Heavy Rain: ಮುಂದಿನ 7 ದಿನ ಭರ್ಜರಿ ಮುಂಗಾರು ಮಳೆ!
ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಭರ್ಜರಿ ಮುಂಗಾರು ಮಳೆ ಅಪ್ಪಳಿಸಿದೆ. ಕರ್ನಾಟಕದ ಮೂಲೆ ಮೂಲೆಗೂ ಮಳೆಯ ಅಬ್ಬರ ತಲುಪಿದೆ. ಇದೇ ಸಮಯದಲ್ಲಿ ಮುಂದಿನ 7 ದಿನವು ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಲಿದೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಅಂದಹಾಗೆ ಕರ್ನಾಟಕ ರಾಜ್ಯ 2023ರಲ್ಲಿ ಮಳೆಯೇ ಇಲ್ಲದೆ ನರಳಿತ್ತು. ಆದರೆ ಈ ಬಾರಿಯ ಮಳೆಗಾಲ ಸಖತ್ ಆಗಿದೆ. ಯಾಕಂದ್ರೆ ಬಹುಬೇಗ ಮುಂಗಾರು ಮಳೆ ಮೋಡಗಳು ಕರ್ನಾಟಕ ರಾಜ್ಯಕ್ಕೆ ಎಂಟ್ರಿ ಕೊಟ್ಟಿವೆ. ಹಾಗೇ ಭರ್ಜರಿ ಮಳೆಯನ್ನ ಕೂಡ ಸುರಿಸುತ್ತಿವೆ. ಹೀಗಿದ್ದಾಗಲೇ ರೈತರ ಮೊಗದಲ್ಲಿ ಕೂಡ ಮಂದಹಾಸ ಮೂಡಿದೆ. ಹಾಗೇ ಮುಂದಿನ 7 ದಿನಗಳು ಪೂರ್ತಿ, ಹೀಗೆಯೇ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ!
ಈಗಾಗಲೇ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ಮಲೆನಾಡು & ಕರಾವಳಿ ಭಾಗದಲ್ಲಿ ಭಾರಿ ಭರ್ಜರಿ ಮಳೆ ಆರಂಭ ಆಗಿದೆ. ಮತ್ತೊಂದು ಕಡೆ ಕರ್ನಾಟಕದ ಬಹುತೇಕ ಕೆರೆಗಳು & ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ. ಹೀಗಿದ್ದಾಗಲೇ ಕರಾವಳಿ ಜಿಲ್ಲೆಗಳಾದ ಉಡುಪಿ & ದಕ್ಷಿಣ ಕನ್ನಡದಲ್ಲಿ ಭಾರಿ ಭರ್ಜರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಉತ್ತರ ಕನ್ನಡದ ಹಲವು ಪ್ರದೇಶಗಳಲ್ಲಿ ಭರ್ಜರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಗೆ ಭಾರಿ ಮಳೆಯ ಭಾಗ್ಯ ಸಿಗಲಿದೆ? ಮುಂದೆ ಓದಿ.
ಮಳೆ.. ಮಳೆ.. ಮಳೆ..
ಕಾವೇರಿ ತವರು ಕೊಡಗು ಜಿಲ್ಲೆ ಸೇರಿ ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು & ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು & ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಗೆ ಭರ್ಜರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಉತ್ತರ ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗಿದೆ? ಮುಂದೆ ಓದಿ.
ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ತೋರಿಸಲಿದ್ದು, ಉತ್ತರ ಕರ್ನಾಟಕದ ವಿಜಯಪುರ & ಕಲಬುರಗಿ, ರಾಯಚೂರು ಸೇರಿ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ & ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಹೀಗಾಗಿ ಭಾರಿ ಮಳೆಯ ಪರಿಣಾಮ ನಗರ ಪ್ರದೇಶಗಳಲ್ಲಿ ನೀರು ನಿಂತು ಸಾಕಷ್ಟು ಸಮಸ್ಯೆ ಆಗುವ ಸಾಧ್ಯತೆ ಇದ್ದು ಸ್ಥಳೀಯ ಆಡಳಿತಗಳು ಸಮಸ್ಯೆ ಸರಿ ಮಾಡಲು ಅಲರ್ಟ್ ಆಗಿವೆ.












Click it and Unblock the Notifications