ನನ್ನ ಹೆಸರನ್ನೇ ಚೇಂಜ್ ಮಾಡ್ಕೊಂಡು ಬಿಡ್ತೀನಿ: ಶಿವಣ್ಣ ಓಪನ್ ಚಾಲೆಂಜ್
ಶಿವಮೊಗ್ಗ, ಮಾರ್ಚ್ 26: ರಾಜಾಹುಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭದ್ರಕೋಟೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕಣದಲ್ಲಿದ್ದು, ನಟ ಶಿವರಾಜ್ಕುಮಾರ್ ಅವರು ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಹೌದು, ಶಿವಮೊಗ್ಗ ಲೋಕಸಭಾ ಕ್ಷೇತ್ರ ಟಿಕೆಟ್ ಘೋಷಣೆಯಾದ ದಿನದಿಂದಲೂ ಪತ್ನಿ ಪರವಾಗಿ ನಟ ಶಿವರಾಜ್ ಕುಮಾರ್ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಟ ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದು, ಪತ್ನಿ ಗೀತಾ ಗೆದ್ದರೆ ಜನರ ಪರವಾಗಿ ಅವರು ಕೆಲಸ ಮಾಡುತ್ತಾರೆ ಎನ್ನುವ ಭರವಸೆ ನೀಡಿದ್ದಾರೆ.

ಗಂಡನಾಗಿ ನಾನು ನನ್ನ ಕರ್ತವ್ಯವನ್ನ ನಿರ್ವಹಿಸುತ್ತಿದ್ದೇನೆ. ಒಂದು ಅವಕಾಶ ಕೊಟ್ಟು ನೋಡಿ , ನಾವು ಕೊಟ್ಟ ಮಾತನ್ನ ತಪ್ಪುವುದಿಲ್ಲ, ನಾವು ಜನರಿಂದ ಜನರಿಗಾಗಿ ಬದುಕಬೇಕು, ಸೇವೆಗಾಗಿ ಅವರು ಈಗಾಗಲೇ ಶಕ್ತಿಧಾಮವನ್ನ ನಡೆಸುತ್ತಿದ್ದಾರೆ. ಅಧಿಕಾರ ಬಂದ್ರೆ ಇನ್ನೂ ಪವರ್ ಫುಲ್ ಆಗಿ ಕೆಲಸ ಮಾಡಬಹುದು, ಆ ಪವರ್ ಫುಲ್ ಆಗಿ ಕೆಲಸ ಮಾಡಲು ನೀವು ಆಯ್ಕೆ ಮಾಡಬೇಕು ಎಂದು ಶಿವಣ್ಣ ಹೇಳಿದ್ದಾರೆ.
ಗೀತಾಗೆ ಒಮ್ಮೆ ಅವಕಾಶ ಕೊಟ್ಟುನೋಡಿ. ಅವರು ಜನರ ಪರವಾಗಿ ಕೆಲಸ ಮಾಡ್ತಾರೆ. ಆ ಬಳಿಕವೂ ಅವರು ಸರಿಯಾದ ಅಭ್ಯರ್ಥಿನ ಆಯ್ಕೆ ಮಾಡಿಲ್ಲ ಎಂದರೇ ನಾನು ನನ್ನ ಹೆಸರು ಚೇಂಜ್ ಮಾಡ್ಕೋತೀನಿ. ಮಾತು ಕೊಟ್ಟಮೇಲೆ ಅದನ್ನು ಫಾಲೋ ಮಾಡ್ತೀವಿ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.












Click it and Unblock the Notifications