ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ಗಾಗಿ ಪ್ರಯಾಣಿಕರಿಂದ ಕೆಲವು ಸಲಹೆಗಳು ಇಲ್ಲಿವೆ

|
Google Oneindia Kannada News

ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ಗಾಗಿ ಪ್ರಯಾಣಿಕರಿಂದ ಕೆಲವು ಸಲಹೆಗಳು ಬಂದಿವೆ. ಜಯಲಕ್ಷ್ಮೀಪುರಂದ ಅಶ್ವಿನಿ ರಂಜನ್ ಅವರು ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರ ಅನೂಕುಲಕ್ಕಾಗಿ ಹಾಗೂ ಪರಿಸರ ರಕ್ಷಣೆಗಾಗಿ ಇನ್ಯಾವೆಲ್ಲಾ ಕ್ರಮಗಳನ್ನು ಸುಲಭವಾಗಿ ಕೈಗೊಳ್ಳಬಹುದು ಎನ್ನುವುದಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ.

'ನಾನು ಅಕ್ಟೋಬರ್ 6 ರಂದು ಮೈಸೂರಿನಿಂದ ಬೆಂಗಳೂರಿಗೆ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸಿದೆ. ಬೆಂಗಳೂರು ನಿಲ್ದಾಣಕ್ಕೆ ಆಗಮಿಸಿದಾಗ, ಮೈಸೂರಿನಿಂದ ಪ್ರಯಾಣಿಕರು ಇಳಿಯುವ ಮೊದಲೇ ಚೆನ್ನೈಗೆ ಪ್ರಯಾಣಿಸುವ ಪ್ರಯಾಣಿಕರು ರೈಲು ಹತ್ತಲು ಪ್ರಯತ್ನಿಸುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ರೈಲಿನಲ್ಲಿ ಅವ್ಯವಸ್ಥೆಯನ್ನು ಸುಲಭವಾಗಿ ತಪ್ಪಿಸಬಹುದಾದ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು' ಎಂದು ಪ್ರಯಾಣಿಕ ಅಶ್ವಿನಿ ರಂಜನ್ ಸಲಹೆಗಳನ್ನು ನೀಡಿದ್ದಾರೆ.

ರೈಲ್ವೆಗೆ ಕೆಲವು ಸಲಹೆಗಳು ಇಲ್ಲಿವೆ:

1. ಬೆಂಗಳೂರಿನಿಂದ ರೈಲು ಹೊರಡುವುದು ಟ್ರಾಫಿಕ್ ಮೇಲೆ ಅವಲಂಬಿತವಾಗಿರುತ್ತದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಇದನ್ನು ಮೇಲ್ವಿಚಾರಣೆ ಮಾಡಿ, ದಟ್ಟಣೆ ಹೆಚ್ಚಾದಾಗ ನಿಯಂತ್ರಣ ಮಾಡಬಹುದು.

Here are some tips from travelers for Mysore-Chennai Shatabdi Express

2. ರೈಲು ವಿಭಾಗದ ಬಾಗಿಲು ಸ್ಪ್ರಿಂಗ್ ಚಾಲಿತವಾಗಿದೆ. ಅದಕ್ಕೆ ತಕ್ಕಮಟ್ಟಿಗೆ ಶಕ್ತಿಯ ಅಗತ್ಯವಿರುವುದರಿಂದ ಪ್ರಯಾಣಿಕರು ಅದನ್ನು ತೆರೆದಿಡಲು ಕಷ್ಟಪಡುತ್ತಾರೆ. ವಿಶೇಷವಾಗಿ, ಹಿರಿಯರು ಮತ್ತು ಮಕ್ಕಳಿರುವ ಕುಟುಂಬಗಳಿಗೆ ಇದು ಕಷ್ಟವಾಗುತ್ತದೆ. ಇದರಿಂದ ಬೆಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯುವುದು ನಿಧಾನವಾಗುತ್ತಿದೆ. ಬಾಗಿಲುಗಳು ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸಬೇಕು.

3. ಪ್ರತಿ ಬೋಗಿಗೆ ಎರಡು ಬಾಗಿಲುಗಳಿವೆ. ಒಂದು ಪ್ರವೇಶಕ್ಕಾಗಿ ಮತ್ತು ಇನ್ನೊಂದು ನಿರ್ಗಮನಕ್ಕಾಗಿ ಇರಬೇಕು. ಇದು ನಿಲ್ದಾಣಗಳಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನವನ್ನು ನಿಯಂತ್ರಿಸುತ್ತದೆ.

4. ಕುಡಿಯುವ ನೀರಿನ ಬಾಟಲಿಗಳನ್ನು ಎಲ್ಲಾ ಪ್ರಯಾಣಿಕರಿಗೆ ಅಗತ್ಯವಿರಲಿ ಅಥವಾ ಇಲ್ಲದಿರಲಿ ವಿತರಿಸಲಾಗುತ್ತದೆ. ಇದನ್ನು ಕೇಳುವವರಿಗೆ ಮಾತ್ರ ಏಕೆ ಕೊಡಬಾರದು. ಅಥವಾ ವಿಮಾನಗಳಲ್ಲಿರುವಂತೆ ಅಟೆಂಡೆಂಟ್‌ನಿಂದ ನೀರಿನ ಕಪ್‌ಗಳಲ್ಲಿ ಬಡಿಸುವುದೇ ಎಂದು ಯೋಚಿಸಿ. ಹೀಗೆ ಮಾಡುವುದರಿಂದ, ಶತಾಬ್ದಿ ರೈಲಿನ ಪ್ರತಿ ಟ್ರಿಪ್‌ನಲ್ಲಿ ಪರಿಸರ ವ್ಯವಸ್ಥೆಗೆ ಪ್ರವೇಶಿಸುವ ಸುಮಾರು ಐದು ಸಾವಿರ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ರತಿದಿನ ಕಡಿಮೆ ಮಾಡಬಹುದು.

Here are some tips from travelers for Mysore-Chennai Shatabdi Express

5. ರೈಲಿನಲ್ಲಿ ನನ್ನ ಸಹ-ಪ್ರಯಾಣಿಕ ಕಡಲೆಕಾಯಿಯನ್ನು ತಿನ್ನುತ್ತಿದ್ದನು. ಸಿಪ್ಪೆಯನ್ನು ಅನ್ನು ನೆಲದ ಮೇಲೆ ಬೀಳಿಸುತ್ತಿದ್ದನು. ಎಸೆಯಲು ಬೇರೆ ಸ್ಥಳವಿಲ್ಲ ಎಂದು ನಾನು ಅರಿತುಕೊಂಡೆ. ಪ್ರತಿ ಆಸನಕ್ಕೆ ಒದಗಿಸಲಾದ ಅಗ್ಗದ ಕಾಗದದ ಚೀಲ ಹಾಕುವುದರಿಂದ ಕಸವನ್ನು ಎಸೆಯುವುದನ್ನು ಕಡಿಮೆ ಮಾಡುತ್ತದೆ ಮತ್ತು ಶುಚಿತ್ವವನ್ನು ಸುಧಾರಿಸುತ್ತದೆ.

6. ಹೆಚ್ಚು ಶತಾಬ್ದಿ ರೀತಿಯ ರೈಲುಗಳಿದ್ದರೆ, ಬೆಂಗಳೂರು ಮತ್ತು ಮೈಸೂರು ನಡುವೆ ಕಾರ್ಯನಿರ್ವಹಿಸಿದರೆ, ಇದು ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಾತಾವರಣದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸುವತ್ತ ಅಧಿಕಾರಿಗಳು ನಿರಂತರವಾಗಿ ಗಮನ ಹರಿಸಿದರೆ ಅನೇಕ ಸಮಸ್ಯೆಗಳಿಗೆ ಸರಳ ಪರಿಹಾರಗಳಿವೆ. ಸುಧಾರಣೆಗೆ ಪ್ರತಿಕ್ರಿಯೆ ನೀಡಲು ಪ್ರಯಾಣಿಕರನ್ನು ಪ್ರೋತ್ಸಾಹಿಸಬಹುದು ಎಂದು ಜಯಲಕ್ಷ್ಮೀಪುರಂದ ಅಶ್ವಿನಿ ರಂಜನ್ ಬರೆದಿದ್ದಾರೆ.

Here are some tips from travelers for Mysore-Chennai Shatabdi Express

ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಸಾಧಿಸಿದ ಕೆಲವು ಮಹತ್ವದ ಮೈಲಿಗಲ್ಲುಗಳು ಈ ಕೆಳಗಿನಂತಿವೆ:

ಚೆನ್ನೈ - ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು 11 ಮೇ 1994 ರಂದು ಪರಿಚಯಿಸಲಾಯಿತು. ಇದು ದಕ್ಷಿಣ ರೈಲ್ವೆ ವಲಯದಲ್ಲಿ ಮೊದಲ (ISO 9001:2001) ಪ್ರಮಾಣೀಕೃತ ರೈಲು. ರೈಲನ್ನು 1 ಜುಲೈ 2009 ರಂದು ಅತ್ಯಾಧುನಿಕ ಲಿಂಕ್ ಹಾಫ್‌ಮನ್ ಬುಶ್ ಕೋಚ್​ನೊಂದಿಗೆ ಸೇರಿಸಲಾಯಿತು. ಇದು ಹೆಚ್​ಒಜಿ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಖರ್ಚನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಇದು ಶೇಕಡಾ 100 ರಷ್ಟು ಪ್ರಯಾಣಿಕರಿಗೆ ಸೌಕರ್ಯಗಳನ್ನು ನಿರ್ವಹಿಸಲು ಹೆಸರುವಾಸಿಯಾಗಿದೆ. ಶೇಕಡಾ 100 ರಷ್ಟು ಹೆಚ್​ಒಜಿ, ಶೇಕಡಾ 100 ರಷ್ಟು ಬಯೋಡೈಜೆಸ್ಟರ್ ಶೌಚಾಲಯ ವ್ಯವಸ್ಥೆಯನ್ನೂ ಹೊಂದಿದೆ.

ಗುಣಮಟ್ಟದ ವಿದ್ಯುತ್ ಸೌಕರ್ಯಗಳ ಜೊತೆಗೆ ಆಂತರಿಕ ಬೆಳಕನ್ನು ಒದಗಿಸುತ್ತದೆ. ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಎಲ್ಇಡಿ ದೀಪಗಳು ಹಾಗೂ ಇನ್ನಿತರ ವ್ಯವಸ್ಥೆಯಿಂದ ವಿದ್ಯುತ್ ಶಕ್ತಿಯ ಸಂರಕ್ಷಣೆ ಮಾಡಲಾಗುತ್ತದೆ. ಬ್ರೈಲ್ ಚಿಹ್ನೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ವೈಫೈ ವ್ಯವಸ್ಥೆಯನ್ನು ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್​ಪ್ರೆಸ್​ ಹೊಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಖ್ಯವಾಗಿ ಶೌಚಾಲಯಗಳಲ್ಲಿ ಸ್ವಯಂಚಾಲಿತ ಏರ್ ಫ್ರೆಶನರ್‌ಗಳು ಇದೆ. ಶತಾಬ್ದಿಯು ಆರಾಮದಾಯಕ ಆಸನಗಳನ್ನು ಹೊಂದಿದೆ. ಎಲ್ಲಾ ಚೆನ್ನೈ-ಮೈಸೂರು ಶತಾಬ್ದಿ ರೈಲುಗಳಿಗೆ ಪವರ್ ಕಾರ್‌ಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಬೋಗಿಗಳಲ್ಲಿ ತುರ್ತು ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುತ್ತದೆ.

English summary
Jayalakshmipuranda Ashwini Ranjan has given some suggestions on what steps can easily be taken for the welfare of passengers and environment protection in the Mysore-Chennai Shatabdi Express train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X