Rain Alert: ಎಚ್ಚರ.. ಮುಂದಿನ 120 ಗಂಟೆಗಳ ಕಾಲ ಸುರಿಯಲಿದೆ ಭಾರಿ ಮಳೆ!

ಕನ್ನಡಿಗರೇ ಇಲ್ಲಿ ಕೇಳಿ, ನೀವು ಮುಂಗಾರು ಮಳೆಯಿಂದ ಮುಕ್ತಿ ಪಡೆಯುವ ನಿರೀಕ್ಷೆಯಲ್ಲಿ ಇದ್ದರೆ ಅದನ್ನ ಈ ವರ್ಷ ಮರೆತುಬಿಡಿ. ಯಾಕಂದ್ರೆ ಮಳೆರಾಯ ಇನ್ನೂ ಸೈಲೆಂಟ್ ಆಗಿಲ್ಲ. ಬದಲಾಗಿ, ಮಳೆರಾಯ ಮತ್ತಷ್ಟು ಉಗ್ರರೂಪ ತೋರಿಸಲು ಸಜ್ಜಾಗಿದ್ದಾನೆ. ಅದರಲ್ಲೂ ಈ ಮುಂಗಾರು ಮಳೆಯ ಮೋಡಗಳು ಮುಂದಿನ 5 ದಿನಗಳ ಕಾಲ ಅಂದ್ರೆ 120 ಗಂಟೆಗಳ ಕಾಲ ಕರ್ನಾಟಕದಲ್ಲಿ ಘೋರ ಅನಾಹುತ ಸೃಷ್ಟಿ ಮಾಡಲು ಸಜ್ಜಾಗಿವೆ! ಹಾಗಾದ್ರೆ ಭರ್ಜರಿಯಾಗಿ ಮಳೆ ಬೀಳಲಿರುವ ಜಾಗಗಳು ಯಾವುವು?

ಕನ್ನಡಿಗರು ಮಳೆ ಈವತ್ತು ನಿಲ್ಲುತ್ತೆ, ಮಳೆ ನಾಳೆ ಕಡಿಮೆ ಆಗುತ್ತೆ ಅಂತಾ ಕಳೆದ 2 ತಿಂಗಳಿಂದ ಕಾಯ್ತಾನೇ ಇದ್ದಾರೆ. ಆದರೆ ಮಳೆರಾಯ ಮಾತ್ರ ತನ್ನ ಆರ್ಭಟ ಕಡಿಮೆ ಮಾಡುತ್ತಿಲ್ಲ. ಈ ಕಾರಣಕ್ಕೆ ಕರ್ನಾಟಕದ ಜನರು ಭಾರಿ ಮಳೆಯನ್ನು ಕಂಡು ಹೆದರಿ ಕೂರುವ ಪರಿಸ್ಥಿತಿಯೂ ನಿರ್ಮಾಣ ಆಗಿದೆ.

Heavy Rain Alert Has Been Given To Karnataka And Bengaluru For Next 120 Hours

ಅದರಲ್ಲೂ ಕರ್ನಾಟಕದ ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಕೊಡಗು, ಹಾಸನದ ಕೆಲವು ಭಾಗ ಸೇರಿದಂತೆ ಕರಾವಳಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಳೆಯ ಆರ್ಭಟ ಇದೀಗ ಕರ್ನಾಟಕದ ಒಳ ಭಾಗಗಳಿಗೂ ಆವರಿಸಲು ಸಜ್ಜಾಗಿದೆ. ಅದರಲ್ಲೂ ಮುಂದಿನ 5 ದಿನಗಳ ಕಾಲ ಬೆಂಗಳೂರು ಸೇರಿದಂತೆ ಯಾವೆಲ್ಲಾ ಜಿಲ್ಲೆಗಳಿಗೆ ಮಳೆ ಆಪತ್ತು ಕಾದಿದೆ ಗೊತ್ತಾ? ಮುಂದೆ ಓದಿ.

ಯಾವ ಜಿಲ್ಲೆಗಳಿಗೆ ಭಾರಿ ಮಳೆ?

ಮುಂಗಾರು ಮಳೆ ಮಾರುತಗಳು ಮತ್ತಷ್ಟ ಉಗ್ರರೂಪ ತಾಳಿವೆ. ಹೀಗಾಗಿ ನೈರುತ್ಯ ಮುಂಗಾರು ಮಳೆ 2 ವಾರದ ನಂತರ ಮತ್ತೆ ಚುರುಕಾಗಿದೆ. ಹೀಗೆ ಕರ್ನಾಟಕದ ಒಳನಾಡಿನಲ್ಲಿ ಮುಂದಿನ 5 ದಿನ ಭಾರಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ ಗುಡುಗು & ಸಿಡಿಲು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆಯ ವಹಿಸುವಂತೆ ಸೂಚಿಸಲಾಗಿದೆ. ಹಾಗೂ ಉತ್ತರ ಒಳನಾಡಲ್ಲಿ ಇಂದಿನಿಂದ ಗುರುವಾರ ತನಕ, ವ್ಯಾಪಕದಿಂದ ಸಾಧಾರಣ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಬೆಂಗಳೂರಿನ ಪರಿಸ್ಥಿತಿ ಏನು?

ಬೆಂಗಳೂರು ನಿವಾಸಿಗಳೇ ಎಚ್ಚರ.. ಎಚ್ಚರ..

ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆ ಆಗುವ ಬದಲು ಜೋರಾಗುತ್ತಿದೆ. ಅದ್ರಲ್ಲೂ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇದೀಗ ಮಳೆ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಜನ ಪರದಾಡಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾರಿ ಮಳೆ ಬೀಳಲಿದ್ದು, ಆ ನಂತರ ಕೂಡ ಮಳೆರಾಯನ ಆರ್ಭಟ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮತ್ತೊಂದು ಕಡೆ ಈ ಕುರಿತು ಅಲರ್ಟ್ ಕೂಡ ನೀಡಿ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ಅದರಲ್ಲೂ ಬೆಂಗಳೂರಿನ ನಿವಾಸಿಗಳು ಈ ವಿಚಾರದಲ್ಲಿ ಸಾಧ್ಯವಾದಷ್ಟು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+