ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆ ಮುಂದೂಡುವಂತೆ RGUHSಗೆ ಆರೋಗ್ಯ ಸಚಿವರ ಪತ್ರ

|
Google Oneindia Kannada News

ಬೆಂಗಳೂರು, ಫೆ.1: ಎಂಬಿಬಿಎಸ್ ಅಂತಿಮ ವಿದ್ಯಾರ್ಥಿಗಳ ಕೋರಿಕೆ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗೆ ಪತ್ರ ಬರೆದಿದ್ದಾರೆ.

ಇದೇ ಫೆ.22ರಿಂದ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು ಎಂದು ಕೇಳಿಕೊಂಡಿರುವುದರಿಂದ ಸದ್ಯ ಪ್ರಕಟಿಸಿರುವ ವೇಳಾಪಟ್ಟಿಯನ್ನು ಮುಂದೂಡಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ಒದಗಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಅವರು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

2022-23 ಕೇಂದ್ರ ಬಜೆಟ್ ಬಗ್ಗೆ ಸಚಿವ ಸುಧಾಕರ್ ಶ್ಲಾಘನೆಗೆ ಕಾರಣವೇನು?2022-23 ಕೇಂದ್ರ ಬಜೆಟ್ ಬಗ್ಗೆ ಸಚಿವ ಸುಧಾಕರ್ ಶ್ಲಾಘನೆಗೆ ಕಾರಣವೇನು?

ವಿದ್ಯಾರ್ಥಿ ಸಂಘಟನೆ ಮನವಿ:

ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಓ) ಆರೋಗ್ಯ ಸಚಿವರಿಗೆ ಪತ್ರ ಬರೆದು ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿತ್ತು.

Health Minister Dr.Sudhakar letter to RGUHS postponing MBBS final year exam

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಯನ್ನು ಫೆ.22ರಿಂದ ನಡೆಸುವುದಾಗಿ ವೇಳಾಪಟ್ಟಿ ಹೊರಡಿಸಿದ್ದು, ಇದು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ ಎಂದು ಸಂಘಟನೆ ಹೇಳಿತ್ತು.

ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿದ್ದು, ಮೇನಿಂದ ಜುಲೈವರೆಗೂ ಆನ್‌ಲೈನ್ ತರಗತಿಗಳು ನಡೆದಿವೆ. ಅಗತ್ಯವಿದ್ದಷ್ಟು ಕ್ಲಿನಕಲ್ ಪೋಸ್ಟಿಂಗ್ ಸಹ ಆಗಿಲ್ಲ. ಕೋವಿಡ್ ಪಾಸಿಟಿವ್ ತೀವ್ರವಾಗಿದ್ದ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕೆಲಕಾಲ ಕೋವಿಡ್ ಕರ್ತವ್ಯವನ್ನೂ ನಿರ್ವಹಿಸಿದ್ದಾರೆ.

Recommended Video

Tema Indiaಗೆ ಬೆಂಗಳೂರಿನಲ್ಲಿ ವಿಶೇಷ ಪಂದ್ಯ ನಡೆಸಲು BCCI ತೀರ್ಮಾನ | Oneindia Kannada

ಅಲ್ಲದೆ, ಎರಡು ತಿಂಗಳು ಟೆಲಿ ಕ್ಲಿನಿಕ್ ಕತ್ಯವ್ಯ ನಿರ್ವಹಿಸಿದ್ದು, ಮತ್ತೆ ಕೋವಿಡ್ ಮೂರನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ತರಗತಿಗಳು ಮತ್ತು ಚಟುವಟಿಕೆಗಳು ಪೂರ್ಣವಾಗಿಲ್ಲ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಕಾಲಾವಕಾಶವೇ ಸಿಕ್ಕಿಲ್ಲ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲಾವಕಾಶ ಒದಗಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆರೋಗ್ಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು.

English summary
Considering the plight of MBBS students, Health Minister Dr K Sudhakar written letter to Vice Chancellor of RGUHS to consider postponement of final year MBBS exams scheduled from February 22 and reschedule the examination providing sufficient time for preparation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X