• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?

ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಕುಮಾರಸ್ವಾಮಿ. 2006 ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಯಾರು.? ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟು ಕೊಡದೇ ಮೋಸ ಮಾಡಿದ್ದು ಕುಮಾರಸ್ವಾಮಿ, ಅವತ್ತು ಅಧಿಕಾರ ಬಿಟ್ಟು ಕೊಟ್ಟಿದ್ರೆ, ಇವತ್ತು ಬಿಜೆಪಿ ಈ ಮಟ್
|
Google Oneindia Kannada News

ಬೆಂಗಳೂರು,ಜನವರಿ25: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಕಾರಣವೇ ಕುಮಾರಸ್ವಾಮಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಕುಮಾರಸ್ವಾಮಿ. 2006 ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಯಾರು.? ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟು ಕೊಡದೇ ಮೋಸ ಮಾಡಿದ್ದು ಕುಮಾರಸ್ವಾಮಿ, ಅವತ್ತು ಅಧಿಕಾರ ಬಿಟ್ಟು ಕೊಟ್ಟಿದ್ರೆ, ಇವತ್ತು ಬಿಜೆಪಿ ಈ ಮಟ್ಟಿಗೆ ಬೆಳೆಯುತ್ತಲೇ ಇರಲಿಲ್ಲ. ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ದೇವೇಗೌಡರು ಬದುಕಿರುವಾಗಲೇ ಕುಮಾರಸ್ವಾಮಿ ಸಿಎಂ ಆಗಬೇಕು: ಹೆಚ್.ಡಿ ರೇವಣ್ಣದೇವೇಗೌಡರು ಬದುಕಿರುವಾಗಲೇ ಕುಮಾರಸ್ವಾಮಿ ಸಿಎಂ ಆಗಬೇಕು: ಹೆಚ್.ಡಿ ರೇವಣ್ಣ

ಬಿಜೆಪಿ ಒಂದು ಸಂಚು ರೂಪಿಸಿದ್ದಾರೆ, ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಇದ್ದಾರೆ. 2023 ರ ಚುನಾವಣೆಯಲ್ಲಿ ಸೋಲ್ತೀವಿ ಅಂತಾ ಮನವರಿಕೆ ಆಗಿದೆ. ಹೀಗಾಗಿ ಹೇಗಾದ್ರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಅಂತಾ ಹುನ್ನಾರ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಕೌಂಟರ್ ಕೊಟ್ಟಿದ್ದು ಯಾಕೆ ಗೊತ್ತಾ?

ಮುಸ್ಲಿಂ ಬಂಧುಗಳು ಕಾಂಗ್ರೆಸ್ ನವರನ್ನ ನಂಬಬೇಡಿ. ನಿಮ್ಮನ್ನ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ರಾಯಚೂರಿನಲ್ಲಿ ಮುಸ್ಲಿಂ ಮತದಾರರಿಗೆ ಕಿವಿ ಮಾತನ್ನ ಹೇಳಿದ್ದು, ಈ ಹೇಳಿಕೆಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಹಿಂದೂ,ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯಾರೇ ಇರಲಿ ನನಗೆ ಅಣ್ಣ - ತಮ್ಮಂದಿರು. ನಾನು ಯಾವುದೇ ಬೇಧಭಾವ ಮಾಡಲ್ಲ ಬಡತನ ಮತ್ತು ಶ್ರೀಮಂತಿಕೆ ಎರಡೇ ನನ್ನ ಮುಂದೆ ಇರುವ ಜಾತಿಗಳು. ಇದನ್ನು ಹೋಗಲಾಡಿಸಬೇಕಾಗಿದೆ. ಯಾವ ಕಾಂಗ್ರೆಸ್ ನಾಯಕರು ಮಾತು ಎತ್ತಿದ್ರೆ ನೀವೂ ಜೆಡಿಎಸ್ ಗೆ ಓಟು ಹಾಕಬೇಡಿ. ಜೆಡಿಎಸ್ ಗೆ ಓಟು ಹಾಕಿದ್ರೆ ಬಿಜೆಪಿಗೆ ಓಟು ಹಾಕಿದಂತೆ. ಜೆಡಿಎಸ್ ಬಿಜೆಪಿ ಜೊತೆಗೆ ಸರ್ಕಾರ ಮಾಡಿ ಬಿಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿ ದಾರಿ ತಪ್ಪಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

130 ಸ್ಥಾನ ಇದ್ದವರು 70ಕ್ಕೆ ಇಳಿದ್ದು, ಬಿಜೆಪಿಯವರಿಗೆ 104ಕ್ಕೆ ತೆಗೆದುಕೊಂಡು ಹೋದ್ರು, ಇದು ಕಾಂಗ್ರೆಸ್ ನವರ ಸಾಧನೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಇಷ್ಟು ಅಪಮಾನ ಮಾಡಿದ್ರೂ ನಾನು ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿದೆ, ಅದು ಉಳಿಸಿಕೊಂಡರಾ..? ನನಗೆ ಆರಂಭದ ದಿನದಿಂದಲೂ ನನ್ನನ್ನ ತೆಗೆಯಲು ಹೊರಟ್ಟರು, ಇಂತಹ ಸರ್ಕಾರ ತಂದು ಶೇ.40 ರಷ್ಟು ಸರ್ಕಾರ ಅಂತ ಈಗ ಹೇಳುತ್ತಾರೆ. ಈ ಸರ್ಕಾರ ತರಲು ಯಾರು ಕಾರಣ ಅಂತ ಕಾಂಗ್ರೆಸ್ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಗೆ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ
English summary
karnataka Assembly Elections 2023; Kumaraswamy is the reason why BJP came to power in the state Said Siddaramaiah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X