Rain Alert: ಮಳೆ.. ಮಳೆ.. 72 ಗಂಟೆಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ

ಮಳೆ ಆರ್ಭಟ ನಿಂತೇ ಹೋಯ್ತು, ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಕಾಲ ಶುರುವಾಗಿ ಒಂದಷ್ಟು ಚಳಿ ಕಡಿಮೆ ಆಗುತ್ತೆ ಅಂತಾ ಯೋಜನೆ ಹಾಕಿಕೊಂಡಿದ್ದ ಕನ್ನಡಿಗರಿಗೆ ಮತ್ತೆ ಶಾಕ್ ಸಿಕ್ಕಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಮತ್ತೊಮ್ಮೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಆಗಿದ್ದು ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ಮತ್ತೆ ಮಳೆಯ ವಾರ್ನಿಂಗ್ ಕೊಡಲಾಗಿದೆ. ಅದರಲ್ಲೂ 72 ಗಂಟೆಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಸಿಕ್ಕಿದೆ!

ಮಳೆ ಆರ್ಭಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ, ಬೆಂಗಳೂರು ಸೇರಿ ನಮ್ಮ ರಾಜ್ಯದ ಹಲವು ಜಿಲ್ಲೆಗಳಿಗೆ ಈಗಲೂ ಮಳೆಯ ಭಯ ಕಾಡುತ್ತಲೇ ಇದೆ. ಮಳೆ ಆರ್ಭಟ ಸೈಲೆಂಟ್ ಆಗುವ ಲಕ್ಷಣವೂ ಕೂಡ ಕಾಣುತ್ತಿಲ್ಲ. ನಿಮಗೆಲ್ಲ ಗೊತ್ತಿರುವಂತೆ, ಬಂಗಾಳ ಕೊಲ್ಲಿ ಭಾಗದಲ್ಲಿ ಪದೇ ಪದೇ ವಾಯುಭಾರ ಕುಸಿತ ಉಂಟಾಗ್ತಿದೆ. ವಾಯುಭಾರ ಕುಸಿತ & ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗುತ್ತಿದೆ. ಈಗಲೂ ಮುಂದಿನ 72 ಗಂಟೆಗಳಲ್ಲಿ ಭಾರಿ ಮಳೆಯ ವಾರ್ನಿಂಗ್ ಕೊಡಲಾಗಿದೆ.

Heavy Rain Karnataka And Bengaluru Still Have Chances To Receive Rain In January 2nd Week Of 2025

72 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ...

ಹೌದು, ಕನ್ನಡಿಗರು ಅಕಾಲಿಕ ಮಳೆ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ. ಮಳೆ ಯಾಕಪ್ಪಾ ಬರುತ್ತೆ? ಅಂತಾನೂ ಗೊಣಗುತ್ತಿದ್ದಾರೆ. ಹೀಗಿದ್ದಾಗಲೇ ಮತ್ತೊಮ್ಮೆ ಮಳೆಯ ಮೋಡಗಳು ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಕಡೆಗೆ ಓಡೋಡಿ ಬರುತ್ತಿವೆ. ಮಳೆಯ ಎಂಟ್ರಿ ಕಂಡು ಈಗ ಜನ ಕೂಡ ಬೆಚ್ಚಿ ಬಿದ್ದಿದ್ದಾರೆ.

ಗುರುವಾರ ಅಂದ್ರೆ ಇಂದು ಮಧ್ಯಾಹ್ನವೇ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣ ಆಗಿದೆ. ಬೆಂಗಳೂರಿನ ಗಡಿ ಪ್ರದೇಶ ಆನೇಕಲ್, ಅತ್ತಿಬೆಲೆ, ಸರ್ಜಾಪುರ ಸೇರಿದಂತೆ ಬೊಮ್ಮನಹಳ್ಳಿ ಸುತ್ತಮುತ್ತಲೂ ಮೋಡಗಳು ದಾಳಿ ಇಟ್ಟಿವೆ. ಹಾಗೇ ಮುಂದಿನ 72 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ, ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆಯ ವಾರ್ನಿಂಗ್ ಸಿಗುತ್ತಿದೆ. ಹಾಗಾದರೆ, ಆ ಜಿಲ್ಲೆಗಳು ಯಾವುವು?

ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಕತ್ತರಿ?

ಈಗಿನ ವಾತಾವರಣ ಗಮನಿಸಿದರೆ ನಾಳೆಯಿಂದಲೇ ಬೆಂಗಳೂರಿನ ಗಡಿ ಭಾಗವೂ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯ ಮೋಡಗಳು ದಾಳಿ ಇಡುವ ಮುನ್ಸೂಚನೆ ಇದೆ. ಹಾಗೇ ಶನಿವಾರದ ಬಳಿಕ ಮತ್ತು ಭಾನುವಾರ ಬೆಂಗಳೂರು ನಗರದಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ, ರಾಮನಗರಕ್ಕೂ ಮಳೆಯ ಕಾಟ ಅಪ್ಪಳಿಸಿದೆ. ಇನ್ನೇನು ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ತಯಾರಿ ನಡೆಸಿದ್ದ ಕನ್ನಡಿಗರಿಗೆ ಈ ಸುದ್ದಿ ಒಂದಷ್ಟು ಭಯ ತರಿಸಿದೆ. ಸುಗ್ಗಿ ಹಬ್ಬದ ಸಮಯದಲ್ಲೇ ಮತ್ತೆ ಮಳೆ ಕಾಟ ಶುರುವಾಗಿದೆ.

ಮಳೆ... ಮಳೆ... ಮಳೆ...

ಮನಸ್ಸಿಗೆ ಬಂದಂತೆ ಮಳೆ ಸುರಿಯುತ್ತಿರುವ ಕಾರಣ ಜನಗಳು ಕೂಡ ರೋಸಿ ಹೋಗಿದ್ದಾರೆ. ಕರ್ನಾಟಕದಲ್ಲಿ ಮಳೆ ಆರ್ಭಟ ಬಲು ಜೋರಾಗುತ್ತಿದ್ದು, ಮಳೆ ಕಾಟಕ್ಕೆ ಜನರು ಇದೀಗ ಟೆನ್ಷನ್ ಆಗಿದ್ದಾರೆ. ಮಳೆ... ಮಳೆ... ಮಳೆ... ಹೀಗೆ ಚಳಿಗಾಲ ಬಂದರೂ ಕರ್ನಾಟಕದ ಎಲ್ಲೆಲ್ಲೂ ಮಳೆ ಬಗ್ಗೆ ಚಿಂತೆ ಶುರುವಾಗಿದೆ. ಕನ್ನಡಿಗರ ರಾಜಧಾನಿ ಬೆಂಗಳೂರು ಹಿಡಿದು ಉತ್ತರ ಕರ್ನಾಟಕ ಟು ದಕ್ಷಿಣ ಕರ್ನಾಟಕ ಹಾಗೂ ಮಲೆನಾಡು & ಕರಾವಳಿ ಭಾಗದಲ್ಲೂ ಈ ರೀತಿಯಾಗಿ ಮಳೆಯು ಅಬ್ಬರಿಸುತ್ತಿದೆ. ಅದರಲ್ಲೂ ಮುಂದಿನ 72 ಗಂಟೆಗಳ ಕಾಲ ನಮ್ಮ ಕರ್ನಾಟಕದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಭಾರಿ ಮಳೆ ಗ್ಯಾರಂಟಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+