ಬಾಗಲಕೋಟೆ; ಮಕ್ಕಳನ್ನು ಕಾಪಾಡಿ ಸಿಡಿಲಿಗೆ ತಾನು ಬಲಿಯಾದ ತಾಯಿ
ಬಾಗಲಕೋಟೆ, ಮೇ 30: ಬಾಗಲಕೋಟೆಯಲ್ಲಿ ಇಂದು ಸಂಜೆ ಭಾರೀ ಮಳೆ ಸುರಿದಿದ್ದು, ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ.
Recommended Video
ರೈತರಿಗೆ ಯಾವುದೇ ರೀತಿಯ ಮೋಸವಾಗದಂತೆ ನೋಡಿಕೊಳ್ಳಲು ಪಣ ತೊಟ್ಟಿರುವೆ - BC Patil | Farmers
ಮಹಿಳೆಯು ತನ್ನ ಇಬ್ಬರು ಮಕ್ಕಳೊಂದಿಗೆ ಹೊಲದಿಂದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಂತವ್ವ ಭೋವಿ (25) ಮೃತ ದುರ್ದೈವಿ. ಈಕೆಯ 1 ವರ್ಷ ಹಾಗೂ 4 ವರ್ಷದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಕ್ಕಳ ಜೊತೆ ಮನೆಗೆ ಬರುವ ವೇಳೆ ಗುಡುಗು ಸಹಿತ ಜೋರು ಮಳೆ ಸುರಿದಿದೆ. ಸಿಡಿಲು ಬಡಿದಾಗ ಆ ಶಬ್ದಕ್ಕೆ ತಾಯಿ ಮಕ್ಕಳನ್ನು ಆ ಬದಿ ನೂಕಿದ್ದಾಳೆ. ಆದರೆ ಸಿಡಿಲಿಗೆ ತಾನು ಬಲಿಯಾಗಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications