ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ: ಹೈಕೋರ್ಟ್ ಮಹತ್ವದ ಸೂಚನೆ

|
Google Oneindia Kannada News

ಬೆಂಗಳೂರು, ಜನವರಿ 12: ಧಾರ್ಮಿಕ ಕೇಂದ್ರಗಳಲ್ಲಿ ಆಂಪ್ಲಿಫೈಯರ್ಸ್ ಮತ್ತು ಧ್ವನಿವರ್ಧಕಗಳನ್ನು ಬಳಕೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ರಾಜ್ಯ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಶಬ್ಧ ಮಾಲಿನ್ಯ ತಡೆ ಕಾನೂನುಗಳು ಮತ್ತು ಸುಪ್ರೀಂಕೋರ್ಟ್‌ನ ಸೂಚನೆಗಳ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರನ್ನು ಒಳಗೊಂಡ ನ್ಯಾಯಪೀಠ, ಬೆಂಗಳೂರಿನ ನಿವಾಸಿ ಗಿರೀಶ್ ಭಾರದ್ವಾಜ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ನಿರ್ದೇಶನ ನೀಡಿದೆ.

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಶಿವಸೇನಾ ಆಗ್ರಹಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಶಿವಸೇನಾ ಆಗ್ರಹ

ಸಂವಿಧಾನದ 21ನೇ ವಿಧಿ ಅಡಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವುನ್ನು ಸರ್ಕಾರ ಖಾತರಿಪಡಿಸಬೇಕು ಎಂದ ಹೈಕೋರ್ಟ್, ಧಾರ್ಮಿಕ ಕೇಂದ್ರಗಳಲ್ಲಿ ಲೌಡ್‌ ಸ್ಪೀಕರ್‌ಗಳ ಅಕ್ರಮ ಬಳಕೆಯು ಪರಿಸರ ಸಂರಕ್ಷಣೆ ಕಾಯ್ದೆ, 1986ರ ಅಡಿಯಲ್ಲಿನ ಶಬ್ಧಮಾಲಿನ್ಯ (ತಡೆ ಮತ್ತು ನಿರ್ಬಂಧ) ನಿಯಮಗಳು, 2000ರ ಉಲ್ಲಂಘನೆಯಾಗಿದೆ ಎಂದು ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪರಿಗಣಿಸಿ ಅಭಿಪ್ರಾಯಪಟ್ಟಿತು. ಮುಂದೆ ಓದಿ.

ವಶಪಡಿಸಿಕೊಳ್ಳಲು ಸೂಚನೆ

ವಶಪಡಿಸಿಕೊಳ್ಳಲು ಸೂಚನೆ

2005ರಲ್ಲಿ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ಅನ್ವಯಿಸುವಂತೆ ನಿರ್ದೇಶನಗಳನ್ನು ಹೊರಡಿಸಿತ್ತು. ಆದರೆ ಕರ್ನಾಟಕ ಸರ್ಕಾರ ಮತ್ತು ಅದರ ಅಧಿಕಾರಿಗಳು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿದಾರರು ದೂರಿದ್ದರು. ಅನುಮತಿ ನೀಡಬಲ್ಲ ವ್ಯಾಪ್ತಿ ಮತ್ತು ಸಮಯದ ಹೊರತಾಗಿ ಸದ್ದು ಮೂಡಿಸುವಂತಹ ಲೌಡ್ ಸ್ಪೀಕರ್‌ಗಳು, ಆಂಪ್ಲಿಫೈಯರ್ ಹಾಗೂ ಇತರೆ ಸಾಧನಗಳು ಕಂಡುಬಂದರೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿಯಮಗಳನ್ನು ರೂಪಿಸಿ ಎಂದು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು ಎಂದು ಅರ್ಜಿದಾರರು ತಿಳಿಸಿದ್ದರು.

10 ಡಿಬಿ ಶಬ್ಧ ಮೀರುವಂತಿಲ್ಲ

10 ಡಿಬಿ ಶಬ್ಧ ಮೀರುವಂತಿಲ್ಲ

ಹಾಗೆಯೇ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸಾರ್ವಜನಿಕ ಸ್ಥಳಗಳ ವ್ಯಾಪ್ತಿಯಲ್ಲಿನ ಶಬ್ಧದ ಮಟ್ಟವನ್ನು ಖಾತರಿಪಡಿಸುವಂತೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ಲೌಡ್ ಸ್ಪೀಕರ್‌ಗಳು ಅಥವಾ ಸಾರ್ವಜನಿಕ ಭಾಷಣಗಳ ಸದ್ದು ಕಾನೂನಿನ ಪ್ರಕಾರ ಪ್ರದೇಶವೊಂದರಲ್ಲಿ 10 ಡಿಬಿ (ಎ) ಸಾಮಾನ್ಯ ಮಾನದಂಡದ ಶಬ್ಧ ಮಟ್ಟ ಮೀರಬಾರದು ಎಂದು ಅರ್ಜಿದಾರರು ತಿಳಿಸಿದರು.

ಇಸ್ಲಾಮ್ ಪ್ರಕಾರ ಆಜಾನ್ ಓಕೆ, ಲೌಡ್ ಸ್ಪೀಕರ್ ಯಾಕೆ?: ಹೈಕೋರ್ಟ್ಇಸ್ಲಾಮ್ ಪ್ರಕಾರ ಆಜಾನ್ ಓಕೆ, ಲೌಡ್ ಸ್ಪೀಕರ್ ಯಾಕೆ?: ಹೈಕೋರ್ಟ್

ರಾತ್ರಿ 10 ಗಂಟೆ ಬಳಿಕ ನಿಷೇಧ

ರಾತ್ರಿ 10 ಗಂಟೆ ಬಳಿಕ ನಿಷೇಧ

ಅಲ್ಲದೆ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ಯಾರೂ ಕೂಡ ಡ್ರಮ್, ಟಮ್ ಟಮ್ ಅಥವಾ ಯಾವುದೇ ದೊಡ್ಡ ಸದ್ದು ಮೂಡಿಸುವ ಉಪಕರಣಗಳನ್ನು ಬಾರಿಸುವಂತಿಲ್ಲ. ಹಾಗೆಯೇ ಆಂಪ್ಲಿಫೈಯರ್ ಉಪಯೋಗಿಸುವಂತಿಲ್ಲ ಎಂದು ಸಹ ಸುಪ್ರೀಂಕೋರ್ಟ್ ಆದೇಶದಲ್ಲಿ ಹೇಳಿದೆ.

ಗಾಳಿ ಗುಣಮಟ್ಟ ಮಾನದಂಡ

ಗಾಳಿ ಗುಣಮಟ್ಟ ಮಾನದಂಡ

ಈ ಆದೇಶಕ್ಕೆ ಸಾರ್ವಜನಿಕ ತುರ್ತು ಸನ್ನಿವೇಶಗಳ ವೇಳೆ ವಿನಾಯಿತಿ ಇದೆ. ಜತೆಗೆ ಅಧಿಕಾರಿಗಳು ಖಾಸಗಿ ಒಡೆತನದ ಶಬ್ಧ ವ್ಯವಸ್ಥೆಯ ಪ್ರಮಾಣವು ಆಯಾ ಪ್ರದೇಶಕ್ಕೆ ನಿಗದಿಪಡಿಸಿರುವ ನಿರ್ದಿಷ್ಟ ವಾಯು ಗುಣಮಟ್ಟದ ಮಾನದಂಡದ 5 ಡಿಬಿ (ಎ) ಗಿಂತ ಹೆಚ್ಚಿರಬಾರದು ಎಂದು ಕೋರ್ಟ್ ಹೇಳಿದ್ದನ್ನು ಅರ್ಜಿದಾರರು ಉಲ್ಲೇಖಿಸಿದ್ದರು.

English summary
Karnataka High Court on Monday has directed the state government to act against the illegal use of loudspeakers at religious places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X