ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..

By ಒನ್ ಇಂಡಿಯಾ ಕನ್ನಡ ಓದುಗರು
|
Google Oneindia Kannada News

ಬೆಳಗ್ಗೆ 11 ಗಂಟೆ ಸಮಯ. ಆಫೀಸ್ ನಲ್ಲಿ ಮೊದಲೇ ಟೆನ್ಷನ್. ಕೆಲಸದಲ್ಲಿ ಬಿಜಿಯಿರುವಾಗ ಪತಿದೇವರ ಕಡೆಯಿಂದ ಫೋನ್ ಬಂತು. ''ಏನ್ ಗೊತ್ತಾ...ಹಿಂಬದಿ ಸವಾರರಿಗೂ ಹೆಲ್ಮೆಟ್ ಕಂಪಲ್ಸರಿ ಅಂತೆ. 12ನೇ ತಾರೀಖಿನಿಂದ ಹಾಕೋಬೇಕಂತೆ. ಯಾವಾಗ ತಗೊತೀಯಾ'' ಅಂತ ಕೇಳಿದ್ರು.

ಮೊದಲೇ ಟೆನ್ಷನ್ ನಲ್ಲಿದ್ದೆ. ಅದಕ್ಕೆ ಇನ್ನಷ್ಟು ಪಿತ್ತ ನೆತ್ತಿಗೇರಿ ಫೋನ್ ಕಟ್ ಮಾಡ್ದೆ. ಹಾಗೇ ಉರ್ಕೊಂಡು ಫೋನ್ ಇಡುವುದಕ್ಕೂ ಒಂದು ಕಾರಣ ಇದೆ. ಹೆಲ್ಮೆಟ್ ಖರೀದಿಸುವುದು ದೊಡ್ಡ ವಿಷಯವೇನಲ್ಲ. ಆದ್ರೆ, ನನ್ನ ಸಮಸ್ಯೆ ಬೇರೆ.

helmet

ನಾನು ಕೆಲಸ ಮಾಡುವುದು ಜಯನಗರದಲ್ಲಿ. ನಮ್ಮ ಮನೆ ಇರುವುದು ವಿಜಯನಗರದಲ್ಲಿ. ಬೆಳಗ್ಗೆ ಮನೆಯಿಂದ ನನಗೆ ಬಸ್ ಸ್ಟಾಪ್ ವರೆಗೂ ಡ್ರಾಪ್ ಸಿಕ್ಕರೆ, ಸಂಜೆ ಆಫೀಸ್ ನಿಂದ ಹೊರಟು ಅರ್ಧ ದಾರಿಗೆ ಬಂದ್ರೆ ಪತಿದೇವರು ಅಥವಾ ಅಪ್ಪ, ಇಬ್ಬರಲ್ಲಿ ಒಬ್ಬರು ಪಿಕ್ ಮಾಡ್ತಾರೆ.

ಪತಿ ಮಹಾಶಯರಿಗೆ ಲೇಟ್ ಆದರೆ ನಾನೇ ಸುಬ್ಬಣ್ಣ ಗಾರ್ಡನ್ ವರೆಗೂ ಬಸ್ ನಲ್ಲಿ ಹೋಗ್ಬೇಕು. ದೊಡ್ಡ ತಲೆನೋವು ಅಂದ್ರೆ ಇದೇ. ಜಯನಗರದಿಂದ ವಿಜಯನಗರ ರೂಟ್ ಬಸ್ಸೋ...ಅಬ್ಬಬ್ಬಾ, ನಿಲ್ಲೋಕ್ಕೂ ಜಾಗವಿರದಷ್ಟು ರಷ್ಷು. [ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]

ಬಸ್ ನಲ್ಲಿ...ಅಕ್ಕ ಪಕ್ಕ ತಳ್ಳುವುದರಲ್ಲಿ...(ಕೆಲವರ)ಬೆವರಿನ ವಾಸನೆ ನಡುವೆ...ನಾನು ನಿಲ್ಲುವುದೇ ಕಷ್ಟ. ಅದರಲ್ಲಿ ನನ್ನ ಬ್ಯಾಗ್ ಬೇರೆ. ಸೀಟ್ ಅಂತೂ ಸಿಗುವುದೇ ಇಲ್ಲ. ಕೂತಿರುವವರ ಕೈಯಲ್ಲಿ ಬ್ಯಾಗ್ ಕೊಡೋಣ ಅಂದ್ರೆ, ಕೆಲವರು ಮುಖವನ್ನೇ ನೋಡಲ್ಲ. ಫೋನ್ ನಲ್ಲೇ ಬಿಜಿ.

ಹೀಗಿರುವಾಗ ಒಂದು ತಾಸು ನಿಂತುಕೊಂಡು...ಅಲ್ಲಾಡ್ಕೊಂಡು..ತಳ್ಳಿಸಿಕೊಂಡು...ಕೆಲವರಿಂದ ಕೆಲವೊಮ್ಮೆ ಕಾರಣವೇ ಇಲ್ಲದೆ ಬೈಸಿಕೊಂಡು ಸುಬ್ಬಣ್ಣ ಗಾರ್ಡನ್ ಬಸ್ ಸ್ಟಾಪ್ ಗೆ ಬಂದು ಇಳಿದ್ರೆ, ಅಲ್ಲಿಂದ ಮನೆಗೆ ಬೈಕ್ ನಲ್ಲಿ ಐದು ನಿಮಿಷದ ದಾರಿ.

ದಿನಪೂರ್ತಿ ಬೈಕ್ ನಲ್ಲಿ ಇಬ್ಬರು ಓಡಾಡುತ್ತೇವೆ ಅಂದ್ರೆ ಹೆಲ್ಮೆಟ್ ಓಕೆ. ಈ ಐದು ನಿಮಿಷದ ದಾರಿಗೆ ನಾನು ಹೆಲ್ಮೆಟ್ ತಗೋಬೇಕಾ? ಆಯ್ತು...ತಗೊಂಡೆ ಅಂತ ಇಟ್ಕೊಳ್ಳಿ...ಬಸ್ ನಲ್ಲಿ ನಾನು ಬರುವುದೇ ಕಷ್ಟ. ಅದರಲ್ಲಿ ಬ್ಯಾಗ್ ಜೊತೆ ಹೆಲ್ಮೆಟ್ ಹಾಕೊಂಡು ನಿಂತ್ಕೊಳ್ಳಾ? ಜನ ತುಂಬಿತುಳುಕುವ ಬಸ್ ನಲ್ಲಿ ನಾನ್ಹೇಗೆ ಹೆಲ್ಮೆಟ್ ಹಿಡ್ಕೊಳ್ಳಿ....

ಒಂದ್ವೇಳೆ ಪತಿಯ ಬೈಕ್ ಹೆಲ್ಮೆಟ್ ಕೀಗೆ ನನ್ನ ಹೆಲ್ಮೆಟ್ ಹಾಕಿದ್ರೂ, ಅವರು ಲೇಟ್ ಆಗಿ ನಾನು ಅಪ್ಪನ ಜೊತೆ ಹೋಗೋ ಪರಿಸ್ಥಿತಿ ಬಂದ್ರೆ ಏನ್ ಮಾಡ್ಲಿ.? ಹೆಲ್ಮೆಟ್ ಇಲ್ಲಾಂದ್ರೆ ಫೈನ್ ಗ್ಯಾರೆಂಟಿ ಅಂತೆ.

ಮೊದಲೇ ಬರುವ ಸಂಬಳ ಅಷ್ಟಕಷ್ಟೆ. ಅದರಲ್ಲಿ ಇರುವ ಖರ್ಚಿನ ಜೊತೆ ಈ ಹೆಲ್ಮೆಟ್ ಬೇರೆ. ಮಿಸ್ ಆದ್ರೆ ಫೈನ್ ಎಕ್ಸ್ ಟ್ರಾ. ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು......

English summary
Helmet is mandatory for pillion riders from January 12th. One of the working woman have expressed her opinion on this. Read the article to know the problem of working woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X