ಹೆಲ್ಮೆಟ್ ಕಡ್ಡಾಯ: ಮೈಸೂರು, ತುಮಕೂರು, ಬೆಳಗಾವಿಗೆ ವಿನಾಯಿತಿ

Subscribe to Oneindia Kannada

ಬೆಂಗಳೂರು, ಜನವರಿ, 22: ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ನೀತಿಗೆ ಕೊಂಚ ವಿನಾಯಿತಿ ತೋರಿಸಲಾಗಿದೆ. ಮೈಸೂರು, ತುಮಕೂರು, ಉಡುಪಿ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಫೆ.1ರಿಂದ ಕಟ್ಟುನಿಟ್ಟಿನ ಅನುಷ್ಠಾನ ಆಗಲಿದೆ.

ಸದ್ಯ ಬೆಂಗಳೂರು ನಗರ, ಬೀದರ್, ಯಾದಗಿರಿ, ಚಿಕ್ಕಮಗಳೂರು ಹೊರತುಪಡಿಸಿ ಬೇರೆಲ್ಲೂ ದಂಡ ವಿಧಿಸಲಿಲ್ಲ. ಬಾಗಲಕೋಟೆ, ಶಿವಮೊಗ್ಗ ಪೊಲೀಸರು ಹೆಲ್ಮೆಟ್ ಹಾಕಿದವರಿಗೆ ಹೂವು, ಸ್ವೀಟ್ ಕೊಟ್ಟು ಬೆನ್ನು ತಟ್ಟಿದರೆ, ಶಿರಸ್ತ್ರಾಣ ಧರಿಸದವರಿಗೆ ಕರಪತ್ರ ನೀಡಿ ಜಾಗೃತಿ ಮೂಡಿಸಿದರು. ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರಲ್ಲಿ ಹೆಲ್ಮೆಟ್ ಖರೀದಿ ಭರಾಟೆ ಜೋರಾಗಿತ್ತು.[ಹೆಲ್ಮೆಟ್ ಕಡ್ಡಾಯ ನಿಯಮಕ್ಕೆ ಬೆಂಗಳೂರು ಮೊದಲ ಚುಂಬನ]

helmets-compulsory-belagavi-tumakuru-gets-grace-period

ಶಿವಮೊಗ್ಗದಲ್ಲಿ ಹೆಲ್ಮೆಟ್ ಕಡ್ಡಾಯಕ್ಕೆ ಜ.25ರ ಗಡುವು ನೀಡಿದೆ. ಜ.26ರಿಂದ ಕಡ್ಡಾಯ ವಾಗಿ ದಂಡ ವಿಧಿಸಲಾಗುವುದೆಂದು ಎಸ್ ಪಿ ರವಿ ಚಿನ್ನಣ್ಣನವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಸಾರಿಗೆ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ತಂಡಗಳನ್ನು ರಚಿಸಿಕೊಂಡು ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.[ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಯಾ ಸರ್ಕಾರದ ಬೊಕ್ಕಸಕ್ಕೆ ಮೊದಲ ದಿನವೇ ಸಾಕಷ್ಟು ಆದಾಯ ತಂದಿತ್ತು. ಜನವರಿ 20 ರಂದು ಬೆಂಗಳೂರಿನಲ್ಲಿ ನಿಯಮ ಮುರಿದಿದ್ದಕ್ಕೆ 1520 ಜನರಿಗೆ ದಂಡ ವಿಧಿಸಿ. 1.5 ಲಕ್ಷ ರು. ಹಣ ಸಂಗ್ರಹಿಸಲಾಗಿದೆ ಎಂದು ವಿಭಾಗದ ಆಯುಕ್ತ ಎಂ ಎ ಸಲೀಂ ಮಾಹಿತಿ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The state government has issued a notification making helmets compulsory for pillion riders across the state. Mysuru, Belagavi and Tumakluru riders got grace period till February 1.
Please Wait while comments are loading...