ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧು ಬಂಗಾರಪ್ಪ ಕಾಂಗ್ರೆಸ್‌ಗೆ; ಕುಮಾರಸ್ವಾಮಿ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಮಾರ್ಚ್ 11; "ಎಷ್ಟು ಜನ ಪಕ್ಷದಿಂದ ಹೋದರು ಪಕ್ಷವೇನು ಮುಳುಗಿ ಹೋಗಿಲ್ಲ, ಇನ್ನೂ ಜೀವಂತವಾಗಿ ಇದೆಯಲ್ಲ. ಇನ್ನು ಮುಂದೆ ತಾತ್ಕಾಲಿಕವಾಗಿ ಪಕ್ಷಕ್ಕೆ ಬರುವವರನ್ನು ಸೇರಿಸಿಕೊಳ್ಳುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

Recommended Video

ಸಿದ್ದರಾಮಯ್ಯ ಭೇಟಿಯಾದ ಮಧು ಬಂಗಾರಪ್ಪ, ಕಾಂಗ್ರೆಸ್‌ ಸೇರೋದು ಪಕ್ಕಾ | Oneindia Kannada

ಸೊರಬ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಲಿದ್ದಾರೆ. ಗುರುವಾರ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೌನ ಮುರಿದ ಮಧು ಬಂಗಾರಪ್ಪ! ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೌನ ಮುರಿದ ಮಧು ಬಂಗಾರಪ್ಪ!

ಸಿದ್ದರಾಮಯ್ಯ ಮಧು ಬಂಗಾರಪ್ಪ ಭೇಟಿಯ ಚಿತ್ರಗಳಲ್ಲಿ ಫೇಸ್‌ ಬುಕ್‌ನಲ್ಲಿ ಹಾಕಿದ್ದಾರೆ. "ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿರುವ ಮಧು ಬಂಗಾರಪ್ಪ ಅವರು ಇಂದು ನನ್ನನ್ನು ಭೇಟಿಮಾಡಿ ಮಾತುಕತೆ ನಡೆಸಿದರು" ಎಂದು ಹೇಳಿದ್ದಾರೆ.

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದ ಡಿಕೆ ಶಿವಕುಮಾರ್ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದ ಡಿಕೆ ಶಿವಕುಮಾರ್

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಶಿವಮೊಗ್ಗ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಎಚ್. ಡಿ. ಕುಮಾರಸ್ವಾಮಿ ಆಪ್ತರಾಗಿದ್ದ ಅವರು ಪಕ್ಷ ಬಿಡುತ್ತಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ.

ಒಂದೇ ವರ್ಷದಲ್ಲಿ ಮೂರು ಚುನಾವಣೆ ಸೋತ ಮಧು ಬಂಗಾರಪ್ಪ ಒಂದೇ ವರ್ಷದಲ್ಲಿ ಮೂರು ಚುನಾವಣೆ ಸೋತ ಮಧು ಬಂಗಾರಪ್ಪ

ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಾರೆ

ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಾರೆ

ಮೈಸೂರಿನಲ್ಲಿ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ಇದೆಲ್ಲಾ ಹೊಸ ಕಥೆಗಳಲ್ಲ, ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ. ಜೆಡಿಎಸ್ ಹುಟ್ಟಿದ ದಿನದಿಂದ ದೇವೇಗೌಡರ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ. ಯಾರನ್ನು ನಂಬುತ್ತಾರೋ ಅವರೇ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಾರೆ" ಎಂದರು.

ಬಾಗಿಲು ತೆರೆದಿದೆ, ಹೋಗಲು ಅವಕಾಶವಿದೆ

ಬಾಗಿಲು ತೆರೆದಿದೆ, ಹೋಗಲು ಅವಕಾಶವಿದೆ

"ಇಂತಹ ವಿಚಾರಗಳಿಗೆ ಮಹತ್ವ ಕೊಡುವ ಅವಶ್ಯಕತೆ ನನಗಂತೂ ಇಲ್ಲ. ಹೋಗಬೇಕಾದರೆ ಏನೇನೂ ಸಬೂಬುಗಳನ್ನು ಹೇಳಿಕೊಂಡು ಹೋಗುತ್ತಾರೆ. ಕಾರ್ಯಕರ್ತರನ್ನು ಅಂತಹ ಮಟ್ಟಕ್ಕೆ ಬೆಳೆಸುವ ಶಕ್ತಿ ಪಕ್ಷಕ್ಕೆ ಇಂದಿಗೂ ಇದೆ. ಬಾಗಿಲು ತೆರೆದಿದೆ, ಎಲ್ಲಿಗೆ ಬೇಕಾದರೂ ಹೋಗಲು ಅವಕಾಶವಿದೆ. ಅವರಿಗೆ ಒಳ್ಳೆಯದಾಗುತ್ತೆ ಅನ್ನೋ ಭಾವನೆಯಲ್ಲಿ ಹೋಗುತ್ತಾರೆ, ಹೋಗಬಹುದು. ಎಷ್ಟೋ ಜನ ಹೋದರು ಹೊಸಬರು ಬರುತ್ತಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದರು.

ಪಕ್ಷವೇನು ಮುಳುಗಿ ಹೋಗಿಲ್ಲ

ಪಕ್ಷವೇನು ಮುಳುಗಿ ಹೋಗಿಲ್ಲ

"ಎಷ್ಟು ಜನ ಪಕ್ಷದಿಂದ ಹೋದರು?, ಹಳೆಯ ಲೆಕ್ಕವನ್ನೆಲ್ಲಾ ತೆಗೆದುಕೊಳ್ಳಿ. ಪಕ್ಷವೇನು ಮುಳುಗಿ ಹೋಗಿಲ್ಲ. ಇನ್ನೂ ಜೀವಂತ ಇದೆಯಲ್ಲ. ತಾತ್ಕಾಲಿಕವಾಗಿ ಪಕ್ಷದಲ್ಲಿ ಇರಲು ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಲಿದ್ದೇವೆ. ಪಕ್ಷ ಬಿಟ್ಟು ಹೋಗುವವರು ಪಕ್ಷದಿಂದ ಪಡೆದುಕೊಂಡ ಅನುಕೂಲಗಳ ಬಗ್ಗೆ ಚಿಂತನೆ ಮಾಡಬೇಕು. ಬೆನ್ನಿಗೆ ಚಾಕು ಹಾಕಿ ಹೋದವರ ಕುರಿತು ಜನರು ತೀರ್ಮಾನ ಮಾಡುತ್ತಾರೆ" ಎಂದು ಕುಮಾರಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯ ಭೇಟಿ

ಸಿದ್ದರಾಮಯ್ಯ ಭೇಟಿ

ಹಲವು ದಿನಗಳಿಂದ ಸೊರಬ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಗುರುವಾರ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿದರು.

ಮಧು ಬಂಗಾರಪ್ಪ ಭೇಟಿ

ಮಧು ಬಂಗಾರಪ್ಪ ಗುರುವಾರ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದರು.

English summary
JD(S) leader and Soraba former MLA Madhu Bangarappa to join Congress. He met leader of opposition Siddaramaiah. H. D. Kumaraswamy reaction on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X