್ರಕ್ರಿಯೆಯನ್ನು ಮುಂದೂಡುವ ಸೂಚನೆಯನ್ನು ನೀಡಿತ್ತು. ಆದರೆ, ಆಗಸ್ಟ್ 8 ರಿಂದ ಪ್ರಾರಂಭವಾಗುತ್ತದೆ ಎಂದು ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ.

ಮಧ್ಯಂತರ ಆದೇಶ ಕೋರಿಕೆ

ಮಧ್ಯಂತರ ಆದೇಶ ಕೋರಿಕೆ

ಸೋಮವಾರದಿಂದ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾದರೆ ನಂತರ ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್‌ಗಳನ್ನು ಸ್ವೀಕರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಶಿವಣ್ಣ ವಾದಿಸಿದರು. ಪಿಯು ಮತ್ತು ಸಿಇಟಿ ಅಂಕಗಳನ್ನು ಸಮಾನವಾಗಿ ಪರಿಗಣಿಸಿ ವೃತ್ತಿಪರ ಸೀಟುಗಳನ್ನು ಒದಗಿಸಲು ಮತ್ತು ಹಂಚಿಕೆ ಮಾಡಲು ಮಧ್ಯಂತರ ಆದೇಶವನ್ನು ಅವರು ಕೋರಿದ್ದರು. ಆಗಸ್ಟ್ 8ರವರೆಗೆ ಯಾವುದೇ ಪರಿಶೀಲನೆ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ನ್ಯಾಯಾಲಯ ಭರವಸೆ ನೀಡಿದೆ ಎಂದು ಅವರು ಹೇಳಿದರು.

ಸಿಇಟಿ: ಸೆಪ್ಟೆಂಬರ್ ಮೊದಲ ವಾರ ಕೌನ್ಸೆಲಿಂಗ್ ಪ್ರಾರಂಭಸಿಇಟಿ: ಸೆಪ್ಟೆಂಬರ್ ಮೊದಲ ವಾರ ಕೌನ್ಸೆಲಿಂಗ್ ಪ್ರಾರಂಭ

ಮಧ್ಯಂತರ ಆದೇಶ ನೀಡಿದರೆ ಪರಿಣಾಮ

ಮಧ್ಯಂತರ ಆದೇಶ ನೀಡಿದರೆ ಪರಿಣಾಮ

ಇದಕ್ಕೆ ಇದೇ ರೀತಿಯ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಿದರೆ ಪರಿಣಾಮ ಉಂಟಾಗುತ್ತದೆ ಮತ್ತು ಕೆಇಎ ತನ್ನ ವಾದವನ್ನು ಮಂಡಿಸಲಿದೆ ಎಂದು ಕೆಇಎ ಪರ ವಕೀಲ ಎನ್‌. ಕೆ. ರಮೇಶ್ ಹೇಳಿದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು, ಕಳೆದ ವರ್ಷ ಬೋರ್ಡ್ ಪರೀಕ್ಷೆಗಳನ್ನು ಬರೆಯದ ಕಾರಣ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಸಿಇಟಿ ಅಂಕಗಳ ಆಧಾರದ ಮೇಲೆ ಸಿಇಟಿ ಶ್ರೇಯಾಂಕಗಳನ್ನು ನೀಡಲಾಗುವುದು ಎಂದು ಸರ್ಕಾರ ಕಳೆದ ವರ್ಷ ನಿರ್ಧರಿಸಿದೆ ಎಂದು ಹೇಳಿದ್ದರು.

ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅಂಕ ಪರಿಗಣನೆ ಇಲ್ಲ

ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅಂಕ ಪರಿಗಣನೆ ಇಲ್ಲ

ಅವರಿಗೆ ಸಾಮಾನ್ಯ ಮೌಲ್ಯಮಾಪನದ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ. ಅದು ಮೆರಿಟ್ ಅನ್ನು ಆಧರಿಸಿಲ್ಲದ ಕಾರಣ, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಪುನರಾವರ್ತಿತ ವಿದ್ಯಾರ್ಥಿಯಾದ ನಿಕೇಶ್ ಮಾತಾನಾಡಿ, ಪಿಯು ಅಂಕಗಳನ್ನು ಅಂತಿಮ ಅಂಕದಲ್ಲಿ ಸೇರಿಸಲು ಕೆಇಎ ಅಧಿಕಾರಿಗಳು ನಮ್ಮ ಮನವಿಯನ್ನು ಪರಿಗಣಿಸಲಿಲ್ಲ. ಆದರೆ ಬದಲಿಗೆ ನ್ಯಾಯಾಲಯದ ಮೊರೆ ಹೋಗಲು ಹೇಳಿದರು ಎಂದು ಹೇಳಿದರು. ಈ ವರ್ಷ ನಿಕೇಶ್ ಅವರು ಗಳಿಸಿದ ಶ್ರೇಯಾಂಕ 66,000 ಆಗಿದೆ.

ಸಿಇಟಿ, ಪಿ.ಯು.ಸಿ ಅಂಕ ಸೇರಿಸಿ ಫಲಿತಾಂಶ ನೀಡಲಾಗುತ್ತಿತ್ತು

ಸಿಇಟಿ, ಪಿ.ಯು.ಸಿ ಅಂಕ ಸೇರಿಸಿ ಫಲಿತಾಂಶ ನೀಡಲಾಗುತ್ತಿತ್ತು

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಈ ವರ್ಷದ ಫಲಿತಾಂಶದಲ್ಲಿ ಕೇವಲ ಕೆಸಿಇಟಿ ಪರೀಕ್ಷೆಯ ಅಂಕವನ್ನು ಮಾತ್ರ ಪರಿಗಣಿಸುವ ಮೂಲಕ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಪುನರಾವರ್ತಿತ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದ್ದರು. ಪ್ರತಿ ವರ್ಷ ಸಿಇಟಿ ಅಂಕಗಳಗಳ ಜತೆಗೆ ಪಿಯುಸಿ ಅಂಕಗಳನ್ನು ಸೇರಿದಂತೆ ಫಲಿತಾಂಶ ಪ್ರಕಟ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಕೋವಿಡ್ ಹಿನ್ನೆಲೆ ಪಿಯುಸಿ ಪರೀಕ್ಷೆ ನಡೆದಿರಲಿಲ್ಲ. ಆಗ ಅನಿವಾರ್ಯ ಕಾರಣಗಳಿಂದ ಕೆಸಿಇಟಿ ಪರೀಕ್ಷೆ ಗಳ ಅಂಕವನ್ನು ಮಾತ್ರ ಪರಿಗಣಿಸಲಾಗಿತ್ತು. ಆಗ ಪರೀಕ್ಷೆ ಬರೆದು ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ವರ್ಷ ರಿಪಿಟರ್ಸ್ ಆಗಿದ್ದರು.

Recommended Video

ಹಿಂಬದಿ ಸೀಟ್‌ನಲ್ಲಿ ಪುರುಷರು ಓಡಾಡುವುದಕ್ಕೆ ಕೆಲವು ದಿನಗಳ ಕಾಲದವರೆಗೆ ನಿರ್ಬಂಧ | *Politics | Oneindia Kannada

English summary
The Karnataka High Court has issued a notice to the Karnataka Examinations Authority (KEA) after hearing repeated pleas of students protesting the non-consideration of their PU marks while deciding Common Entrance Test (CET) ranks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X