'ವೀರೇಂದ್ರ ಹೆಗ್ಗಡೆ ಮನಸ್ಸು ನೋಯಿಸಬೇಡಿ ಪ್ಲೀಸ್ '
ಹಾಸನ ಅ.24: ನೂರಾರು ವರ್ಷಗಳ ಇತಿಹಾಸವುಳ್ಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಘನತೆಗೆ ಚ್ಯುತಿ ಬರುವಂತೆ ಸಾರ್ವಜನಿಕರು ನಡೆದುಕೊಳ್ಳಬಾರದು. ಧರ್ಮಸ್ಥಳ ಧರ್ಮಾಧಿಕಾರಿಗಳಿಂದ ಸಾಕಷ್ಟು ಒಳ್ಳೆ ಕೆಲಸಗಳು ಆಗುತ್ತಿದೆ. ಸೌಜನ್ಯ ಕೊಲೆ ಪ್ರಕರಣದಿಂದಾಗಿ ಹೆಗ್ಗಡೆ ಮನಸ್ಸಿಗೆ ನೋವುಂಟು ಮಾಡಬೇಡಿ ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಕರೆ ನೀಡಿದ್ದಾರೆ.
ಸೌಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮನ ನೋಯಿಸುವಂಥ ಆರೋಪಗಳು, ವರದಿಗಳು, ಹೇಳಿಕೆಗಳು ಕೇಳಿ ಬರುತ್ತಿವೆ. ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಧರ್ಮಾಧಿಕಾರಿಗಳಿಗೆ ಉಂಟಾಗಿರುವ ಮುಜುಗರವನ್ನು ತಪ್ಪಿಸಬೇಕು ಎಂದು ರೇವಣ್ಣ ಹೇಳಿದ್ದಾರೆ.
ಹೆಗ್ಗಡೆಯವರ ತಮ್ಮನ ಮಗನ ಮೇಲೆ ಆರೋಪವಿದೆ. ಆ ಘಟನೆ ನಡೆದ ದಿನ ವಿದೇಶಕ್ಕೆ ಹೋಗಿರುವುದಕ್ಕೆ ವೀಸಾ ಪಾಸ್ ಪೋರ್ಟ್ ದಾಖಲೆ ನೀಡಲಾಗಿದೆ. ಹಳೆ ಪ್ರಕರಣವನ್ನು ಈಗ ಕೆದಕಿ ಹೆಗ್ಗಡೆಯವರ ಮನಸ್ಸಿಗೆ ನೋವುಂಟು ಮಾಡಲಾಗುತ್ತಿದೆ, ಸರ್ಕಾರ ಪೊಲೀಸರ ಕೈಲಿ ತನಿಖೆ ನಡೆಸಲು ವಿಫಲವಾದರೆ ಸಿಬಿಐಗೆ ಪ್ರಕರಣ ಒಪ್ಪಿಸಲಿ ಎಂದು ರೇವಣ್ಣ ಅಭಿಪ್ರಾಯಪಟ್ಟರು.

ಅನ್ನಭಾಗ್ಯ ಇನ್ನಿಲ್ಲ: ಮುಂಬರುವ ಲೋಕಸಭೆ ಚುನಾವಣೆಯ ನಂತರ ಅನ್ನಭಾಗ್ಯ ಯೋಜನೆ ಸ್ಥಗಿತವಾಗಲಿದೆ ಎಂದು ರೇವಣ್ಣ ಭವಿಷ್ಯ ನುಡಿದಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಈಗ 3 ಲಕ್ಷದ 71 ಸಾವಿರ ಬಿಪಿಎಲ್ ಕಾರ್ಡ್, 23 ಸಾವಿರ ಅಂತ್ಯೊಧಯ ಪಡಿತರ ಚೀಟಿ, 44 ಸಾವಿರದ 900 ಎಪಿಎಲ್ ಪಡಿತರ ಚೀಟಿ ಇದೆ. ಸರ್ಕಾರವು ಆನ್ ಲೈನ್ ನಲಿ ಅರ್ಜಿ ಪಡೆಯುವ ಜನರನ್ನು ಪರಿಶೀಲಿಸುವಂತೆ ಆದೇಶ ಹೊರಡಿಸಿದೆ.
ಪ್ರಸ್ತುತ 87 ಸಾವಿರದ 554 ಬಿಪಿಎಲ್ ಪಡಿತರ ಚೀಟಿ ನೊಂದಾಣಿ ಆಗಿದೆ. 28 ಸಾವಿರದ 914 ಪಡಿತರ ಚೀಟಿಯನ್ನು ನೀಡಿದೆ. ಹೊಸ ಪಡಿತರ ಚೀಟಿ ಉಳಿದಿರುವ 58 ಸಾವಿರದ 638 ಪರಿಶೀಲನೆ ಆಗುತ್ತಿದೆ. ಎಲ್ಲಾ ಸೇರಿ 4 ಲಕ್ಷದ 11 ಸಾವಿರ ಕುಟುಂಬ ಬಿಪಿಎಲ್ ಗೆ ಸೇರ್ಪಡೆಯಾಗಿದೆ. ಸರ್ಕಾರವು ಅನ್ನಭಾಗ್ಯ ನೀಡಲು ಸಾಧ್ಯವಾಗದೆ ಪರಿಶೀಲನ ನೆಪ ಹೇಳಿ ಶೇಕಡ 90 ಭಾಗ ರದ್ದು ಮಾಡಿ ಕೇವಲ 10 ಭಾಗ ನೀಡುವ ಮೂಲಕ ಸ್ಥಗಿತಗೊಳಿಸುವ ಸಂಚು ಮಾಡಲಾಗುತ್ತಿದೆ ಎಂದು ದೂರಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ಕಾಲದಲ್ಲಿ ಕೆಜಿಗೆ 3 ರೂ ಅಕ್ಕಿಯನ್ನು ಎಲ್ಲಾರಿಗೂ ನೀಡಲಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಎರಡು ಪಕ್ಷಗಳು ಅಣ್ಣ ತಮ್ಮ ಇದ್ದ ಆಗೆ. ಇವರು ನಿಜವಾದ ಬಡವರಿಗೆ ಪಡಿತರ ಚೀಟಿ ನೀಡಲಿ. ಇವೆಲ್ಲಾ ಗಮನಿಸಿದರೆ ಮುಂದೆ ನಡೆಯಲಿರುವ ಲೋಕಾಸಭ ಚುನಾವಣೆ ನಂತರ ಅನ್ನಭಾಗ್ಯ ಯೋಜನೆ ನಿಲ್ಲುವ ಸೂಚನೆ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.












Click it and Unblock the Notifications