ಅರಬ್ಬಿ ಸಮುದ್ರಕ್ಕೆ ಗಜ ಲಗ್ಗೆ: ಕರ್ನಾಟಕದಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ

Recommended Video

      ಇಂದಿನಿಂದ 2 ದಿನಗಳು ಕರ್ನಾಟಕದಲ್ಲಿ ಬಾರಿ ಮಳೆ | Oneindia Kannada

      ಬೆಂಗಳೂರು, ನವೆಂಬರ್ 19: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಗಜ ಚಂಡ ಮಾರುತ ತಮಿಳುನಾಡಿನಲ್ಲಿ 45ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಈಗ ಅರಬ್ಬಿ ಸಮುದ್ರದ ಆಗ್ನೇಯ ಭಾಗಕ್ಕೆ ಹೋಗಿದ್ದು, ಒತ್ತಡದ ವಾತಾವರಣೆ ನಿರ್ಮಾಣವಾಗಿದೆ.

      ನವೆಂಬರ್ 20 ಹಾಗೂ 21ರಂದು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಉತ್ತರ ಒಳನಾಡು ಸೇರಿದಂತೆ ಪಶ್ಚಿಮ ಭಾಗದಲ್ಲಿ ಗಾಳಿಮಳೆಯಾಗಿದೆ.

      ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಅಲ್ಲಲ್ಲಿ ಮಳೆಯಾಗುತ್ತಿದ್ದು, ಆ ಭಾಗದ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

      ವಾಯುಭಾರ ಕುಸಿತ

      ವಾಯುಭಾರ ಕುಸಿತ

      ಈ ನಡುವೆ ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರ ಒಂದಾಗುವ ಜಾಗದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ಇದರಿಂದಾಗಿ ನವೆಂಬರ್ 22ರವರೆಗೂ ಮಳೆಯಾಗುವ ಸಾಧ್ಯತೆ ಇದೆ.

      ಎಲ್ಲೆಲ್ಲಿ ಎಷ್ಟು ಮಳೆ

      ಎಲ್ಲೆಲ್ಲಿ ಎಷ್ಟು ಮಳೆ

      ತುಮಕೂರಿನ ನೇರಳೆಗುಡ್ಡದಲ್ಲಿ 32 ಮಿ.ಮೀ ಮಳೆಯಾಗಿದೆ. ಕಲಬುರಗಿ ಗಡಿ ಲಿಂಗನಹಳ್ಳಿಯಲ್ಲಿ 26 ಮಿ.ಮೀ, ಚಿತ್ರದುರ್ಗದಲ್ಲಿ 21ಮಿ.ಮೀ ಮಳೆಯಾಗಿದೆ.

      ಶಿವಮೊಗ್ಗದಲ್ಲಿ 300 ಕುರಿ ಸಾವು

      ಶಿವಮೊಗ್ಗದಲ್ಲಿ 300 ಕುರಿ ಸಾವು

      ಸೊರಬ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು 300ಕ್ಕೂ ಹೆಚ್ಚು ಕುರಿಗಳು ಭಾನುವಾರ ಮೃತಪಟ್ಟಿವೆ. ಮೃತಪಟ್ಟ ಉರಿಗಳು ಚಿಕ್ಕೋಡಿ ತಾಲೂಕಿನ ಕಡತ್ ಲಾತ್ ಗ್ರಾಮದ ಕಲ್ಲಪ್ಪ ಎಂಬುವವರಿಗೆ ಸೇರಿದವು ಎಂದು ತಿಳಿದುಬಂದಿದೆ.

      ಸಿಡಿಲು ಬಡಿದು ಮಹಿಳೆ ಸಾವು

      ಸಿಡಿಲು ಬಡಿದು ಮಹಿಳೆ ಸಾವು

      ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಲಕ್ಷ್ಮವ್ವ ಹೇಮ್ಲಪ್ಪ ಲಮಾಣಿ ಮೃತ ಮಹಿಳೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+