ಹೆಣ್ಮಕ್ಳ ಹೆಲ್ಮೆಟ್ ಹಿಂಗಿದ್ರ ಹೆಂಗ್...? ಹೇಳ್ರಲ್ಲಾ..!

By: ಒನ್ ಇಂಡಿಯಾ ಕನ್ನಡ ಸಿಬ್ಬಂದಿ
Subscribe to Oneindia Kannada

ಒಂದು ಸೀರಿ ಅಥವಾ ಚೂಡಿದಾರ ತಗೊಂಡ್ರ, ಅದಕ್ಕೆ ಮ್ಯಾಚಿಂಗ್ ಬಳಿ, ಕೂದಲಿಗೆ ಮ್ಯಾಚಿಂಗ್ ಕ್ಲಿಪ್ಪು, ಕಿವಿಗೆ ಲಕಲಕ ಝುಮಕಿ ತೆಗೆದುಕೊಳ್ಳುವ ಜಾಯಮಾನ ಹೆಣ್ಮಕ್ಳದ್ದು.! ಮ್ಯಾಚಿಂಗೂ ಇರಬೇಕು, ಮಿಂಚಿಂಗೂ ಇರಬೇಕು. ಒಪ್ತೀರೇನ್ರೀ ಯವ್ವಾರ, ಅಕ್ಕಾರ, ಬಾಯರ?

ಮದ್ಲ ಈಗ ಮದವಿ ಸೀಸನ್. ರಿಸೆಪ್ಷನ್, ಮುಹೂರ್ತ ಅಂದ್ರ ಹೆಣ್ಮಕ್ಳು ರೆಡಿ ಆಗೋ ರೀತಿ ಕೇಳ್ಬೇಕಾ? ಗ್ರ್ಯಾಂಡ್ ಸೀರಿ, ಅದಕ್ಕೆ ಮ್ಯಾಲಿಂದ ಕೆಳಗಿನಮಟಾ ಎಲ್ಲಾ ಮ್ಯಾಚಿಂಗ್ ಮಾಡಕೊಂಡು ಡಿಫರೆಂಟ್ ಹೇರ್ ಸ್ಟೈಲ್ ಮಾಡಿಸಿಕೊಂತಾರ. ಇನ್ನೂ ಕೆಲವೊಬ್ರಿಗೆ ತಲಿ ತುಂಬ ಹೂ ಮುಡಕೊಂಡು ಮಿಂಚುವ ಖಯಾಲಿ. ಏನ್ ಮಾಡ್ತೀರಿ? [ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]

ಇಷ್ಟೆಲ್ಲಾ ಮಾಡಿಕೊಂಡು ಬಸ್ ನಲ್ಲಿ ಹೋದ್ರ ಲೆವೆಲ್ ಕಮ್ಮಿ ಆಕ್ಕೇತಿ, ಆಟೋದಲ್ಲೋ ಇಲ್ಲಾ ಓಲಾ ಕ್ಯಾಬ್ ನ್ಯಾಗೋ ಹತ್ತಿದ್ರ ಪರ್ಸ್ ಗೆ ಕತ್ರಿ ಖಾತ್ರಿ ನೋಡ್ರಿ. ಕಾರ್ ಇಲ್ದೆ ಇರೋ ಮಂದಿಗೆ ಹಜಬಂಡ್ ಬೈಕೇ ಗಟ್ಟಿ.!

ಬೈಕ್ ಹತ್ತಿದ್ಮ್ಯಾಲ ಹೆಲ್ಮೆಟ್ ಹಾಕೊಳ್ಬಾಕ ಬೇಕ್. ಹಂಗ ರೂಲ್ ಮಾಡಿಟ್ಟಾರ. ಹೆಲ್ಮೆಟ್ ಹಾಕೊಂಡ್ರ ಹೇರ್ ಸ್ಟೈಲ್ ಮತ್ತು ತಲೆ ತುಂಬಾ ಮುಡಕೊಂಡಿರೋ ಹೂ ಇರುತೈತಿ? ಮಾತ ಬರಾಬ್ಬರ್ ಐತಿಲ್ರಿ? [ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]

''ಅಯ್ಯೋ... ಅವರ ಮುಖಕ್ಕೆ ಉಳ್ಳಾಗಡ್ಡಿ ಉಜ್ಜಾ'' ಅಂತ ಬಾಯ್ ತುಂಬಾ ಬೈಕೊಳ್ಳೋ ಹೆಣ್ಮಕ್ಳಗಂತನ ಒಂದು ಸ್ಪೆಷಲ್ ಹೆಲ್ಮೆಟ್ ಇಲೈತಿ ನೋಡ್ರಿ...

Helmet mandatory; Check out Women's helmet in picture

{Image courtesy - Whatsapp}

ಬೈತಲೆ ಬೊಟ್ಟು, ಝುಮಕಿ, ಹೂವಿನಿಂದ ಅಲಂಕೃತವಾಗಿರುವ ಈ ಹೆಲ್ಮೆಟ್ ಹೆಣ್ಮಕ್ಕಳಿಗೆ ಮಾತ್ರ! ಹೆಲ್ಮೆಟ್ಟೂ ಹಾಕ್ಕೋಬೇಕು, ಹೇರ್ ಸ್ಟೈಲೂ ಕೆಡಬಾರದು ಅಂದ್ರ ಇದು ಪರ್ಫೆಕ್ಟ್ ಮ್ಯಾಚಿಂಗ್!

ಹೆಣ್ಮಕ್ಳು ಪಡತಿರೋ ಕಷ್ಟ ನೋಡಲಾರದ, ಯಾರೋ ಕಲಾವಿದರು (ಹೆಸರು ಗೊತ್ತಿಲ್ಲ) ಈ ಹೆಲ್ಮೆಟ್ ಸ್ಕೆಚ್ ತಯಾರಿ ಮಾಡ್ಯಾರ ನೋಡ್ರಿ. ಪುಣ್ಯಾತ್ಮ ನೂರು ವರ್ಷ ಬಾಳಲಿ. [ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

'ಛೇ...ನಮ್ಮ ಹೇರ್ ಸ್ಟೈಲ್ ಎಲ್ಲಾ ಹಾಳಾಗತ್ತಪ್ಪಾ' ಅಂತ ಮೂಗು ಮುರಿಯುವ ಹೆಣ್ಮಕ್ಕಳ ಹೆಲ್ಮೆಟ್ ಹಿಂಗಿದ್ರ ಹೆಂಗ್... ಹೇಳ್ರಲ್ಲಾ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Helmet is mandatory for pillion riders. Women Pillion riders are unhappy over this as many of them are beauty conscious. What if the Helmet is decorated with ornaments exclusively for Women? Check out the picture
Please Wait while comments are loading...