HD Kumaraswamy: ಬಿಜೆಪಿಯಿಂದ ಎಚ್‌.ಡಿ ಕುಮಾರಸ್ವಾಮಿ ಸೈಡ್‌ಲೈನ್‌, ಯಾಕಿ ಪ್ರಶ್ನೆ ?

HD Kumaraswamy: ಕರ್ನಾಟಕದಲ್ಲಿ ಜೆಡಿಎಸ್ ಮುಖಂಡ ಹಾಗೂ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರನ್ನು‌ ಬಿಜೆಪಿ ಸೈಡ್‌ಲೈನ್‌ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆಯನ್ನು ನೀಡಲಾಗಿದೆಯಾದರೂ. ರಾಜ್ಯದಲ್ಲಿ ಅವರನ್ನು ಸೈಡ್‌ಲೈನ್‌ ಮಾಡಲಾಗುತ್ತಿದೆ ಎನ್ನುವ ಅನುಮಾನ ಶುರುವಾಗಿದೆ. ಕೇಂದ್ರ ಅಥವಾ ರಾಷ್ಟ್ರೀಯ ಹಂತದಲ್ಲೂ ಅವರು ಹೆಚ್ಚು ಸುದ್ದಿಯಾಗುತ್ತಿಲ್ಲ‌ ಎನ್ನುವ ಮಾತು ಕೇಳಿ ಬರುತ್ತಿದೆ. ಈ ನಡುವೆ ಬಿಜೆಪಿಯ ನಡೆಯು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರಿಗೆ ಏಕಕಾಲಕ್ಕೆ ಮುಜುಗರವನ್ನು ತಂದೊಡ್ಡಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ರಾಜ್ಯ ಬಿಜೆಪಿಯು ಇಂದಿನಿಂದ ಜನಾಕ್ರೋಶ ಯಾತ್ರೆಯನ್ನು ಕರ್ನಾಟಕದಲ್ಲಿ ಮಾಡುತ್ತಿದೆ. ccongress ಜನವಿರೋಧಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ಮುಸ್ಲಿಂ ಮೀಸಲಾತಿ ವಿರುದ್ಧ ರಾಜ್ಯದಾದ್ಯಂತ ಜನಾಕ್ರೋಶ ಯಾತ್ರೆಯನ್ನು ಸಂಘಟಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಆದರೆ, ಈ ಯಾತ್ರೆಗೆ ಜೆಡಿಎಸ್ ಪಕ್ಷವನ್ನೇ ಆಹ್ವಾನಿಸಿಲ್ಲ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷವು ಎಚ್‌.ಡಿ ಕುಮಾರಸ್ವಾಮಿ ಅವರನ್ನು ಸೈಡ್‌ಲೈನ್‌ ಮಾಡಿದೆ. ಅದರೊಂದಿಗೆ ರಾಜ್ಯ ಜೆಡಿಎಸ್‌ ಪಕ್ಷದವರನ್ನೂ ಆಹ್ವಾನಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪವಿದೆ.

HD Kumaraswamy Sidelined By BJP Why this Question

ರಾಜ್ಯ ಬಿಜೆಪಿಯು ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು ಅಥವಾ ಸೇರಿ ಪ್ರತಿಭಟನೆ ಮಾಡದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಎರಡೂ ಪಕ್ಷಗಳ ನಡುವೆ ಬಿರುಕು ಮೂಡಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ಅದಕ್ಕೆ ತಕ್ಕಂತೆ ಇಂದು ನಡೆಯುತ್ತಿರುವ ಜನಾಕ್ರೋಶ ಯಾತ್ರೆಯನ್ನು ಬಿಜೆಪಿಯು ಏಕಾಂಗಿಯಾಗಿ ಮಾಡುತ್ತಿದೆ. ಈಚೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದಿದ್ದ ಪ್ರತಿಭಟನೆಗೂ ಜೆಡಿಎಸ್‌ ಪಕ್ಷದವರನ್ನು ಆಹ್ವಾನಿಸಿರಲಿಲ್ಲ. ಇದು ಬಾರಿ ಚರ್ಚೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ನಾವು ಜೆಡಿಎಸ್‌ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಸಮನ್ವಯ ಸಮಿತಿಯನ್ನು ರಚನೆ ಮಾಡಲಿದ್ದೇವೆ ಎಂದು ಹೇಳಿದ್ದರು. ಆದರೆ, ಇಂದಿನಿಂದ ನಡೆಯುತ್ತಿರುವ ಜನಾಕ್ರೋಶ ಯಾತ್ರೆಗೂ ಆಹ್ವಾನ ಕೊಟ್ಟಿಲ್ಲ ಎನ್ನಲಾಗಿದೆ. ಇದೀಗ ಈ ವಿಚಾರವಾಗಿ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

Take a Poll

ಕಣ್ಣೀರ್ ಸ್ವಾಮಿಯನ್ನು ಕ್ಯಾರೇ ಎನ್ನದ ಬಿಜೆಪಿ ಎಂದ ಕಾಂಗ್ರೆಸ್!‌

ಈ ವಿಷಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪಕ್ಷವು, ಕಣ್ಣೀರ್ ಸ್ವಾಮಿಯನ್ನು ಕ್ಯಾರೇ ಎನ್ನದ ಬಿಜೆಪಿ ಬಿಸಿಲಿನ ಬೇಗೆಯಲ್ಲಿ ಬ್ರದರ್ ಸ್ವಾಮಿ ಕುಟುಂಬಕ್ಕೆ ಕಣ್ಣೀರು ಪ್ರಾಪ್ತಿ ಎಂದು ವ್ಯಂಗ್ಯವಾಡಿದೆ.

ಮುಂದುವರಿದು ರಾಜ್ಯ BJP Karnataka ಹಾಗೂ Janata Dal Secular ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಉಭಯ ಪಕ್ಷದ ನಾಯಕರ ನಿಲುವುಗಳು ನಾನೊಂದು ತೀರಾ... ನೀನೊಂದು ತೀರಾ ಎಂಬಂತಾಗಿದೆ. ಬಿಜೆಪಿಗರು ತಾವು ಮಾಡುವ ಸುಳ್ಳಿನ ಹೋರಾಟಕ್ಕಾಗಲಿ, ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡುವ ಕಾರ್ಯಕಲಾಪಗಳಿಗೆ ಕೇಂದ್ರ ಮಂತ್ರಿ H D Kumaraswamy ಅವರನ್ನು ಆಹ್ವಾನಿಸಿದೆ ಮೂಲೆಗುಂಪು ಮಾಡಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ಬಣ ಬಡಿದಾಟದಿಂದ ಬಾಡಿರುವ ಕಮಲದಲ್ಲಿ, ಮುಂದೆ ದಳಗಳೂ ಉದುರಿ ಒಣಗಿದ ಕಡ್ಡಿಯೊಂದೇ ಉಳಿದುಕೊಳ್ಳುವುದು ಶತಸಿದ್ಧ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+