Rain Alert: ಮಳೆ ಅಬ್ಬರ ಶುರು, ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ!

ಕರ್ನಾಟಕದಲ್ಲಿ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ, ನಿಧಾನವಾಗಿ ಮಳೆ ಅಬ್ಬರ ಶುರು ಆಗಿದೆ. ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದ ಮಲೆನಾಡು ಭಾಗ & ಕರವಾಳಿ ಪ್ರದೇಶದಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಇದೇ ಸಮಯದಲ್ಲಿ ಕರ್ನಾಟಕದ ಬಯಲು ಸೀಮೆ ಭಾಗದಲ್ಲೂ ಮಳೆರಾಯನ ಆರ್ಭಟ ಶುರುವಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಬೀಳಲಿದೆ..? ಈಗ ಕರ್ನಾಟಕದ ಯಾವ ಯಾವ ಭಾಗದಲ್ಲಿ ಮಳೆ ಬಿದ್ದಿದೆ? ಬನ್ನಿ ತಿಳಿಯೋಣ.

ಹವಾಮಾನ ವೈಪರಿತ್ಯ ಹಾಗೂ ಮನುಷ್ಯ ಮಾಡಿದ ಹಲವು ತಪ್ಪುಗಳಿಂದ ಭೂಮಿ ಮೇಲೆ ಮಳೆ ಇಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಕರ್ನಾಟಕ ಕೂಡ ಹೀಗೆ ಮಳೆ ಇಲ್ಲದೆ, ಪರದಾಡುತ್ತಿದೆ. ಆದರೆ ಇಂತಹ ಸಮಯದಲ್ಲೇ ವರುಣ ದೇವ ಒಂದಷ್ಟು ಕರುಣೆ ತೋರಿಸಿ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಮೂಲಕ ಮಳೆಯಲ್ಲಿ ಕರ್ನಾಟಕದ ಜನರು ತೊಯ್ದು ಖುಷಿಯಾಗಿದ್ದಾರೆ. ಈಗಾಗಲೇ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಭರ್ಜರಿಯಾಗಿ ಅಬ್ಬರಿಸಿದೆ. ಇದೇ ಸಮಯದಲ್ಲಿ ಮಧ್ಯ ಕರ್ನಾಟಕದಲ್ಲಿ ಕೂಡ ಮಳೆರಾಯ ಆರ್ಭಟಿಸಿದ್ದಾನೆ! ಹಾಗಾದರೆ, ಕರ್ನಾಟಕದ ಯಾವ ಯಾವ ಭಾಗದಲ್ಲಿ ಮಳೆ ಬರುತ್ತಿದೆ? ಹಾಗೇ ಎಲ್ಲೆಲ್ಲಿ ಮಳೆ ಬರಲಿದೆ? ಮುಂದೆ ಓದಿ.

Heavy Rain Is Expected In These Districts Of Karnataka On 11Th Of April 2024

ಕರ್ನಾಟಕದಲ್ಲಿ ಮಳೆ ಅಬ್ಬರ ಶುರು!

ಮಳೆ ಇಲ್ಲದೆ ಇಡೀ ಕರ್ನಾಟಕ ನರಳಾಡಿ ಹೋಗಿದ್ದು, ಭಾಗಶಃ ಕನ್ನಡ ನಾಡಿನಲ್ಲಿ ಇದೀಗ ಮಳೆಯ ಆರ್ಭಟ ನಿಧಾನವಾಗಿ ಶುರುವಾಗುತ್ತಿದೆ. ಅದರಲ್ಲೂ ಯುಗಾದಿ ಹಬ್ಬದ ದಿನವೇ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಿತ್ತು. ಹಾಗೇ ಕೊಡಗು ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಯುಗಾದಿ ದಿನವೇ ಮಳೆಯ ಸಿಂಚನ ಆಗಿತ್ತು. ಈಗಲೂ ಮಧ್ಯ ಕರ್ನಾಟಕದಲ್ಲಿ ಮಳೆರಾಯ ತನ್ನ ಅಬ್ಬರ ತೋರಿಸಿದ್ದಾನೆ. ಬಾಳೆ ಹೊನ್ನೂರಿನಲ್ಲಿ ಭರ್ಜರಿ ಮಳೆ ಬಿದ್ದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ.

Heavy Rain Is Expected In These Districts Of Karnataka On 11Th Of April 2024

ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ!

ಏಪ್ರಿಲ್ 12 & ಏಪ್ರಿಲ್ 13 ರಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ ಜೊತೆಗೆ ಏಪ್ರಿಲ್​ 12ರ ನಂತರ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 13 ಹಾಗೂ 14 ಕ್ಕೆ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.

ಗುಡುಗು ಸಹಿತ ಭರ್ಜರಿ ಮಳೆ

ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ, ಮುಂದಿನ 48 ಗಂಟೆ ಅವಧಿಯ ಒಳಗಾಗಿ ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ ಎನ್ನಲಾಗಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಭರ್ಜರಿ ಮಳೆಯಾಗುತ್ತೆ ಅಂತಾ ಹೇಳುತ್ತಿದ್ದು ಆ ಪ್ರಕಾರ ಗುಡುಗು ಸಹಿತ ಭರ್ಜರಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ಸಿಗುತ್ತಿದ್ದು, ಜನ ಕೂಡ ಬಿಸಿಲಿನ ಬೇಗೆಯಿಂದ ಒಂದಷ್ಟು ರಿಲೀಫ್ ಅನ್ನ ಪಡೆಯುತ್ತಿದ್ದಾರೆ. ಆದರೆ ಈಗ ಬೆಂಗಳೂರಿನ ನೆಲವನ್ನು ತಂಪು ಮಾಡಲು ಮಳೆರಾಯ ಎಂಟ್ರಿ ಕೊಡಬೇಕಿದೆ.

ಕನ್ನಡಿಗರಿಗೆ ಮಳೆಯಿಂದ ಖುಷಿ!

ಮನುಷ್ಯನ ಅತಿಯಾದ ಆಸೆ, ಪ್ರಕೃತಿ ಮೇಲೆ ಮನುಷ್ಯ ನಡೆಸಿರುವ ನಿರಂತರ ದೌರ್ಜನ್ಯದಿಂದ ಭೂಮಿ ಮೇಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಕಾರಣಕ್ಕೆ ಮಳೆ ಸರಿಯಾಗಿ ಬರುತ್ತಿಲ್ಲ ಎಂಬುದು ವಿಜ್ಞಾನಿಗಳ ವಾದ. ಇದೆಲ್ಲಾ ಏನೇ ಇರಲಿ ನಮಗೆ ಮಳೆ ಬರಬೇಕು ಅಷ್ಟೇ ಅಂತಿದ್ದ ಜನರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಕರ್ನಾಟಕದಲ್ಲಿ ಈಗ ಭರ್ಜರಿ ಮಳೆ ಆರಂಭವಾಗಿದೆ ಹಾಗೇ ಇನ್ನೂ ಹಲವು ಪ್ರದೇಶದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮತ್ತೊಂದ್ಕಡೆ, ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲೇ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಇಷ್ಟು ದಿನ ಭೀಕರ ಬಿಸಿಲಿಗೆ ಬೆಚ್ಚಿಬಿದ್ದಿದ್ದ ಜನ ಇದೀಗ ಒಂದಷ್ಟು ನಿಟ್ಟುಸಿರು ಬಿಟ್ಟು ಕೂತಿದ್ದಾರೆ.

ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ ಮಳೆ

ಈಗಾಗಲೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆಯ ಅಬ್ಬರ ಶುರುವಾಗಿದ್ದು ಜನರು ಖುಷ್ ಆಗಿದ್ದಾರೆ. ಅದರಲ್ಲೂ ನೀರನ್ನೇ ಕಾಣದೆ ಒಣಗಿ ಹೋಗಿದ್ದ ಪ್ರದೇಶಗಳಲ್ಲಿ, ಭಾರಿ ಮಳೆಯ ಪರಿಣಾಮ ನೆಲವೂ ಕೆಸರಾಗಿದೆ. ಇನ್ನೇನು ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಗೆ ಸಿಲುಕಿ ನರಳಿದ್ದ ಅನ್ನದಾತ ರೈತರು ಮಳೆ ಹಿನ್ನೆಲೆ ಒಂದಷ್ಟು ನಿಟ್ಟುಸಿರನ್ನೂ ಬಿಟ್ಟಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಬರುವ ನಿರೀಕ್ಷೆ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಜನ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ಸರಿ ಹೋಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+