ರಾಮನಗರ, ಚನ್ನಪಟ್ಟಣ, ಬಿಡದಿ ಬೈಪಾಸ್ ಮಾಡಿದವರು ಯಾರು?: ಡಿಕೆ ಶಿವಕುಮಾರ್‌ ವಿರುದ್ಧ ಗರಂ ಆದ ಹೆಚ್‌ ಡಿ ರೇವಣ್ಣ

ಹಾಸನ, ಅಕ್ಟೋಬರ್‌ 26: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿಕೆಗೆ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಗರಂ ಆಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಏನು ಕೊಡುಗೆ ನೀಡಿದ್ದಾರೆ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಹೌದು, ಈ ಕುರಿತು ಗುರುವಾರ ಹೊಳೆನರಸೀಪುರ ತಾಲ್ಲೂಕಿನ, ಹಂಗರಹಳ್ಳಿಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ನಮಗೆ ಗೊತ್ತಿಲ್ಲಪ್ಪ, ಯಾವುದನ್ನು ಸೇರಿಸುತ್ತಾರೆ. ಯಾರಿಗೆ ಗೊತ್ತೈತೆ. ರಾಮನಗರಕ್ಕೆ ಕುಮಾರಸ್ವಾಮಿ ಅವರು ಏನೇನ್ ಮಾಡಿದ್ದಾರೆ ಅಂತ ದಾಖಲೆ ತೆಗೆದು ನೋಡಿದ್ರೆ ಗೊತ್ತಾಗುತ್ತೆ. ಇಂಜಿನಿಯರಿಂಗ್ ಕಾಲೇಜಿಗೆ 120 ಕೋಟಿ ಕೊಟ್ಟಿದ್ದಾರೆ, ಯಾರ ಮಕ್ಕಳು ಓದ್ತರೆ, ಕುಮಾರಸ್ವಾಮಿ ಮಕ್ಕಳು ಓದ್ತರಾ? ಮೆಡಿಕಲ್ ಕಾಲೇಜು ಬೇಕು ಅಂತ ಕೆಲವರು ತಡೆ ಹಿಡಿದಿದ್ದಾರೆ ಎಂದು ಕಿಡಿಕಾರಿದರು.

HD Revanna Attack Against DCM DK Shivakumar

ರಾಮನಗರವನ್ನು ಒಂದು ಜಿಲ್ಲಾ ಕೇಂದ್ರ ಮಾಡಬೇಕು, ಕೆಂಪೇಗೌಡರ ಹೆಸರು ಇಡಬೇಕು ಅಂತ ಕುಮಾರಸ್ವಾಮಿ ತೀರ್ಮಾನ ಮಾಡಿದರು. ಇಲ್ಲಾ ರಾಮನಗರ ಜಿಲ್ಲೆ ಎದು ಹೆಸರು ಇಡಬೇಕು ಅಂತ ಕೆಲವರು ಹೇಳಿದ ಮೇಲೆ ರಾಮನಗರ ಅಂತ ಹೆಸರು ಇಟ್ಟರು. ರಾಮನಗರ ಜಿಲ್ಲೆಗೆ ಎಷ್ಟು ಕಾಲೇಜುಗಳು, ಕೆಪಿಎಸ್‌ಸಿ ಸ್ಕೂಲ್, ರಸ್ತೆಗಳು, ಡಿಪ್ಲೋಮಾ ಕಾಲೇಜು, ದಾಖಲೆಗಳನ್ನು ತೆಗೆದು ನೋಡಿದರೆ ಗೊತ್ತಾಗುತ್ತೆ ಎಂದು ಡಿ ಕೆ ಶಿವಕುಮಾರ್‌ ಗೆ ತಿರುಗೇಟು ನೀಡಿದರುದ.

ಮೈಸೂರು-ಬೆಂಗಳೂರು ಬೈಪಾಸ್ ರೋಡ್ ಕುಮಾರಣ್ಣ ಅವರ ಕಾಲದಲ್ಲಿ ಆಗಿದ್ದು, ನಮ್ಮ ಕಾಲದಲ್ಲಿ ರೈತರು 90% ಲ್ಯಾಂಡ್ ಕೊಟ್ಟಿದ್ದಕ್ಕೆ ಇವತ್ತು ಮೈಸೂರು-ಬೆಂಗಳೂರು ರಸ್ತೆ ಆಗಿದ್ದು ರಾಮನಗರ, ಚನ್ನಪಟ್ಟಣ, ಬಿಡದಿ ಬೈಪಾಸ್ ಮಾಡಿದವರು ಯಾರು? ಕುಮಾರಣ್ಣ ಅವರು ಏನ್ ಮಾಡಿದ್ದಾರೆ ಅನ್ನೋದನ್ನ ತೆಗೆದು ನೋಡಲಿ. ರಾಮನಗರ, ಚಿಕ್ಕಬಳ್ಳಾಪುರವನ್ನು ಯಾರು ಜಿಲ್ಲಾ ಕೇಂದ್ರ ಮಾಡಿದ್ದು? ನಾನು ಯಾರ ಬಗ್ಗೆ ಟೀಕೆ, ಟಿಪ್ಪಣಿ ಮಾಡಲ್ಲಮೆಡಿಕಲ್ ಕಾಲೇಜು, ರಾಜೀವ್‌ಗಾಂಧಿ ವಿಶ್ವವಿದ್ಯಾಲಯವನ್ನು ಹತ್ತು ವರ್ಷದಿಂದ ಯಾರು ತಡೆದಿದ್ದಾರೆ. ಕಾಲ ಬಂದಾಗ ಹೇಳುತ್ತೇನೆ ಎಂದ ಅವರು ರಾಮನಗರ ಜಿಲ್ಲಾ ಕೇಂದ್ರ ತೆಗೆಯಲು ಬಂದಾಗ ಮಾತನಾಡುತ್ತೇನೆ ಎಂದರು.

ಶಾಲಾ ಪಠ್ಯ ಪುಸ್ತಕಕ್ಕೆ ಗೆಲುವು ಸಾಧಿಸಿದ ಕೆಲವು ರಾಜರುಗಳ ಹೆಸರು ಸೇರ್ಪಡೆ ವಿಚಾರ, ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಹಂಗರಹಳ್ಳಿಯಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಈ ರಾಜ್ಯದಲ್ಲಿ ದಕ್ಷಿಣ ಭಾಗದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ, ಮೈಸೂರು ಮಹಾರಾಜರು ಇದ್ದರು. ಮಹಾರಾಜರ ಇತಿಹಾಸ, ಕರ್ನಾಟಕ ರಾಜ್ಯದಲ್ಲಿ ಯಾರ‌್ಯಾರು ಆಳ್ವಿಕೆ ಮಾಡಿದ್ರು ಅವರೆನ್ನೆಲ್ಲಾ ಸೇರಿಸಲಿ. ಕೃಷ್ಣರಾಜ ಒಡೆಯರ್ ಇಂದ ಹಿಡಿದು ಇಲ್ಲಿಯವರೆಗೆ ಏನೇನ್ ನಡೆದಿದೆ ಆ ವಿದ್ಯಮಾನಗಳನ್ನೆಲ್ಲಾ ಸೇರಿಸಲಿ ಅಂತ ಒತ್ತಾಯ ಮಾಡ್ತಿನಿ ಎಂದು ಹೇಳಿದರು.

ಹೊಸದಾಗಿ ಸೇರಿಸಲಿ ನಾವೇನು ಬೇಡ ಅಂತೀವಾ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಕ್ಕಳಿಗೆ ಮೂಲಭೂತ ಸೌಕರ್ಯ ಕೊಡಲು ಆಗಿಲ್ಲ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಲು ಆಗ್ತಿಲ್ಲ ಇನ್ನೇನು ಮಾಡ್ತರೆ ಇವ್ರು. ಕಾಲೇಜುಗಳಲ್ಲಿ ಡೆಸ್ಕ್, ಮೂಲಭೂತ ಸೌಕರ್ಯಗಳಿಲ್ಲ, ಉಪನ್ಯಾಸಕರಿಲ್ಲ. ಮೊದಲು ಮೂಲಭೂತ ಸೌಕರ್ಯ ಕೊಡಿ. ರೈತರ ಪಂಪ್‌ಸೆಟ್‌ಗಳಿಗೆ ಮೊದಲು ಹಗಲು ವೇಳೆ ಕರೆಂಟ್ ಕೊಡಿ ಎಂದರು.

ಭಾರತದಲ್ಲಿ ಇಂತಹ ಸೋಂಬೇರಿ ಎಂಪಿ ನೋಡಿಲ್ಲ ಎಂದು ಪ್ರಜ್ವಲ್‌ ರೇವಣ್ಣ ವಿರುದ್ಧ ಶಾಸಕ ಕೆ.ಎಂ.ಶಿವಲಿಂಗೇಗೌಡ ಟೀಕೆ ವಿಚಾರವಾಗಿ ಮಾತನಾಡಿ, ಯಾರು ಸೋಂಬೇರಿ ಎಂದು ಕಾಲ ಬಂದಾಗ ಹೇಳ್ತಿನಿ ಈಗ ಹೇಳೋದು ಬೇಡ, ಕಾಲ ಬರಲಿ. ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಪ್ರತ್ಯೇಕ ಕೊಠಡಿಗೆ ನನಗೆ ಗೊತ್ತಿಲ್ಲಪ್ಪ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+