ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ: ಕೆರೂರಿನಲ್ಲಿ ಭಾರೀ ವರ್ಷಧಾರೆ

ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ. ಬಾಗಲಕೋಟೆಯ ಕೆರೂರಿನಲ್ಲಿ 12 ಸೆಂ.ಮೀ. ಮಳೆ.

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಹಲವಾರು ಕಡೆ ಮಳೆರಾಯ ತನ್ನ ರುದ್ರ ನರ್ತನ ತೋರಿದ್ದಾನೆ. ಇತರ ಪರಿಣಾಮವಾಗಿ, ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ಅತಿ ಹೆಚ್ಚು (12 ಸೆಂ.ಮೀ.) ಮಳೆಯಾಗಿದ್ದು ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ಅಲ್ಲಲ್ಲಿ ಮಳೆ, ಸಿಡಿಲಿಗೆ ಯುವಕ ಬಲಿ, ಜಲಾಶಯದ ನೀರಿನ ಮಟ್ಟಅಲ್ಲಲ್ಲಿ ಮಳೆ, ಸಿಡಿಲಿಗೆ ಯುವಕ ಬಲಿ, ಜಲಾಶಯದ ನೀರಿನ ಮಟ್ಟ

ಬಾಗಲಕೋಟೆ ಮಾತ್ರವಲ್ಲದೆ, ಕಲಬುರಗಿ, ಬೆಳಗಾವಿ, ಗದಗ, ವಿಜಯಪುರ, ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಆ ಭಾಗದ ಜನರು ತಲ್ಲಣಿಸುವಂತಾಗಿದೆ.

Heavy rain in Uttara Kannada where as Keruru gets heavy rainfall

ಇದರೊಂದಿಗೆ ದಕ್ಷಿಣ ಒಳನಾಡಿನಲ್ಲೂ ಕೆಲವಾರು ಕಡೆ ಭಾರೀ ಮಳೆಯಾಗಿ, ತೊಂದರೆಯುಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕದ ಕೆಲವು ಕಡೆ ದಾಖಲಾಗಿರುವ ಮಳೆಯ ಪ್ರಮಾಣ ಹೀಗಿದೆ.

ಜಿಲ್ಲೆ ಮಳೆಯ ಪ್ರಮಾಣ ಸೆಂ.ಮೀ.ಗಳಲ್ಲಿ
ಚಿತ್ತಾಪುರ (ಕಲಬುರಗಿ ಜಿಲ್ಲೆ) 11
ಕಲಬುರಗಿ, ಸೇಡಂ, ಯೆದ್ರಾಮಿ (ಕಲಬುರಗಿ) ತಲಾ 10
ಗೋಕಾಕ್ (ಬೆಳಗಾವಿ) 7
ಕೆಂಭಾವಿ (ಯಾದಗಿರಿ) 7
ಬಾಗಲಕೋಟೆ, ಲೋಕಪುರ (ಬಾಗಲಕೋಟೆ ಜಿಲ್ಲೆ) ತಲಾ 6
ಮುದ್ಗಲ್ (ರಾಯಚೂರು) 6
ಚಿಂಚೋಳಿ, ನೆಲೋಗಿ, ಸುಲೇಪೇಟೆ (ಕಲಬುರಗಿ ಜಿಲ್ಲೆ) 6
ಮಂಕಿ (ಉತ್ತರ ಕನ್ನಡ ಜಿಲ್ಲೆ) 5
ಶಿರಹಟ್ಟಿ (ಗದಗ ಜಿಲ್ಲೆ) 5
ಬೀದರ್, ಕಲ್ಗಿ (ಕಲಬುರಗಿ ಜಿಲ್ಲೆ) 5
ವಿಜಯಪುರ 5
ಕಮಲಾಪುರ (ಕಲಬುರಗಿ ಜಿಲ್ಲೆ) 5
ಮಂಗಳೂರು ಏರ್ ಪೋರ್ಟ್ (ಮಂಗಳೂರು ಜಿಲ್ಲೆ) 6
ಧರ್ಮಸ್ಥಳ (ದಕ್ಷಿಣ ಕನ್ನಡ) 5
English summary
Heavy rain in Uttara Kannada has disturbed the normal life in almost all parts of Uttara Kannada with last 24 hours. Bagalkote's Keruru get most of the rainfall measuring about 12 cm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X