ಹೈಕಮಾಂಡ್ ಕೊಟ್ಟ 2 ಆಯ್ಕೆಗಳಲ್ಲಿ ಸಿದ್ದರಾಮಯ್ಯ ಒಲವು ಯಾವುದಕ್ಕೆ?

Recommended Video

      ಕಾಂಗ್ರೆಸ್ ನಾಯಕರಿಗೆ ಅವಾಜ್ ಹಾಕಿದ ಎಂಟಿಬಿ ನಾಗರಾಜ್ | MTB Nagaraj

      ಬೆಂಗಳೂರು, ಸೆಪ್ಟೆಂಬರ್ 18: ಕಾಂಗ್ರೆಸ್ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆದುರಲ್ಲಿ ಇಟ್ಟ ಆಯ್ಕೆಗಳಲ್ಲಿ ಸಿದ್ದರಾಮಯ್ಯ ಯಾವುದರ ಬಗ್ಗೆ ಒಲವಿದೆ ಎನ್ನುವುದೇ ಕುತೂಹಲ ವಿಷಯವಾಗಿದೆ.

      ಒಂದು ವಿಪಕ್ಷನಾಯಕರಾಗಿ ಇಲ್ಲವೇ ಶಾಂಸಕಾಂಗ ಪಕ್ಷದ ನಾಯಕರಾಗಿಯೇ ಮುಂದುವರೆಯಿರಿ ಎಂದು ಹೈಕಮಾಂಡ್ ಸೂಚನೆ ನೀಡಿದ್ದು, ಈಗಾಗಲೇ ಶಾಂಸಕಾಂಗ ಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕರಾಗುವತ್ತ ಒಲವಿದೆ ಎನ್ನಲಾಗುತ್ತಿದೆ.

      ಹೀಗಾಗಲಿ ದೆಹಲಿಗೆ ತೆರಳಿ ಈ ಸ್ಥಾಕ್ಕೆ ಲಾಬಿ ನಡೆಸಿದ್ದರು. ರಾಜ್ಯ ಅಸ್ಸೆಂಬ್ಲಿಯಲ್ಲಿ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಹೆಸರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಬಹುತೇಕ ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ.

      ಇನ್ನೊಂದೆಡೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ವಿರುದ್ಧ ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದಾರೆ. ಹೈಕಮಾಂಡ್ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

       ವಿಪಕ್ಷ ನಾಯಕನ ಸ್ಥಾನದತ್ತ ಒಲವು

      ವಿಪಕ್ಷ ನಾಯಕನ ಸ್ಥಾನದತ್ತ ಒಲವು

      ಸಿದ್ದರಾಮಯ್ಯ ಅವರು ವಿಪಕ್ಷ ನಾಯಕನ ಸ್ಥಾನ ಗಿಟ್ಟಿಸಲು ಲಾಬಿ ಮಾಡಿದ್ದರು ಅವರು ಹಾಗಾಗಿ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ. ಇದೀಗ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದೆ.

       ಶಾಂಸಕಾಂಗ ಪಕ್ಷದ ನಾಯಕ?

      ಶಾಂಸಕಾಂಗ ಪಕ್ಷದ ನಾಯಕ?

      ಒಂದೊಮ್ಮೆ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕರ ಸ್ಥಾನ ಕೊಟ್ಟೇ ಬಿಟ್ಟಿತು ಅಂದುಕೊಳ್ಳಿ,ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಯಾರು ಅಲಂಕರಿಸುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ. ಒಂದೊಮ್ಮೆ ಡಿಕೆ ಶಿವಕುಮಾರ್ ಬಂಧನದಲ್ಲಿರದೇ ಇದ್ದರೆ ಆ ಸ್ಥಾನ ಅವರಿಗೇ ದೊರೆಯುತ್ತಿತ್ತು ಎನ್ನುವ ಮಾತುಗಳು ಕೂಡ ಕೇಳಿಬಂದಿವೆ.

       ಸಿದ್ದರಾಮಯ್ಯ ಮುಂದೆ ಎರಡೇ ಆಯ್ಕೆ ಒಂದಕ್ಕೆ ಅವಕಾಶ

      ಸಿದ್ದರಾಮಯ್ಯ ಮುಂದೆ ಎರಡೇ ಆಯ್ಕೆ ಒಂದಕ್ಕೆ ಅವಕಾಶ

      ಹೈ ಕಮಾಂಡ್ ನಿಲುವಿನಿಂದ ಗೊಂದಲಕ್ಕೊಳಗಾಗಿರುವ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನದ ಮೇಲೆ ಒಲವು ಹೊಂದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.ಚೆಂಡು ಸಿದ್ದರಾಮಯ್ಯರ ಅಂಗಳದಲ್ಲಿದ್ದು, ಎರಡು ಸ್ಥಾನಗಳಲ್ಲಿ ಒಂದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಯಾವುದೇ ಒಂದು ಹುದ್ದೆಯನ್ನು ಒಪ್ಪಿಕೊಂಡರೂ ಸಿದ್ದರಾಮಯ್ಯರಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಒಂದು ಸ್ಥಾನ ಒಪ್ಪಿಕೊಂಡರೆ ಮತ್ತೊಂದನ್ನು ಕಳೆದುಕೊಳ್ಳಲಿದ್ದಾರೆ.

       ಸಿದ್ದರಾಮಯ್ಯಗೆ ಹೈಕಮಾಂಡ್ ಖಡಕ್ ಸಂದೇಶ

      ಸಿದ್ದರಾಮಯ್ಯಗೆ ಹೈಕಮಾಂಡ್ ಖಡಕ್ ಸಂದೇಶ

      ಎರಡರಲ್ಲಿ ಒಂದಷ್ಟೆ ನಿಮ್ಮ ಪಾಲಿಗೆ ಸಿಗುವುದು. ಯಾವುದು ಬೇಕು ನೀವೇ ತೀರ್ಮಾನ ಮಾಡಿ ಎಂದು ಹೈಕಮಾಂಡ್ ನಿಂದ ಸಿದ್ದರಾಮಯ್ಯರಿಗೆ ಖಡಕ್ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ. ಶಾಸಕಾಂಗ ನಾಯಕ ಸ್ಥಾನ ಅಥವಾ ವಿರೋಧ ಪಕ್ಷ ನಾಯಕನ ಸ್ಥಾನ ಯಾವುದಾದರೂ ಒಂದು ಎಂದು ಆಯ್ಕೆ ಇಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+