ಕುಮಾರಸ್ವಾಮಿ ಸಂಪುಟದ ಖಾತೆ ಹಂಚಿಕೆ: ದೇವೇಗೌಡ್ರ ಮಾಸ್ಟರ್ ಮೈಂಡ್

Recommended Video

      ಎಚ್ ಡಿ ಕುಮಾರಸ್ವಾಮಿ ಸಂಪುಟ ಖಾತೆ ಹಂಚಿಕೆ ಹಿಂದಿದೆ ಎಚ್ ಡಿ ದೇವೇಗೌಡ್ರ ಮಾಸ್ಟರ್ ಮೈಂಡ್ | Oneindia Kannada

      ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಸುಮಾರು ಐವತ್ತು ಗಂಟೆಯ ನಂತರ, ಸಚಿವರಿಗೆ ಕೊನೆಗೂ ಖಾತೆ ಘೋಷಣೆಯಾಗಿದೆ. ಮಾಧ್ಯಮಗಳಲ್ಲಿ ಹರಿದಾಡಿತ್ತಿದ್ದ ಪಟ್ಟಿಗೂ, ಅಧಿಕೃತ ಪಟ್ಟಿಗೂ ಬಹಳಷ್ಟು ವ್ಯತ್ಯಾಸಗಳಿವೆ.

      ಸಚಿವಸ್ಥಾನ ಸಿಗದೇ ಇದ್ದಿದ್ದಕ್ಕೆ ಕಾಂಗ್ರೆಸ್ಸಿನಲ್ಲಿ ತೀವ್ರ ಅಸಮಾಧಾನವಿದ್ದರೂ, ಜೆಡಿಎಸ್ ಪಕ್ಷಕ್ಕೆ ಅಷ್ಟಾಗಿ ಆ ಸಮಸ್ಯೆಯಿಲ್ಲ. ಆದರೆ, ಕೆಲವೊಂದು ಖಾತೆ ತಮಗೇ ಬೇಕೆಂದು ಎಚ್ ಡಿ ರೇವಣ್ಣ ಮತ್ತು ಸಿ ಎಸ್ ಪುಟ್ಟರಾಜು ಪಟ್ಟು ಹಿಡಿದಿದ್ದರು ಎನ್ನುವ ಸುದ್ದಿಯಿತ್ತು.

      ಎಂತೆಂಥಾ ರಾಜಕೀಯ ನೋಡಿದ ದೇವೇಗೌಡರಿಗೆ, ಪಕ್ಷದೊಳಗಿನ ಸಮಸ್ಯೆಯನ್ನು ಬಗೆಹರಿಸುವುದು ಒಂದು ಲೆಕ್ಕನಾ.. ಹಾವೂ ಸಾಯಬಾರದು.. ಕೋಲೂ ಮುರಿಯಬಾರದು ಎನ್ನುವ ರೀತಿಯಲ್ಲಿ ತಮ್ಮ ಪಕ್ಷದ ಸಚಿವರಿಗೆ ಯಾವ ಖಾತೆಯನ್ನು ನೀಡಬೇಕು ಎನ್ನುವುದನ್ನು ತಮ್ಮದೇ ಸ್ಟೈಲಿನಲ್ಲಿ ನಿರ್ಧರಿಸಿಬಿಟ್ಟಿದ್ದಾರೆ.

      ಇಂಧನ ಖಾತೆಯನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು, ಇನ್ನೊಂದು ಪ್ರಭಾವಿ ಖಾತೆಯನ್ನು ಜೆಡಿಎಸ್ ಪಡೆದುಕೊಳ್ಳುವ ವಿಚಾರದಲ್ಲಿ ಭಾರೀ ಚರ್ಚೆಯಾಗುತ್ತಿದೆ ಎಂದೆಲ್ಲಾ ಗುಲ್ಲೆಬ್ಬಿತ್ತು. ಜೊತೆಗೆ, ತಮ್ಮ ಪುತ್ರ ರೇವಣ್ಣ, ಎರಡೆರಡು ಖಾತೆಗೆ ಡಿಮಾಂಡ್ ಮಾಡುತ್ತಿದ್ದಾರೆಂದೂ ಸುದ್ದಿಯಾಗಿತ್ತು.

      ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಘೋಷಣೆಯಾದ ಖಾತೆಗಳನ್ನು ಅವಲೋಕಿಸುವುದಾದರೆ, ಆಕಡೆ ಕೊಟ್ಟಂಗೂ ಆಗಬೇಕು, ಈಕಡೆ ಬಿಟ್ಟಂಗೂ ಇರಬೇಕು ಎನ್ನುವ ರೀತಿಯಲ್ಲಿ, ಕೆಲವು ಸಚಿವರಿಗೆ ಪ್ರಮುಖ ಖಾತೆಯನ್ನು ನೀಡದೇ ಮೂಗಿಗೆ ತುಪ್ಪ ಸುರಿಯವ ಕೆಲಸವನ್ನು ಮಾಡಲಾಗಿದೆ. ಇಂಧನ ಖಾತೆ, ಇದೇ ಗೌಡ್ರ ತಂತ್ರಗಾರಿಕೆ..ಮುಂದೆ ಓದಿ..

      ಪ್ರಭಾವಿ ಲೋಕೋಪಯೋಗಿ ಮತ್ತು ಇಂಧನ ಖಾತೆ

      ಪ್ರಭಾವಿ ಲೋಕೋಪಯೋಗಿ ಮತ್ತು ಇಂಧನ ಖಾತೆ

      ರೇವಣ್ಣ ಎರಡೆರಡು ಅದರಲ್ಲೂ ಪ್ರಭಾವಿ ಲೋಕೋಪಯೋಗಿ ಮತ್ತು ಇಂಧನ ಖಾತೆ ತನಗೆ ಬೇಕೆಂದು ಪಟ್ಟು ಹಿಡಿದಿದ್ದಾಗ, ತಮಗೂ ಪ್ರಮುಖ ಖಾತೆ ಬೇಕೆಂದು ಪಟ್ಟು ಹಿಡಿದವರು, ಗೌಡ್ರ ಆಪ್ತವಲಯದಲ್ಲೇ ಕಾಣಿಸಿಕೊಳ್ಳುವ ಮೇಲುಕೋಟೆ ಶಾಸಕ ಸಿ ಎಸ್ ಪುಟ್ಟರಾಜು, ಇದು ಭಾರೀ ಸುದ್ದಿಯಾಗಿತ್ತು ಕೂಡಾ. ಪ್ರಭಾವಿ ಖಾತೆಯ ಆಕಾಂಕ್ಷಿಯಾಗಿದ್ದ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆಯನ್ನು ನೀಡಿ, ಗೌಡ್ರು ಟವೆಲ್ ಕೆಡವಿಕೊಂಡಿದ್ದಾರೆ.

      ಕೊನೆಯ ಸೊಸೆಯ ತಂದೆ, ಮದ್ದೂರು ಶಾಸಕ ಡಿ ಸಿ ತಮ್ಮಣ್ಣ

      ಕೊನೆಯ ಸೊಸೆಯ ತಂದೆ, ಮದ್ದೂರು ಶಾಸಕ ಡಿ ಸಿ ತಮ್ಮಣ್ಣ

      ತಮ್ಮ ಕೊನೆಯ ಸೊಸೆಯ ತಂದೆ, ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಅವರಿಗೆ ಪ್ರಭಾವಿ ಖಾತೆ ಕುಮಾರಸ್ವಾಮಿ ಸಂಪುಟದಲ್ಲಿ ಸಿಕ್ಕಿದೆ. ತಮ್ಮಣ್ಣ ನೂತನ ಸಾರಿಗೆ ಸಚಿವರಾಗಲಿದ್ದಾರೆ. ಸರಕಾರದ ಅತ್ಯಂತ ಆಯಕಟ್ಟಿನ ಸಚಿವಾಲಯದಲ್ಲಿ ಒಂದಾಗಿರುವ ಸಾರಿಗೆ ಖಾತೆಯನ್ನು ಗೌಡ್ರು, ತಮ್ಮ ಬೀಗರಿಗೆ ನೀಡಿ ಇಲಾಖೆಯ ಮೇಲೆ ಹಿಡಿತ ಮುಂದುವರಿಸಲಿದ್ದಾರೆ.

      ಡಿಕೆಶಿ ಮತ್ತು ರೇವಣ್ಣ ನಡುವೆ ತೀವ್ರ ಪೈಪೋಟಿ

      ಡಿಕೆಶಿ ಮತ್ತು ರೇವಣ್ಣ ನಡುವೆ ತೀವ್ರ ಪೈಪೋಟಿ

      ಇಂಧನ ಖಾತೆಯ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಮತ್ತು ಎಚ್ ಡಿ ರೇವಣ್ಣನವರ ನಡುವೆ ತೀವ್ರ ಪೈಪೋಟಿ ಇದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇಬ್ಬರೂ ಇದನ್ನು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಂಡಾಗ, ಸಂಪುಟ ವಿಸ್ತರಣೆಯೇ ಕಗ್ಗಂಟಾಗಿ ಪರಿಣಮಿಸಿತ್ತು. ಆದರೂ, ಯಾವ ಖಾತೆ ಯಾವ ಪಕ್ಷಕ್ಕೆ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಹೊಂದಾಣಿಕೆಗೆ ಬಂದಿತ್ತು. ಅದರಂತೇ, ಇಂಧನ ಖಾತೆ ಜೆಡಿಎಸ್ ಪಕ್ಷಕ್ಕೆಂದಾಗಿತ್ತು.

      ಇಂಧನ ಖಾತೆಯೂ ತನಗೆ ಬೇಕೆಂದು ರೇವಣ್ಣ ಹಠ

      ಇಂಧನ ಖಾತೆಯೂ ತನಗೆ ಬೇಕೆಂದು ರೇವಣ್ಣ ಹಠ

      ಡಿಕೆ ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಸಿಗುವುದೋ ಇಲ್ಲವೋ ಎನ್ನುವ ಅನುಮಾನದ ಸುದ್ದಿ ಕಾಂಗ್ರೆಸ್ ಪಡಶಾಲೆಯನ್ನು ಸುತ್ತಾಡುತ್ತಿತ್ತು. ಇಂಧನ ಖಾತೆಯ ಮೇಲೆ ಆಸೆಯನ್ನೂ ಡಿಕೆಶಿ ಬಿಟ್ಟಿದ್ದರು. ಆದರೆ, ಆ ಖಾತೆಯ ಮೇಲೆ ಗೌಡ್ರ ಪುತ್ರ ರೇವಣ್ಣ ಕಣ್ಣಿಟ್ಟಿದ್ದರಿಂದ, ಗೊಂದಲಗಳು ಆರಂಭವಾದವು. ಲೋಕೋಪಯೋಗಿ ಜೊತೆ, ಇಂಧನ ಖಾತೆಯೂ ತನಗೆ ಬೇಕೆಂದು ರೇವಣ್ಣ ಹಠ ಹಿಡಿದಿದ್ದರಿಂದ ದೇವೇಗೌಡರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

      ರೇವಣ್ಣನಾದರೇನು, ಕುಮಾರಸ್ವಾಮಿ ಆದರೇನು, ಇಬ್ಬರೂ ಮಕ್ಕಳ್ಳಲ್ಲವೇ

      ರೇವಣ್ಣನಾದರೇನು, ಕುಮಾರಸ್ವಾಮಿ ಆದರೇನು, ಇಬ್ಬರೂ ಮಕ್ಕಳ್ಳಲ್ಲವೇ

      ಕೊನೆಗೆ, ಇಂಧನ ಖಾತೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯ ಸುಪರ್ದಿಗೆ ವಹಿಸಿ ಸದ್ಯದ ಮಟ್ಟಿಗೆ ಗೌಡ್ರು ಕೈತೊಳೆದುಕೊಂಡಿದ್ದಾರೆ. ರೇವಣ್ಣನಾದರೇನು, ಕುಮಾರಸ್ವಾಮಿ ಆದರೇನು, ಇಬ್ಬರೂ ಮಕ್ಕಳ್ಳಲ್ಲವೇ.. ಅಲ್ಲಿಗೆ, ರೇವಣ್ಣನನ್ನೂ ಸಮಾಧಾನ ಪಡಿಸಿ, ಗೌಡ್ರು ಮತ್ತೆ ತಮ್ಮ ರಾಜಕೀಯವನ್ನು ತೋರಿಸಿದ್ದಾರೆ... ಇಲ್ಲಿ ಕುಮಾರಸ್ವಾಮಿ, ರೇವಣ್ಣ ಲೆಕ್ಕಕ್ಕೆ ಮಾತ್ರ..

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+