ರಾಮನಗರದಲ್ಲಿ ಮಳೆರಾಯನ ಆರ್ಭಟಕ್ಕೆ ಬೆಳೆ, ಶಾಲೆ ಜಲಾವೃತ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಅಕ್ಟೋಬರ್ 10. ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಈ ಬಾರಿ ಬರವನ್ನ ನೀಗಿಸುವ ಮಟ್ಟಿಗೆ ಮಳೆರಾಯ ಕರುಣೆ ತೋರಿದ್ದಾನೆ.

ಕಳೆದ 15 ದಿನಗಳಿಂದ ಎಡೆಬಿಡದೇ ಪ್ರತಿನಿತ್ಯ ಜಿಲ್ಲೆಯಾದ್ಯಂತ ಮಳೆ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಚನ್ನಪಟ್ಟಣದ ರಾಂಪುರ ಗ್ರಾಮದ ತಾವರೆ ಕಟ್ಟೆಯ ಕಾಲುವೆ ಒಡೆದ ಪರಿಣಾಮ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ರಾಗಿ, ಭತ್ತ, ತೆಂಗಿನ ತೋಟ ನಾಶವಾಗಿದೆ.

Heavy Rain in Ramanagara district, created havoc

ಸುಮಾರು 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಬಾಳೆ, ಭತ್ತ ಅಲ್ಲದೇ ಟೊಮೆಟೊ ಬೆಳೆಗಳೆಲ್ಲಾ ಮಳೆ ನೀರಿಗೆ ಜಲಾವೃತವಾಗಿದೆ.

ಇನ್ನೂ ರಾತ್ರಿಯ ಜೋರು ಮಳೆಗೆ ಪಟ್ಟಣದ ಎಲೆಕೆರೆಯ ಗೆಂಡೆಮಡು ಸರ್ಕಾರಿ ಶಾಲೆಯೇ ಜಲಾವೃತವಾಗಿದೆ. ಬೆಳಿಗ್ಗೆ ಶಾಲೆಗೆ ತೆರಳಲು ಮಕ್ಕಳು ನೀರನ್ನು ದಾಟಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.

ಕೊನೆಗೆ ಶಾಲಾ ಕೊಠಡಿಗೆ ತೆರಳಲಾಗದೇ ಮಕ್ಕಳೆಲ್ಲಾ ವಾಪಸ್ ಮನೆಗೆ ತೆರಳಿದರು. ಕಳೆದ 15 ದಿನಗಳಲ್ಲಿ ಮೂರನೇ ಬಾರಿ ಶಾಲೆ ಜಲಾವೃತ್ತಗೊಂಡಿದೆ.

ಆದ್ರೂ ಕೂಡಾ ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಿಲ್ಲವೆಂದು ಸಾರ್ವಜನಿಕರು ಮತ್ತು ಶಾಲೆಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heavy rain in Ramanagara district creates havoc. A village called Rampur in the district has faced many problems by rain.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ