Rain Alert: ಮಳೆ.. ಮಳೆ.. ಮುಂಗಾರು ಮಳೆ.. 72 ಗಂಟೆ ಕಾಲ ರಣಮಳೆ ಎಚ್ಚರಿಕೆ!
ಮಳೆ ಆರ್ಭಟ ಸ್ವಲ್ಪ ಕೂಡ ಕಡಿಮೆ ಆಗಿಲ್ಲ, ಕರ್ನಾಟಕ ರಾಜ್ಯದಲ್ಲಿ ಮಳೆರಾಯ ತನ್ನ ಅಸಲಿ ರೂಪ ತೋರಿಸಿ, ಭಯಪಡಿಸಿದ್ದಾನೆ. 2023 ರಲ್ಲಿ ಭೀಕರ ಬರ ಎದುರಾಗುವಂತೆ ಮಾಡಿದ್ದ ಮಳೆ ಮೋಡಗಳು, ಈ ಬಾರಿ ಅಂದ್ರೆ 2024 ರಲ್ಲಿ ಭೀಕರ ಪ್ರವಾಹ & ನೆರೆ ಪರಿಸ್ಥಿತಿ ನಿರ್ಮಾಣ ಮಾಡಿ ಭಯಪಡಿಸಿವೆ. ಇಂತಹ ಸಮಯದಲ್ಲೇ ಮತ್ತೆ ಮುಂದಿನ 72 ಗಂಟೆ ಕಾಲ ಅಂದ್ರೆ 3 ದಿನ ಭಾರಿ ರಣಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದರೆ, ಯಾವೆಲ್ಲಾ ಜಿಲ್ಲೆಗಳ ಜನರು ಮಳೆ ಕಾರಣಕ್ಕೆ ಪರದಾಡುವ ಪರಿಸ್ಥಿತಿ ಬರಲಿದೆ? ಮುಂದೆ ಓದಿ.
ಮುಂಗಾರು ಮಳೆ ಮುಕ್ತಾಯ ಆಗಲು ಇನ್ನೂ 2 ತಿಂಗಳು ಬಾಕಿ ಇದೆ. ಅಂದರೆ 2024ರ ಸೆಪ್ಟಂಬರ್ ತಿಂಗಳ ತನಕ ಮುಂಗಾರು ಮಳೆ ಸುರಿಯಲಿದೆ. ಹೀಗಿದ್ದರೂ ಮಳೆರಾಯ ಕೇವಲ 2 ತಿಂಗಳಲ್ಲಿ ಇಡೀ ವರ್ಷಕ್ಕೆ ಆಗುವಷ್ಟು ಮಳೆ ಸುರಿಸಿದ್ದಾನೆ. ಇಷ್ಟಾದರೂ ಮುಂಗಾರು ಮಾರುತಗಳು ಇನ್ನು ಸೈಲೆಂಟ್ ಆಗುತ್ತಿಲ್ಲ. ಹೀಗಾಗಿ ಮಳೆಯ ಕಾಟಕ್ಕೆ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಆದ್ರೆ ಇದು ಸ್ಯಾಂಪಲ್ ಮಾತ್ರ ಅಂತಾ ಮಳೆ ಮೋಡಗಳು ವಾರ್ನಿಂಗ್ ಕೊಡಲು ಸಜ್ಜಾಗಿದ್ದು, 72 ಗಂಟೆಗಳ ಕಾಲ ಮತ್ತೆ ನಿರಂತರ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಹಾಗಾದರೆ ಭಾರಿ ಮಳೆ ಬೀಳುವ ಜಿಲ್ಲೆಗಳು ಯಾವುವು?

ಮಳೆ.. ಮಳೆ.. ಈ ಜಿಲ್ಲೆಗಳಿಗೆ ಎಚ್ಚರಿಕೆ!
ಮುಂಗಾರು ಮಳೆ ಮೋಡಗಳು ಇಷ್ಟುದಿನ ಕರಾವಳಿ & ಮಲೆನಾಡು ಭಾಗದಲ್ಲಿ ಭಯ ಹುಟ್ಟಿಸಿ ಜನರನ್ನು ಸುಸ್ತು ಮಾಡಿವೆ. ಆದರೆ ಇದೀಗ ಉತ್ತರ ಕರ್ನಾಟಕ ಭಾಗದಲ್ಲೂ ಮುಂಗಾರು ಮಳೆ ಆರ್ಭಟಿಸುವುದು ಪಕ್ಕಾ ಆಗಿದೆ. ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ ಸೇರಿದಂತೆ ಕೊಪ್ಪಳ, ಬಳ್ಳಾರಿ, ಬೆಳಗಾವಿ, ಗದಗ ಸೇರಿದಂತೆ ಹುಬ್ಬಳ್ಳಿ & ಧಾರವಾಡ ಭಾಗದಲ್ಲೂ ಕೂಡ, ಇದೇ ರೀತಿಯಾಗಿ ಭರ್ಜರಿ ಮುಂಗಾರು ಮಳೆ ಬೀಳಲಿದೆ ಎನ್ನಲಾಗಿದೆ. ಹಾಗಾದ್ರೆ ಮಲೆನಾಡು & ಕರಾವಳಿ ಪ್ರದೇಶದ ಕಥೆ ಏನು?
ಮಲೆನಾಡು & ಕರಾವಳಿ ಪ್ರದೇಶಕ್ಕೂ ಆಪತ್ತು?
ಕರ್ನಾಟಕದ ಮಲೆನಾಡು & ಕರಾವಳಿ ಜಿಲ್ಲೆಗಳಲ್ಲಿ ಕೂಡ ಮುಂದಿನ 3 ದಿನ ಅಂದ್ರೆ 72 ಗಂಟೆಗಳ ಕಾಲ ಭರ್ಜರಿ ಮುಂಗಾರು ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮತ್ತೆ ಮಳೆರಾಯ ಆರ್ಭಟಿಸುವುದು ಗ್ಯಾರಂಟಿ. ಇದರ ಜೊತೆಗೆ ಮಲೆನಾಡು ಭಾಗದಲ್ಲೂ ಮಳೆಯ ಆರ್ಭಟ ಈಗ ಮುಂದುವರಿಯಲಿದೆ. ಹೀಗಾಗಿ ಮತ್ತೆ ಭೂಕುಸಿತ ಹಾಗೂ ಗುಡ್ಡ ಕುಸಿತದ ಆತಂಕ ಶುರುವಾಗಿದೆ.












Click it and Unblock the Notifications