Heavy Rain: ಕೇರಳದಲ್ಲಿ ಮರುಕಳಿಸಿದ ಭೀಕರ ದುರಂತ: ಭಾರೀ ಭೂಕುಸಿತ 7 ಜನ ಕಣ್ಮರೆ!, ಇಲ್ಲಿದೆ ವೈರಲ್ ವಿಡಿಯೋ

ತಮಿಳುನಾಡಿನ ವಯನಾಡು ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಭೀಕರ ಭೂಕುಸಿತದಲ್ಲಿ 7ಕ್ಕೂ ಹೆಚ್ಚು ಜನ ಕಣ್ಮರೆಯಾಗಿರುವ ಸಾಧ್ಯತೆ ಇದೆ. ಕೇರಳದ ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ಯೋಜನೆಯ ಕೆಲಸ ನಡೆಯುತ್ತಿರುವ ಕಲ್ಲಡಿಯ ಮೀನಾಕ್ಷಿ ಸೇತುವೆಯ ಬಳಿ ಭೂಕುಸಿತ ಸಂಭವಿಸಿದೆ. ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಂಗಿದ್ದ ಸ್ಥಳದಿಂದ ಸ್ಥಳೀಯ ನಿವಾಸಿಗಳು ಕನಿಷ್ಠ ಮೂರು ಜನರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಸುರಂಗ ಮಾರ್ಗವಾಗಿ ಸಾಗಿಸುವ ಕೆಲವು ವಾಹನಗಳು ಸಹ ಭೂಕುಸಿತದಲ್ಲಿ ಹಾನಿಗೊಳಗಾಗಿವೆ ಎಂದು ಪಿಟಿಐ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮುಖ್ಯಮಂತ್ರಿ ತುರ್ತು ಸಭೆ

ಭೂಕುಸಿತದ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ವಯನಾಡ್ ಉಸ್ತುವಾರಿ ಸಚಿವ ಟಿ. ಸಿದ್ದಿಕ್ ಅವರೊಂದಿಗೆ ತುರ್ತು ಸಭೆ ನಡೆಸಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ನಿರ್ದೇಶಿಸಿದ್ದಾರೆ. ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಮತ್ತು ಸಚಿವ ಸಿದ್ದಿಕ್ ಅವರನ್ನು ತಕ್ಷಣ ವಯನಾಡ್‌ಗೆ ಹೋಗಲು ಹೇಳಿದ್ದಾರೆ. ಈ ಘಟನೆ ನಡೆಯುವುದಕ್ಕೆ ಮುಖ್ಯ ಕಾರಣ ಸುರಂಗ ಯೋಜನೆಗೆ ಸಂಬಂಧಿಸಿದ "ಅವೈಜ್ಞಾನಿಕ ಡಂಪಿಂಗ್" ಪರಿಣಾಮ ಎಂದು ಕೃಷಿ ಸಚಿವ ಟಿ. ಸಿದ್ದಿಕ್ ಹೇಳಿದ್ದಾರೆ. ಈ ಹಿಂದೆ ಕೆಲವೊಂದು ಎಚ್ಚರಿಕೆಗಳನ್ನು ನೀಡಲಾಗಿದ್ದು, ಅವುಗಳನ್ನು ಪಾಲಿಸಿದ್ದರೆ ಈ ವಿಪತ್ತನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಇದು ನೈಸರ್ಗಿಕ ಭೂಕುಸಿತ ಅಲ್ಲ. ಇದು ಮಾನವ ನಿರ್ಮಿತ ಭೂಕುಸಿತ. ಅಗೆದ ಮಣ್ಣಿನ ಅವೈಜ್ಞಾನಿಕ ಡಂಪಿಂಗ್ ನಿಂದ ಈ ರೀತಿ ಸಂಭವಿಸಿದೆ ಎಂದಿದ್ದಾರೆ.

Heavy Rain

Heavy Rain: ಮಾನವ ನಿರ್ಮಿತ ಭೂಕುಸಿತ

ಇನ್ನು ಈಗ ಸಂಭವಿಸಿರುವುದು ಮಾನವ ನಿರ್ಮಿತ ಭೂಕುಸಿತ ಎಂದು ಕೇರಳ ಸರ್ಕಾರವು ಹೇಳಿದೆ. ಸುರಂಗ ಯೋಜನೆಯ ಭಾಗವಾಗಿ ತೆಗೆಯಲಾಗಿದ್ದ ಮಣ್ಣನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದ್ದರಿಂದ ಈ ಭೂಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಈಗಾಗಲೇ ಭೂಕುಸಿತ ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ಕ್ರಮಗಳನ್ನು ಅನುಸರಿಸಿರಲಿಲ್ಲ ಎಂದು ಹೇಳಲಾಗಿದೆ. ಇಲ್ಲಿಯವರೆಗೆ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಝಿಕ್ಕೋಡ್ ಮತ್ತು ವಯನಾಡಿನಿಂದ ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಹೇಳಲಾಗಿದೆ.

ವಯನಾಡ್ ಪ್ರದೇಶದಲ್ಲಿ ಕಟ್ಟೆಚ್ಚರ

ಇನ್ನು ಈ ಭಾಗದಲ್ಲಿ ಭೂಕುಸಿತ ಸಂಭವಿಸಿದ ಬೆನ್ನಲ್ಲೇ ವಾಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಅವರು ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಕೇರಳದ ವಯನಾಡ್ ಜಿಲ್ಲೆಯ ಮೀನಾಕ್ಷಿ ಪ್ರದೇಶದ ಬಳಿಯ ಅವಳಿ ಸುರಂಗ ಯೋಜನೆಯ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು, ಸುರಂಗ ಮಾರ್ಗದ ನಂತರ ಸಂಗ್ರಹವಾದ ಮಣ್ಣನ್ನು ಆ ಪ್ರದೇಶದಿಂದ ತೆಗೆದುಹಾಕುವವರೆಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಸೂಚನೆ ನೀಡಿದ್ದಾರೆ. ಕೊಂಕಣ ರೈಲ್ವೆ ನಿಗಮವು ಈ ಯೋಜನೆಯ ನಡೆಸುತ್ತಿದೆ. ಇದು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಟ್ಯೂಬ್ ಸುರಂಗಗಳ ನಿರ್ಮಾಣವನ್ನು ಭೋಪಾಲ್ ಮೂಲದ ದಿಲೀಪ್ ಬಿಲ್ಡ್‌ಕಾನ್‌ಗೆ ನೀಡಲಾಗಿದೆ, ಆದರೆ ಯೋಜನೆಯಲ್ಲಿನ ಸಂಪರ್ಕ ರಸ್ತೆಗಳು ಮತ್ತು ಸೇತುವೆಗಳನ್ನು ಕೋಲ್ಕತ್ತಾ ಮೂಲದ ರಾಯಲ್ ಕನ್‌ಸ್ಟ್ರಕ್ಟ್ ನಿರ್ಮಿಸಲಿದೆ. ಈ ಸುರಂಗವು ಕೋಝಿಕ್ಕೋಡ್‌ನ ಅನಕ್ಕಂಪೊಯಿಲ್ ಅನ್ನು ವಯನಾಡ್‌ನ ಮೆಪ್ಪಾಡಿಗೆ ಸಂಪರ್ಕಿಸುತ್ತದೆ.

ಸುರಂಗದ ಉದ್ದವನ್ನು 8.2 ಕಿ.ಮೀ. ಇದೆ. ಇದು ಭಾರತದ ಅತಿ ಉದ್ದದ ಸುರಂಗ ರಸ್ತೆಗಳಲ್ಲಿ ಒಂದಾಗಿದೆ. ಈ ಸುರಂಗ ಮಾರ್ಗದ ಅಂದಾಜು ವೆಚ್ಚ 2,400 ಕೋಟಿ ರೂ.ಗಳಾಗಿದ್ದು, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+