ಮುಂದಿನ 4 ದಿನ ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಬೆಂಗಳೂರು, ಮೇ 31: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ 11 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಯಚೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹುಣಸೂರು, ಬೇಗೂರು, ಚಿತ್ರದುರ್ಗ, ಮೈಸೂರು, ಭರಮ್‌ಸಾಗರ, ಆನೇಕಲ್, ಕೊಳ್ಳೇಗಾಲ ಕುಶಾಲ್‌ನಗರ, ಕೋಲಾರ, ಪೆರಿಯಪಟ್ನಾ, ನುಗ್ಗೇಹಳ್ಳಿ, ದಾವಣಗೆರೆ, ಬಂಗಾರಪೇಟೆ, ತಿ ನರಸೀಪುರ, ಶ್ರವಣಬೆಳಗೊಳ, ರಾಯಲ್‌ಪಾಡು, ಬೆಂಗಳೂರು, ವಿರಾಜಪೇಟೆ, ತೊಂಡೆಬಾವಿ, ಕೃಷ್ಣರಾಜಸಾಗರ, ಬೇಲೂರು, ಕೊಟ್ಟಿಗೆಹಾರ, ಚಿಂತಾಮಣಿ, ಸಂತೆಬೆನ್ನೂರು, ಶಿರಾ, ಮಧುಗಿರಿಯಲ್ಲಿ ಶುಕ್ರವಾರ ಮಳೆಯಾಗಿತ್ತು.

Rain

ಬಳಿಕ ಶನಿವಾರ ಕೊಂಚ ಬಿಡುವು ಪಡೆದು ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ಅಲ್ಲಲ್ಲಿ ಜಿಮುರು ಬೀಳುತ್ತಿತ್ತು. ಬಳಿಕ ಸಂಜೆಯವರೆಗೂ ಬಿಸಿಲು ಇತ್ತು.

ಬಾಗಲಕೋಟೆ; ಮಕ್ಕಳನ್ನು ಕಾಪಾಡಿ ಸಿಡಿಲಿಗೆ ತಾನು ಬಲಿಯಾದ ತಾಯಿ
ಆದರೆ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ದೊರೆತಿದೆ.

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.3 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಕರ್ನಾಟಕದ ಕರಾವಳಿ ಭಾಗ, ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಕೂಡ ಹೆಚ್ಚು ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆ, ಬೆಳಗಾವಿ, ಉತ್ತರ ಒಳನಾಡು, ಹಾವೇರಿ, ವಿಜಯಪುರ, ದಕ್ಷಿಣ ಒಳನಾಡು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಇಂದು ಮತ್ತೆ ಜೂನ್ 1,2,3ರಂದು ಮಳೆ ಬೀಳಲಿದೆ.

ಜೂನ್ 1 ಕ್ಕೆ ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ಉತ್ತಮ ಮುಂಗಾರು ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+