ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್ ಹಂಗಾಮಿ ಸಿಜೆಯಾಗಿ ಹೆಚ್.ಜಿ.ರಮೇಶ್ ನೇಮಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಇಂದು ನಿವೃತ್ತರಾಗಿದ್ದು. ನ್ಯಾಯಮೂರ್ತಿ ಹೆಚ್‌.ಜಿ.ರಮೇಶ್‌ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಸೋಮವಾರ ಬೆಳಗ್ಗೆ ಕೊನೆಯ ಕಲಾಪದಲ್ಲಿ ಪಾಲ್ಗೊಂಡರು. ಹಿರಿಯ ವಕೀಲ ಉದಯ್ ಹೊಳ್ಳ ಅವರು ಮಖ್ಯ ನ್ಯಾಯಮೂರ್ತಿಗಳಿಗೆ ಶುಭಾಶಯಗಳನ್ನು ಕೋರಿದರು. ಕಲಾಪ ಮುಗಿಸಿದ ಬಳಿಕ ಅವರು ಮನೆಗೆ ತೆರಳಿದರು.

ಎಸ್‌.ಕೆ.ಮುಖರ್ಜಿ ಕರ್ನಾಟಕ ಹೈಕೋರ್ಟ್ ನೂತನ ಸಿಜೆಎಸ್‌.ಕೆ.ಮುಖರ್ಜಿ ಕರ್ನಾಟಕ ಹೈಕೋರ್ಟ್ ನೂತನ ಸಿಜೆ

HG Ramesh appointed as acting CJ of Karnataka High Court

ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಮತ್ತು ರಾಜ್ಯವ ವಕೀಲರ ಪರಿಷತ್ ಬೀಳ್ಕೊಡುಗೆ ನೀಡುವುದು ವಾಡಿಕೆ. ಆದರೆ, ಎಸ್.ಕೆ.ಮುಖರ್ಜಿ ಅವರಿಗೆ ಅಧಿಕೃತ ಬೀಳ್ಕೊಡುಗೆ ನೀಡಲಿಲ್ಲ. ಎಸ್.ಕೆ.ಮುಖರ್ಜಿ ಅವರ ಆಡಳಿತ ವೈಖರಿ ಖಂಡಿಸಿ ಕಳೆದ ವಾರ ವಕೀಲರು ಕೋರ್ಟ್ ಕಲಾಪ ಬಹಿಷ್ಕಾರ ಮಾಡಿದ್ದರು.

ಹೆಚ್.ಜಿ.ರಮೇಶ್ ನೇಮಕ : ನ್ಯಾಯಮೂರ್ತಿ ಹೆಚ್‌.ಜಿ.ರಮೇಶ್‌ ಅವರನ್ನು ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ. ಅಕ್ಟೋಬರ್ 10ರ ಮಂಗಳವಾರದಿಂದ ರಮೇಶ್ ಅವರು ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್.ಜಿ.ರಮೇಶ್ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾಗಿದ್ದಾರೆ.

English summary
Karnataka High Court Chief Justice S.K.Mukherjee retired on October 9, 2017. Justice Humchadakatte Gopalaiah Ramesh appointed as acting Chief Justice of High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X