ಜೆಡಿಎಸ್‌ ಗೆ ಸಿಎಂ, ಕಾಂಗ್ರೆಸ್‌ಗೆ ಡಿಸಿಎಂ: ಮಂತ್ರಿ ಯೋಗ ಯಾರಿಗೆ?

ಬೆಂಗಳೂರು, ಮೇ 16: ರಾಜ್ಯದಲ್ಲಿ ನಿರ್ಮಾಣವಾಗಿರುವ ಅತಂತ್ರ ವಿಧಾನಸಭೆ ಸನ್ನಿವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚನೆಯಾಗುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಆಸೆ ಚಿಗುರಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ನಡೆದಿರುವ ಪ್ರಾಥಮಿಕ ಚರ್ಚೆಯ ಪ್ರಕಾರ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರಿಂದ ಆ ಪಕ್ಷಕ್ಕೆ 14 ಸಚಿವ ಸ್ಥಾನಗಳು ಹಂಚಿ ಹೋಗಲಿವೆ. ಇನ್ನು ಕಾಂಗ್ರೆಸ್‌ಗೆ 20 ಸಚಿವ ಸ್ಥಾನಗಳು ಸಿಗುವ ಸಾಧ್ಯತೆ ಇದ್ದು, ಆ ಪೈಕಿ ಎರಡು ಡಿಸಿಎಂ ಹುದ್ದೆಗಳೂ ದಕ್ಕಬಹುದು ಎನ್ನಲಾಗುತ್ತಿದೆ.

ಪ್ರದೇಶ, ಜಾತಿ ಹಾಗೂ ನಾಯಕರ ಜನಪ್ರಿಯತೆಯ ಆಧಾರದ ಮೇಲೆ ಎರಡೂ ಪಕ್ಷಗಳಲ್ಲಿ ಲೆಕ್ಕಾಚಾರ ಆರಂಭವಾಗಿದ್ದು, ಕಾಂಗ್ರೆಸ್‌ನಲ್ಲಿ ಹಲವು ಘಟಾನುಘಟಿ ಸಚಿವರೇ ಪರಾಭವಗೊಂಡಿದ್ದರಿಂದ ಕೆಲವು ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

HDK will be CM, Cong will get DyCM, who are the ministers

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಜವಾಗಿಯೇ ಸಂಪುಟದಿಂದ ಹೊರ ಉಳಿಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ದೊರಕುವ ಸಂಭವ ಇದೆ. ಅಲ್ಲದೇ ಎರಡು ಡಿಸಿಎಂ ಹುದ್ದೆಗಳು ಸೃಷ್ಟಿಯಾದರೆ ಉತ್ತರ ಕರ್ನಾಟಕದಿಂದ ಆರ್.ವಿ.ದೇಶಪಾಂಡೆ ಅಥವಾ ಎಚ್.ಕೆ.ಪಾಟೀಲ್ ಅವರಿಗೆ ಅದೃಷ್ಟ ಒಲಿಯಬಹುದು. ಇಲ್ಲವೇ ಕೇವಲ ಸಚಿವರ ಹುದ್ದೆ ಸಿಗಬಹುದು ಎನ್ನಲಾಗುತ್ತಿದೆ.

ಆದರೆ ಜೆಡಿಎಸ್‌ನಲ್ಲಿ ಮಾತ್ರ ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ ಆರಂಭವಾಗಲಿದೆ. ಸರಿಸುಮಾರು ದಶಕಗಳ ಬಳಿಕ ಜೆಡಿಎಸ್ ಅಧಿಕಾರಕ್ಕೆ ಬರುತ್ತಿದ್ದು, ಗೆದ್ದಿರುವ 38 ಜನರಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಆನೆಗಾತ್ರದಷ್ಟಿದೆ.

ಕಾಂಗ್ರೆಸ್ ಸಂಭಾವ್ಯ ಸಚಿವರು

ಡಾ.ಜಿ.ಪರಮೇಶ್ವರ್

ರೋಶನ್ ಬೇಗ್

ಆರ್.ವಿ.ದೇಶಪಾಂಡೆ

ಡಿ.ಕೆ.ಶಿವಕುಮಾರ್

ಎಚ್.ಕೆ.ಪಾಟೀಲ್

ಕೆ.ಜೆ.ಜಾರ್ಜ್

ರಾಮಲಿಂಗಾರೆಡ್ಡಿ

ದಿನೇಶ್ ಗುಂಡೂರಾವ್

ಪಿ.ಟಿ.ಪರಮೇಶ್ವರ್ ನಾಯಕ್

ಯು.ಟಿ.ಖಾದರ್

ಕೃಷ್ಣ ಬೈರೇಗೌಡ

ಪ್ರಿಯಾಂಕ್ ಖರ್ಗೆ/ಅಜಯ್‌ಸಿಂಗ್

ಸಿ.ಎಸ್.ಶಿವಳ್ಳಿ/ ರಾಘವೇಂದ್ರ ಹಿಟ್ನಾಳ

ಎಂ.ಬಿ.ಪಾಟೀಲ್

ರಮೇಶ್‌ಕುಮಾರ್

ಶಾಮನೂರು ಶಿವಶಂಕರಪ್ಪ

ಸತೀಶ್/ರಮೇಶ್ ಜಾರಕಿಹೊಳಿ

ಈಶ್ವರ್ ಖಂಡ್ರೆ

ಸಿದ್ದು ನ್ಯಾಮಗೌಡ/ಎಸ್.ಆರ್.ಪಾಟೀಲ್

ಡಾ.ಯತೀಂದ್ರ
..........

ಜೆಡಿಎಸ್ ಸಂಭಾವ್ಯ ಸಚಿವರು

ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ರೇವಣ್ಣ

ಎಚ್.ವಿಶ್ವನಾಥ್

ಜಿ.ಟಿ.ದೇವೇಗೌಡ

ಬಂಡೆಪ್ಪ ಕಾಶೆಂಪೂರ್

ಬಸವರಾಜ ಹೊರಟ್ಟಿ

ಡಾ.ಕೆ.ಅನ್ನದಾನಿ

ಎನ್.ಸಿ.ಬಾಲಕೃಷ್ಣ

ಸಾ.ರಾ.ಮಹೇಶ್

ಗೋಪಾಲಯ್ಯ

ಸಿ.ಎಸ್.ಪುಟ್ಟರಾಜು

ಡಿ.ಸಿ.ತಮ್ಮಣ್ಣ

ಎಂ.ಕೆ.ಶಿವಲಿಂಗೇಗೌಡ

ಎ.ಟಿ.ರಾಮಸ್ವಾಮಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+