ಮಳೆ.. ಮಳೆ.. ಭರ್ಜರಿ ಮಳೆ ಗ್ಯಾರಂಟಿ: ಯಾವ ಜಿಲ್ಲೆಗಳಲ್ಲಿ ತಿಳಿಯಿರಿ!

ಕರ್ನಾಟಕದ ಕರಾವಳಿ ಜಿಲ್ಲೆಗಳೂ ಸೇರಿದಂತೆ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕಳೆದ ವಾರದಿಂದ ಮಳೆ ನಿಂತು ಹೋಗಿದ್ದು, ಇದೀಗ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಇನ್ನು 1 ದಿನದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಲಿದೆ.

ಹೌದು, ಏಪ್ರಿಲ್ 2ನೇ ವಾರದಲ್ಲಿ ಅಬ್ಬರಿಸಿದ್ದ ಮಳೆರಾಯ ಮತ್ತೆ ತೆಪ್ಪಗಾಗಿದ್ದ. ಯಾಕಪ್ಪಾ ನೀನು ಸೈಲೆಂಟ್ ಆದೆ ಮಳೆರಾಯ? ಅಂತಾ, ಜನರು ಪ್ರಶ್ನೆ ಕೇಳಲು ಶುರು ಮಾಡಿದ್ದರು. ಹೀಗಾಗಿ ಅಲರ್ಟ್ ಆಗಿರುವ ಮಳೆರಾಯ ಮತ್ತೆ ಕನ್ನಡಿಗರ ಮೇಲೆ ಪ್ರೀತಿ ತೋರಿಸಲು ಈಗ ಸಜ್ಜಾಗಿದ್ದು ಭರ್ಜರಿಯಾಗಿ ಮಳೆ ಸುರಿಯುವುದು ಪಕ್ಕಾ ಆಗಿದೆ. 2024ರ ಮೇ ಮೊದಲನೇ ವಾರದಲ್ಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುವುದು ಗ್ಯಾರಂಟಿಯು ಆಗಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬೀಳಿದೆ? ಮುಂದೆ ಓದಿ.

Heavy Rain Alert In Karnataka From May 1st 2024

ಭರ್ಜರಿ ಮಳೆ ಗ್ಯಾರಂಟಿ ಗುರೂ!

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಬೆಂಗಳೂರು ನಗರ, ವಿಜಯಪುರ, ಹಾಸನ, ಚಿತ್ರದುರ್ಗ, ರಾಯಚೂರು ಮತ್ತು ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ರಾಮನಗರ ಹಾಗೂ ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ ಎನ್ನಲಾಗಿದೆ. ಮಳೆ ಏಪ್ರಿಲ್ 30 ರಿಂದ ಮಳೆ ಅಬ್ಬರ ಶುರು ಆಗಲಿದ್ದು, ಮೇ 3ರ ತನಕ ಈ ಭಾಗಗಳಲ್ಲಿ ಭಾರಿ ಮಳೆ ಮುನ್ಸೂಚನೆ ನಿಡಲಾಗಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಾ? ಮುಂದೆ ಓದಿ.

ರಾಜಧಾನಿ ಬೆಂಗಳೂರಲ್ಲಿ ಯಾವಾಗ ಮಳೆ?

ಈಗಿನ ಲೆಕ್ಕಾಚಾರ ನೋಡುತ್ತಿದ್ದರೆ ಬೆಂಗಳೂರಿನಲ್ಲಿ ಮೇ ಮೊದಲನೇ ವಾರ ಮಳೆಯಾಗಲಿದೆ. ಬಿಸಿ ಗಾಳಿಯ ಭೀಕರ ಆರ್ಭಟಕ್ಕೆ ಬೆಂಗಳೂರಿನ ಜನರು ನಲುಗಿದ್ದು, ಮುಂದಿನ ವಾರದಲ್ಲಿಯೇ ಜನರಿಗೆ ರಿಲೀಫ್ ಸಿಗಲಿದೆ. ಅದರಲ್ಲೂ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಮಳೆ ಸಮಸ್ಯೆ ದೊಡ್ಡ ತಲೆನೋವು ತರಿಸುತ್ತಿದ್ದು, ಭರ್ಜರಿಯಾಗಿ ಮಳೆ ಬಂದರೆ ಸಮಸ್ಯೆ ಒಂದಷ್ಟು ಸರಿಯಾಗಲಿದೆ. ಅಕಸ್ಮಾತ್ ಮೇ ಮೊದಲನೇ ವಾರವೂ ಬೆಂಗಳೂರಿನಲ್ಲಿ ಮಳೆ ಕೈಕೊಟ್ಟರೆ ಪರಿಸ್ಥಿತಿ ಇನ್ನೂ ಕೈಮೀರಿ ಹೋಗಲಿದೆ. ಹೀಗಾಗಿ ಜನರು ಕೂಡ ಭರ್ಜರಿ ಮಳೆ ಬೀಳಲಿ ದೇವರೆ ಅಂತಾ ಈಗ ಪ್ರಾರ್ಥನೆ ಮಾಡುತ್ತಿದ್ದಾರೆ. ಹೀಗಾಗಿ ಜನರ ಪ್ರಾರ್ಥನೆ ಫಲಿಸುವ ಸಾಧ್ಯತೆ ದಟ್ಟವಾಗಿದೆ.

ಮುಂಗಾರು ಮಳೆ ಕೈಕೊಟ್ಟ ಕಾರಣಕ್ಕೆ, 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನರೂ ಪರದಾಡಿದ್ದಾರೆ. ಇದೇ ಕಾರಣಕ್ಕೆ, ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024 ಬೇಸಿಗೆ ಆರಂಭಕ್ಕೆ ಮೊದಲೇ ಹೊಸ ತಲೆನೋವು ಶುರುವಾಗಿತ್ತು. ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಪರದಾಡುತ್ತಿದೆ. ಆದರೆ ಇದೇ ಸಮಯದಲ್ಲಿ ವರುಣ ದೇವ ಕನ್ನಡಿಗರಿಗೆ ಗುಡ್ ನ್ಯೂಸ್ ಕೊಡಲು ಈಗ ಸಜ್ಜಾಗಿದ್ದಾನೆ, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ.

ಈ ಜಿಲ್ಲೆಗಳಲ್ಲಿ ಭಾರಿ ಮಳೆ!

ನಮ್ಮ ರಾಜ್ಯದ ಹಲವು ಪ್ರದೇಶಗಳಲ್ಲಿ ಟ್ಯಾಂಕರ್ ಮಾಫಿಯಾ ಶುರುವಾಗಿದೆ. ಹೀಗಿದ್ದಾಗ ಜನ ಕೂಡ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ, ಸಾವಿರ ಸಾವಿರ ಖರ್ಚು ಮಾಡುತ್ತಿದ್ದಾರೆ. ಶ್ರೀಮಂತರ ಬಳಿ ಹಣ ಇದೆ, ಆದರೆ ಬಡವರು ಏನು ಮಾಡಬೇಕು? ಒಂದು ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ಹಣ ಕೊಡಬೇಕಾ? ಅಂತಾ ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಮಳೆರಾಯ ಏಪ್ರಿಲ್ 2ನೇ ವಾರ ಕನ್ನಡಗರ ಮೇಲೆ ಕರುಣೆ ತೋರಿಸಿ, ಮಳೆ ಬರಿಸಿದ್ದ. ಆದ್ರೆ ಇದೀಗ ಮಳೆಯ ಅಬ್ಬರ ಕಡಿಮೆ ಆಗಿದ್ದು ಮೇ ಮೊದಲ ವಾರದಲ್ಲಿ ಮಳೆ ಮತ್ತೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಎನ್ನಲಾಗಿದೆ.

ಮೊಲದೇ ಹೇಳಿದಂತೆ ಮುಂಗಾರು ಮಳೆ ಕೈಕೊಟ್ಟ ಕಾರಣಕ್ಕೆ, 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನರೂ ಪರದಾಡಿದ್ದಾರೆ. ಈ ಕಾರಣಕ್ಕೆ ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024 ಬೇಸಿಗೆ ಆರಂಭಕ್ಕೆ ಮೊದಲೇ ಹೊಸ ತಲೆನೋವು ಶುರುವಾಗಿತ್ತು. ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಪರದಾಡುತ್ತಿದೆ. ಆದರೆ ಇದೇ ಸಮಯದಲ್ಲಿ ವರುಣ ದೇವ ಕನ್ನಡಿಗರಿಗೆ ಗುಡ್ ನ್ಯೂಸ್ ಕೊಡಲು ಈಗ ಸಜ್ಜಾಗಿದ್ದಾನೆ, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ.

ಪ್ರಕೃತಿ ಮೇಲೆ ಮನುಷ್ಯರ ದೌರ್ಜನ್ಯ

ಮನುಷ್ಯ ಮಾಡಿದ ತಪ್ಪಿಗೆ ಹಾಗೂ ಪ್ರಕೃತಿ ಮೇಲೆ ಎಸಗುತ್ತಿರುವ ದೌರ್ಜನ್ಯಕ್ಕೆ ಈಗ ಭಾರಿ ದೊಡ್ಡ ಎಡವಟ್ಟುಗಳೇ ನಡೆಯುತ್ತಿವೆ. ಅದನ್ನ ಸರಿ ಮಾಡಲು ಕೂಡ ಆಗುತ್ತಿಲ್ಲ. ಅದರ ಪರಿಣಾಮ ಎನ್ನುವಂತೆ ಮಳೆ ಬೀಳಬೇಕಾದ ಜಾಗದಲ್ಲಿ ಮಳೆ ಬರುತ್ತಿಲ್ಲ, ಇದರ ಬದಲಾಗಿ ಮರುಭೂಮಿ ಸೇರಿದಂತೆ ಮಳೆಯ ಅಗತ್ಯತೆ ಇಲ್ಲದ ಜಾಗದಲ್ಲಿ, ಭರ್ಜರಿ ಮಳೆ ಬರುತ್ತಿದೆ. ಅದ್ರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಸ್ಥಿತಿ ತುಂಬಾ ಕಠಿಣವಾಗಿದ್ದು, ಮಳೆ ಬೇಕೆ ಬೇಕು ಎಂಬ ವಾತಾವರಣ ಇದೆ. ಹೀಗಿದ್ದಾಗ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ ಸಿಗುತ್ತಿದೆ.

ಎಸಿ ಸಿಟಿ ಬೆಂಗಳೂರಲ್ಲಿ ನರಳಾಟ!

ಬೆಂಗಳೂರು ಅಂದ್ರೆ 20 ವರ್ಷಗಳ ಹಿಂದೆ ಎಸಿ ಸಿಟಿ ಎಂಬ ಹೆಸರು ಇತ್ತು. ಯಾಕಂದ್ರೆ ಈ ನಮ್ಮ ಬೆಂಗಳೂರು ಬೇಸಿಗೆ ಸಮಯದಲ್ಲೂ ಕೂಲ್ ಕೂಲ್ ಆಗಿ ಇರೋದು. ಆದರೆ ಏನ್ ಮಾಡೋದು, ಬೆಂಗಳೂರು ಈಗ ಕಾಂಕ್ರಿಟ್ ಕಾಡು ಆಗಿದೆ. ಬೆಂಗಳೂರಿನಲ್ಲಿ ಇದ್ದ ಗಿಡ & ಮರ ಎಲ್ಲಾ ನಾಶವಾಗಿ ಹೋಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಅಂತರ್ಜಲ ಕೂಡ ಕುಸಿದು ಹೋಗಿ, ಕೋಟ್ಯಂತರ ಜನ ನರಳುತ್ತಿದ್ದಾರೆ. ಈ ನಡುವೆ ಮಳೆ ಬೇಕು, ಮಳೆ ಬೇಕು ಅಂತ ದೇವರ ಮೊರೆ ಹೋಗುವ ಪರಿಸ್ಥಿತಿ ಕೂಡ ಬಂದಿದೆ. ಆದ್ರೂ ವರುಣ ದೇವ ಮಾತ್ರ ನಮ್ಮ ಜನರ ಮಾತಿಗೆ ಬೆಲೆ ಕೊಟ್ಟು ಮಳೆ ಸುರಿಸುತ್ತಿಲ್ಲ. ಆದರೆ ಮೇ ತಿಂಗಳಲ್ಲಿ ಭರ್ಜರಿ ಮಳೆ, ಸುರಿಯುವ ಮುನ್ಸೂಚನೆ ಇದೆ.

ಮಳೆ ನೀರು ಸಂಗ್ರಹ ಮಾಡಿ

ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲದ ಆರಂಭಕ್ಕೆ ಇನ್ನು ಕೇವಲ 1 ತಿಂಗಳು ಬಾಕಿ ಇದೆ. ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಈಗಲಾದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.

ಮಳೆ.. ಮಳೆ.. ಮಳೆ!

ನಿನ್ನೆ ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಬಂದ ಭಾರಿ ಮಳೆ ನೆಮ್ಮದಿ ನೀಡಿತ್ತು. ಅದರಲ್ಲೂ ಇಷ್ಟು ದಿನ ಮಳೆ ಇಲ್ಲದೆ ಪರದಾಡಿದ್ದ ನಮ್ಮ ಜನರಿಗೆ, ಭರ್ಜರಿ ಮಳೆಯ ರಸದೌತಣ ಸಿಕ್ಕಿತು. ನೋಡ ನೋಡುತ್ತಲೇ ಇಡೀ ಬೆಂಗಳೂರಿಗೆ ಮುತ್ತಿಗೆ ಹಾಕಿದ ಮಳೆ ಮೋಡಗಳು, ಗಂಟೆಗಟ್ಟಲೇ ಮಳೆ ಸುರಿಸಿದವು. ಈ ಮೂಲಕ ಭರ್ಜರಿ ಮಳೆ ಕಂಡು, ಜನರು ಕೂಡ ಕುಣಿದಾಡಿದರು. ಹಾಗೇ ಮಂಡ್ಯ & ಮೈಸೂರು ಭಾಗದಲ್ಲಿ ಕೂಡ ಭಾರಿ ಮಳೆ ತಂಪು ಹರಿಸಿದೆ. ಕಾವೇರಿಯ ಮಡಿಲಿನಲ್ಲಿ ಇದ್ದರೂ ನೀರು ಇಲ್ಲದೆ ನರಳಿದ್ದರು ಕನ್ನಡಿಗರು. ಅದ್ರಲ್ಲೂ ಹಳೇ ಮೈಸೂರು ಭಾಗದಲ್ಲಿ ಕೂಡ ಕಾವೇರಿ ನದಿ ಬತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿಯೇ, ಮಳೆ ಬರಲಿ ಅಂತಾ ಜನರು ಪ್ರಾರ್ಥನೆ ಮಾಡುತ್ತಿದ್ದರು.

ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...

ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.

ಮುಂಗಾರು ಮಳೆ ಅಬ್ಬರ ಶುರು!

ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+