Rain News; ಈ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಮಳೆ
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರಣಬಿಸಿಲು ಜನರ ಬದುಕನ್ನು ಹೈರಾಣಾಗಿಸುತ್ತಿದ್ದರೆ, ಕೊಡಗು ಜಿಲ್ಲೆಯಲ್ಲಿ ಮಾತ್ರ ಅಲ್ಲಲ್ಲಿ ಮಳೆರಾಯ ದರ್ಶನ ನೀಡುತ್ತಿದ್ದು, ಕಾದ ಭೂಮಿಯನ್ನು ತಂಪಾಗಿಸುತ್ತಿದ್ದಾನೆ. ಸೋಮವಾರ ಕೂಡ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಜನರಲ್ಲಿ ಹರ್ಷ ತಂದಿದೆ.
ರಾಜ್ಯದಲ್ಲಿ 2024ರ ಮೊದಲ ಮಳೆಯಾಗಿದ್ದು ಕೂಡ ಕೊಡಗು ಜಿಲ್ಲೆಯಲ್ಲಿ. ಕಳೆದ ಎರಡು ವಾರಗಳ ಹಿಂದೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿತ್ತು, ಅದಾದ ಬಳಿಕ ಕಾಣೆಯಾಗಿದ್ದ ಮಳೆ ಮತ್ತೆ ದರ್ಶನ ನೀಡಿದೆ.

ಸೋಮವಾರ ಮಡಿಕೇರಿ ಜಿಲ್ಲೆಯ ನಾಪೋಕ್ಲು, ಬಲ್ಲಮಾವಟಿ, ಹಳೇ ತಾಲ್ಲೂಕು, ಯೆಮ್ಮೆಮಾಡು ಪ್ರದೇಶದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಈ ಭಾಗದಲ್ಲಿ ಮಳೆಯಾಗುತ್ತಿರುವುದು ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
#ಹಳೇತಾಲ್ಲೂಕುವಿನಲ್ಲಿ_ಸುರಿದ_ಮಳೆ 🌧🌧 pic.twitter.com/rU33XCsQeV
— Coorgthekashmirofkarnataka (@Coorgthekashmir) April 2, 2024
ಬೇಸಿಗೆ ನಡುವೆಯೂ ಮಳೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುಡುವ ಬಿಸಿಲಿನಿಂದ ಜನ ಕಂಗೆಟ್ಟಿದ್ದಾರೆ. ಮಳೆಯಾದರೆ ಸಾಕು ಎನ್ನವಂತೆ ಆಕಾಶದತ್ತ ನೋಡುವಂತಾಗಿದೆ. 36-40 ಡಿಗ್ರಿವರೆಗೆ ಹಲವು ಜಿಲ್ಲೆಗಳಲ್ಲಿ ತಾಪಮಾನವಿದ್ದು ಜನರನ್ನು ಹೈರಾಣಾಗಿಸಿದೆ. ಈಗಾಗಲೇ ಹಲವು ಜಿಲ್ಲೆಗಳು ವರ್ಷದ ಮೊದಲ ಮಳೆಯನ್ನು ಕಂಡಿವೆ.
#ನಾಪೋಕ್ಲುವಿನಲ್ಲಿ_ಗುಡುಗು_ಸಹಿತ_ಮಳೆ 🌧🌧 pic.twitter.com/cLW3TFYi3x
— Coorgthekashmirofkarnataka (@Coorgthekashmir) April 2, 2024
ಕಳೆದ 15 ದಿನಗಳಲ್ಲಿ ಮೈಸೂರು, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಆದರೆ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಗಳಲ್ಲಿ ಆಗಾಗ್ಗ ಮಳೆ ದರ್ಶನ ನೀಡುತ್ತಿದೆ.
ರಾಜ್ಯದಲ್ಲಿ ಮಳೆ ಯಾವಾಗ?
ಹಾಗಾದ್ರೆ ರಾಜ್ಯದಲ್ಲಿ ಮಳೆ ಯಾವಾಗ ಬರುತ್ತದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಮಾರ್ಚ್ ಎರಡನೇ ವಾರ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತಾದರೂ, ಏಪ್ರಿಲ್ 25ರವರೆಗೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಮಳೆಯಾಗುವುದು ಕಷ್ಟ ಎನ್ನಲಾಗಿದೆ.
ಆದರೆ ಜೂನ್ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಸೂಚನೆ ನೀಡಿದ್ದು, ಜನರಲ್ಲಿ ನೆಮ್ಮದಿ ಮೂಡಿಸಿದೆ. ಮಳೆಯಾದರೆ ಸಾಕಪ್ಪ ಎನ್ನುವಂತ ಪರಿಸ್ಥಿತಿ ಇದೆ.
ಬೆಂಗಳೂರಿಗೆ ಮಳೆ ಯಾವಾಗ?
ಕೂಲ್ ಕೂಲ್ ಆಗಿರುತ್ತಿದ್ದ ಬೆಂಗಳೂರು ಸದ್ಯ ಕಾದ ಕಾವಲಿಯಂತಾಗಿದೆ. ದಾಖಲೆಯ ತಾಪಮಾನವಿದ್ದು ಜನ ರಸ್ತೆಗಿಳಿಯಲೂ ಕಷ್ಟ ಪಡುವಂತಾಗಿದೆ. ಅದರ ಜೊತೆಗೆ ಹಲವು ಕಡೆಗಳಲ್ಲಿ ನೀರಿನ ಅಭಾವ ಕೂಡ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಕೂಡ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಏಪ್ರಿಲ್ 5ರವೆಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಶಾಖದ ಅಲೆ ಇರಲಿದ್ದು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ.












Click it and Unblock the Notifications