All Party Meeting: ಆ.23ರ ಸರ್ವ ಪಕ್ಷ ಸಭೆ ಬಗ್ಗೆ ಏನಂದ್ರು ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 20: ಕರ್ನಾಟಕದಿಂದ ಕಾವೇರಿ ನೀರನ್ನು ಈಗಾಗಲೇ ತಮಿಳುನಾಡಿಗೆ ಬಿಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಟದ್ದು ಯಾಕೆ? ನಮ್ಮ ಪರಿಸ್ಥಿತಿ ಬಗ್ಗೆ ಸುಪ್ರೀಂ ಮುಂದೆ ಹೇಳುವಲ್ಲಿ ಸರ್ಕಾರ ವಿಫಲವಾಗಿದೆ. ನ್ನ ಒತ್ತಾಯದ ಬಳಿಕ ಸರ್ವ ಪಕ್ಷ ಸಭೆ ಕಾಂಗ್ರೆಸ್ ಸರ್ಕಾರ ಕರೆದಿದೆ. ಇದು ಊರೆ ಕೊಳ್ಳೆ ಹೊಡೆದ ಮೇಲೆ ಸಭೆ ಕರೆದಂತಾಗಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ಕಾವೇರಿ ನೀರು ಹಂಚಿಕೆ ವಿವಾದವು ಮುಂದುವರಿದಿದೆ, ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಹರಿಹಾಯ್ದಿವೆ. ಇದರ ಬೆನ್ನಲ್ಲೆ ಬುಧವಾರ ಆಗಸ್ಟ್ 23ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ 'ಸರ್ವಪಕ್ಷಗಳ ಸಭೆ' ಕರೆಯಲಾಗಿದೆ. ಈ ಬಗ್ಗೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೆ ತಿಳಿಸಿದ್ದಾರೆ.

ಈ ಸಭೆಯಲ್ಲಿ ಕೇವಲ ಕಾವೇರಿ ನೀರಿನ ವಿಚಾರ ಮಾತ್ರವಲ್ಲದೇ ಉತ್ತರ ಕರ್ನಾಟಕದ ಜೀವನಾಡಿ ಮಹದಾಯಿ, ಕೃಷ್ಣೆ, ಸೇರಿದಂತೆ ವಿವಿಧ ವಿಚಾರಗಳು ಕುರಿತು ಚರ್ಚೆ ನಡೆಯಲಿದೆ.
ಸರ್ವಪಕ್ಷ ಸಭೆ ಕುರಿತು ಭಾನುವಾರ ರಾಮನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಎಚ್.ಡಿ ಕುಮಾರಸ್ವಾಮಿ ಅವರು, ಜೆಡಿಸ್ ಪಕ್ಷವನ್ನು ಇನ್ನೂ ಸಭೆ ಕೆರೆದಿಲ್ಲ ಎಂದರು. ಸರ್ಕಾರ ಕೆಲವು ಲಘುಗವಾಗಿ ನಿರ್ಧಾರಗಳನ್ನು ಕೈಗೊಂಡಿದೆ. ಈಗಾಗಲೇ ಕಾವೇರಿ ನೀರನ್ನು ಆ ರಾಜ್ಯಕ್ಕೆ ಹರಿಸಲಾಗಿದೆ. ವಿಪಕ್ಷ ಸ್ಥಾನಗಳ ಸ್ಥಾನದಲ್ಲಿರುವ ನಾವು ರಾಜ್ಯದ ಹಿತ ಪರ ಧ್ವನಿ ಎತ್ತಿದ್ದೇವೆ. ನನ್ನ ಒತ್ತಾಯದ ಮೇಲೆ ಸರ್ವಪಕ್ಷ ಸಭೆ ಕರೆಯಲಾಗಿದೆ. ಆದರೆ ಊರ ಕೊಳ್ಳೆ ಹೊಡೆದ ಮೇಲೆ ಈಗ ಸಭೆ ಕಡೆದರೆ ಏನು ಪ್ರಯೋಜನ ಎಂದು ಅವರು ಪ್ರಶ್ನೆ ಮಾಡಿದರು.
ಮೇಕೆದಾಟು ಪಾದಾಯಾತ್ರೆ: ಡಿಕೆಶಿ ವಿರುದ್ಧ ವ್ಯಂಗ್ಯ
ಕಾಂಗ್ರೆಸ್ ಮೇಕೆದಾಟು ಯೋಜನೆ ಸಂಬಂಧ ಪಾದಯಾತ್ರೆ ಮಾಡಿತ್ತು. ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗಿದ್ದರು. ನೀರಾವರಿ ವಿಚಾರದಲ್ಲಿ ರಾಜ್ಯದ ಜನರ, ರೈತರ ಹಿತ ಎಷ್ಟರ ಮಟ್ಟಿಗೆ ರಕ್ಷಣೆ ಆಗುತ್ತದೆ ಎಂದು ಈಗ ತಿಳಿಯಲಿದೆ ಎಂದು ಕಾಂಗ್ರೆಸ್ ಮೇಲೆ ಅವರು ವಾಗ್ದಾಳಿ ನಡೆಸಿದರು.

ಇನ್ನು ಮೇಕೆದಾಟು ಯೋಜನೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸು ಎಂದು ಹೇಳಲಾಗಿದೆ. ಸುಮಾರು 50 ಕೋಟಿಯಷ್ಟಿದ್ದ ಆಸ್ತಿಯನ್ನು 1400 ಕೋಟಿಗೆ ಹೆಚ್ಚಿಸುವುದು ಅವರ ಕನಸು. ಎರಡನೇ ಬಾರಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವನಾಗಿ 400ಕ್ಕೂ ಅಧಿಕ ಹಣದಲ್ಲಿ ಯೋಜನೆ ಜಾರಿಗೆ ತಂದಿದ್ದು ನಾನು.
ಡಿಕೆಶಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ: ದಾಖಲೆ ಬಿಡುಗಡೆ ಶೀಘ್ರ
ಡಿಕೆ ಶಿವಕುಮಾರ್ ನೈಸ್ ವ್ಯವಹಾರ ಎಂದು ಹೇಳಿದ್ದಾನೆ. ಯಾವನ್ರಿ ಅದು ನೈಸ್ ವ್ಯವಹಾರ ಮಾಡಿದವನು. ಇವರೆಲ್ಲ ರೈತರ ಭೂಮಿ ಹೇಗೆ ಲೂಟಿ ಹೊಡೆದರು ಎಂಬುದು ನನಗೂ ಗೊತ್ತಿದೆ. ಈ ಬಗ್ಗೆ ಇನ್ನೆರಡು ದಿನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಡಿಕೆ ಸಹೋದರರಿಗೆ ಏಕವಚನದಲ್ಲೇ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.












Click it and Unblock the Notifications