Ramesh Jarkihole: ಹಿಮಾಲಯದಲ್ಲಿ ಸಾಧು ಆಗಲು ಜಾಗ ನೋಡಿಟ್ಟಿದ್ದ ರಮೇಶ್ ಜಾರಕಿಹೊಳಿ: ಏನಿದು ಅಚ್ಚರಿ !
ಬೆಳಗಾವಿ, ಜೂನ್ 21: ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ, ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದೆ. ಪದೇ ಪದೇ ಸೋತರೆ ನಮಗೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
2024 ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದ ಮಾಜಿ ಸಿಎಂ, ನೂತನ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಅಭಿನಂದನಾ ಸಮಾವೇಶ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಪದೇ ಪದೇ ಸೋತರೆ ನಾವು ಲೀಡರ್ಸ್ ಅಲ್ಲ ನಾಲಾಯಕರು. ಆ ಉದ್ದೆಶದಿಂದ ಎಲ್ಲ ಒರಗೆ ಹಚ್ಚಿ ಚುನಾವಣೆ ಮಾಡಿದ್ವು, ಬಿಜೆಪಿ ಕಾರ್ಯಕರ್ತರು ದುಡ್ಡು ನೋಡಲಿಲ್ಲ, ಒಂದು ಚಹಾ ನೋಡಲಿಲ್ಲ ಎಂದು ಹೇಳಿದರು.

ಸರ್ಕಾರ ಬೀಳುವ ಮುನ್ಸೂಚನೆ ನೀಡಿದ ರಮೇಶ ಜಾರಕಿಹೊಳಿ, ಮತ್ತೇನೋ ದೇವರ ಪುಣ್ಯದಿಂದ ಆಗೋದಿದೆ. ಸಿದ್ದರಾಮಯ್ಯ ಇದಾನೆ ಅಂತ ನಾವು ಸ್ಲೋ ಮಾಡಿದ್ದೇವೆ. ಸಿದ್ದರಾಮಯ್ಯ ಇರಲಿಲ್ಲವಾದರೆ ಮೊದಲ ದಿನದಿಂದಲೇ ಪ್ರಾರಂಭ ಆಗುತ್ತಿತ್ತು. ಸಿದ್ದರಾಮಯ್ಯಗೂ ದೇವರು ಒಳ್ಳೆಯ ಬುದ್ಧಿ ಕೊಡಲಿ ಅಂತ ರಮೇಶ್ ಜಾರಕಿಹೊಳಿ ಹೇಳಿದರು.
ಇನ್ನು, ಡಿಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದ್ದು, ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿ ಕುರಿತು ಗಂಭೀರ ಆರೋಪ ಮಾಡಿದರು. ಬೆಳಗಾವಿ ಹಾಗೂ ಬಾಗಲಕೋಟೆಗೆ ಗಟ್ಟಿ ಬಸವಣ್ಣ ಡ್ಯಾಂ ವರದಾನ ಆಗಬೇಕಿತ್ತು. ಆದರೆ ನೀರಾವರಿ ಸಚಿವರು ಯೋಜನೆಯನ್ನು ಕ್ಯಾನ್ಸಲ್ ಮಾಡೋಕೆ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರು ಈವರೆಗೂ ಯೋಜನೆ ಕ್ಯಾನ್ಸಲ್ ಮಾಡಿಲ್ಲ. ಅವನು ಕ್ಯಾನ್ಸಲ್ ಮಾಡಿದ್ದರೆ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದೆ ಎಂದು ಹೇಳಿದರು.
ಕಳೆದ ವಿಧಾನಸಭೆಯಲ್ಲಿ ನನಗೆ ಹಿನ್ನಡೆಯಾಗಿತ್ತು. ಕಳೆದ ಒಂದು ವರ್ಷದಿಂದ ನಾನು ಅಸಹಾಯಕನಾಗಿದ್ದೆ. ಅದನ್ನ ಮನಗಂಡು ನಮ್ಮ ಕಾರ್ಯಕರ್ತರು ಈ ಚುನಾವಣೆಯಲ್ಲಿ ಕೆಲಸ ಮಾಡಿದರು. ಮಹಾನಾಯಕ, ವಿಷಕನ್ಯೆ ಸೊಕ್ಕಿನ ರಾಜಕಾರಣದ ದರ್ಪ ಜೋರಾಗಿತ್ತು. ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ, ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದೆ. ಪದೇ ಪದೇ ಸೋತರೆ ನಮಗೆ ತಡೆದುಕೊಳ್ಳಲು ಆಗುವುದಿಲ್ಲ . ಪದೇ ಪದೇ ಸೋತರೆ ನಾವು ಲೀಡರ್ಸ್ ಅಲ್ಲ ನಾಲಾಯಕ್ ಆಗ್ತಾರೆ. ಆ ಉದ್ದೇಶದಿಂದ ಎಲ್ಲಾ ಹೊರಗೆ ಹಚ್ಚಿ ಚುನಾವಣೆ ಮಾಡಿದ್ದೇವು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದ್ದಾರೆ.
ನಾನು ದೆಹಲಿಗೆ ಹೋಗಿ ಕೇಂದ್ರ ಅರಣ್ಯ ಸಚಿವರಿಗೆ ಭೇಟಿ ಆಗ್ತೀವಿ. ಅವರನ್ನು ಭೇಟಿ ಮಾಡಿ ಮಾತನಾಡಿ ಪರವಾನಗಿ ಪಡೆದುಕೊಂಡು ಬರ್ತಿವಿ. ಮಹಾನಾಯಕನ ಕಣ್ಣು ಗಟ್ಟಿ ಬಸವಣ್ಣ ಯೋಜನೆಯ ಮೇಲಿದೆ. ನಾನು ಸತೀಶ ಜಾರಕಿಹೊಳಿಯವರನ್ನೂ ಈ ಕುರಿತು ಕೇಳಿದೆ. ಸತೀಶ್ ಜಾರಕಿಹೊಳಿ ಹೆಗಲ ಮೇಲೆ ಬಂದೂಕು ಇಡುವ ಹುನ್ನಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಡಿದ್ದ. ಸತೀಶ್ ಕ್ಯಾನ್ಸಲ್ ಮಾಡಿದ್ದಾರೆ ಅಂತ ಬಿಂಬಿಸಲು ತಯಾರಾಗಿದ್ದ. ನಾನು ಸತೀಶ್ ಗೆ ಕೇಳಿದಾಗ ನಾನು ಏನು ಹೇಳಿಲ್ಲ ಅಂದ, ಈ ಯೋಜನೆ ಕಾಮಗಾರಿ ಮುಗಿದರೆ ಎಲ್ಲರಿಗೂ ಒಳ್ಳೇದಾಗಲಿದೆ ಎಂದರು.












Click it and Unblock the Notifications