Rain Alert: ಮಳೆ.. ಮಳೆ.. ಜುಲೈ 6 ಭಾನುವಾರ ನಂತರ ಭಾರಿ ಭರ್ಜರಿ ಮಳೆ ಎಚ್ಚರಿಕೆ!
ಮಳೆಗಾಲ ಈಗಿನ್ನೂ ಶುರುವಾಗಿದ್ದು, ವರುಣ ಕೂಡ ಭಾರಿ ಮಳೆ ಸುರಿಸುತ್ತಾ ಎಲ್ಲರನ್ನೂ ಖುಷಿಯಾಗೇ ಇಟ್ಟಿದ್ದಾನೆ. ಅದರಲ್ಲೂ ಮಳೆ ನಂಬಿಕೊಂಡು ಕೂತಿದ್ದ ಜನರಿಗೆ ಕೂಡ ಭಾರಿ ಮಳೆ ಸಖತ್ ಖುಷಿಯನ್ನ, ನೆಮ್ಮದಿಯನ್ನೂ ನೀಡಿದೆ. ಇಂತಹ ಸಮಯದಲ್ಲೇ ಮತ್ತೆ ಘೋರ ಮಳೆ ಸುರಿಯುವ ಬಗ್ಗೆ ಇದೀಗ ವಾರ್ನ್ ಮಾಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಭಾಗದಲ್ಲಿ ಭಾರಿ ಮಳೆ ಸುರಿಯಲಿದೆ?
ಮಳೆ.. ಮಳೆ.. ಕಳೆದ ಬಾರಿ ಬೇಸಿಗೆ ಕಾಲ ಶುರುವಾಗಿದ್ದರೂ ಮಳೆಯ ಆರ್ಭಟಕ್ಕೆ ಮಾತ್ರ ಬ್ರೇಕ್ ಬಿದ್ದಿರಲ್ಲ. ಮಳೆ ಆರ್ಭಟಿಸುತ್ತಿದ್ದ ರೀತಿ ಕಂಡು ಕನ್ನಡ ನಾಡಿನ ಜನರೂ ಬೆಚ್ಚಿ ಬಿದ್ದಿದ್ದರು. ಜೊತೆಗೆ ಹೀಗೆಲ್ಲ ಭಾರಿ ಮಳೆ ಕಾರಣ ನೂರಾರು ರೀತಿ ಸಮಸ್ಯೆ ಎದುರಾಗಿದ್ದವು. ಇನ್ನೇನು ಬೇಸಿಗೆ ಕಾಲ ಆರಂಭ ಆಗಬೇಕು ಅನ್ನುವಾಗಲೂ ಮಳೆರಾಯ ತನ್ನ ಆರ್ಭಟ ಮುಂದುವರಿಸಿ ಹೊಸ ತಲೆನೋವು ತರಿಸಿದ್ದರು. ಹೀಗಿದ್ದಾಗ ಮಳೆಗಾಲ ಆರಂಭ ಆಗಿದ್ದು, ವರುಣನ ಆರ್ಭಟ ನೋಡಿ ಜನರು ಇನ್ನಷ್ಟು ಭಯಗೊಂಡಿದ್ದಾರೆ.

ಮಳೆ.. ಮಳೆ.. ಭಾರಿ ಮಳೆ!
ಹೌದು, ಮಳೆ ಇಲ್ಲದೆ 2023 ಪೂರ್ತಿ ಬರದ ಬೇಗೆಯಲ್ಲೇ ಜನರು ಪರದಾಡಿದ್ದರು. ನಂತರ ಅದು ಯಾಕೋ ಏನೋ 2024ರ ಆರಂಭದಲ್ಲೇ ಮಳೆ ಜೋರಾಗಿ ಅಬ್ಬರಿಸಲು ಶುರುವಾಯ್ತು. ಹೀಗೆ ಭರ್ಜರಿ ಮುಂಗಾರು ಮಳೆ ಸುರಿದ ಕಾರಣಕ್ಕೆ ಜನರು ಕೂಡ ಪರದಾಡಿದ್ದರು. ನಂತರ ಹಿಂಗಾರು ಮಳೆ ಕೂಡ ಅಬ್ಬರಿಸಿತ್ತು, ಇದೇ ರೀತಿ ಈಗ 2025 ಆರಂಭದಲ್ಲೇ ಮಳೆ ತನ್ನ ಅಸಲಿ ರೂಪ ತೋರಿಸುತ್ತಿದೆ.
ಈ ಜಿಲ್ಲೆಗಳಲ್ಲಿ ಭಾರಿ ಮಳೆ
ಅಂದಹಾಗೆ ಇದೀಗ ಮತ್ತೊಮ್ಮೆ ಕರ್ನಾಟಕದ ಕಡೆಗೆ ನುಗ್ಗಿ ಬರುತ್ತಿರುವ ಮುಂಗಾರು ಮಳೆಯ ಮೋಡಗಳು ಮುತ್ತಿಗೆ ಹಾಕಿ ಮುಂದೆ ಬರುತ್ತಿವೆ. ಹೀಗೆ ಮಳೆ ಅಬ್ಬರ ಕೂಡ ಜೋರಾಗುತ್ತಿದ್ದು ಹಲವೆಡೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ಸೇರಿ ಕರಾವಳಿ ಪ್ರದೇಶ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿದಂತೆ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಸೋಮವಾರ & ಮಂಗಳವಾರ ತನಕ ಕೂಡ ಕರ್ನಾಟಕದಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆ ಕೊಡಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಈ ವರುಣಾರ್ಭಟ ಹೆಚ್ಚಾಗಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರಿಗೆ ಕೂಡ ಮಳೆಯಿಂದ ಆಪತ್ತು ಗ್ಯಾರಂಟಿ ಎಂಬ ಮುನ್ನೆಚ್ಚರಿಕೆ ಸಿಕ್ಕಿದೆ.












Click it and Unblock the Notifications