ತಿಂಗಳಲ್ಲಿ ಮೂರು ಬಾರಿ ಹೇಳಿಕೆ ಬದಲಾಯಿಸಿದ್ದಾರೆ ಕುಮಾರಸ್ವಾಮಿ

Recommended Video

      ಎಚ್ ಡಿ ಕುಮಾರಸ್ವಾಮಿಯವರು ತಿಂಗಳಲ್ಲಿ 3 ಬಾರಿ ಮಾತು ಬದಲಾಯಿಸಿದ್ಯಾಕೆ? | Oneindia Kannada

      ಬೆಂಗಳೂರು, ಜೂನ್ 26: ರಾಜಕಾರಣಿಗಳು ಸುಳ್ಳಾಡುತ್ತಾರೆ ಎಂಬುದು ಜನಜನಿತ ಆದರೆ ತೀರಾ ಹೀಗೆ ಒಂದೇ ತಿಂಗಳಲ್ಲಿ ಮೂರು ಬಾರಿ ಬೇರೆ ಬೇರೆ ಹೇಳಿಕೆ ಕೊಡಬಹುದೇ. ಅದೂ ಮುಖ್ಯಮಂತ್ರಿಯಾಗಿ.

      ಹೌದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಂಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಪುಣ್ಯವಶಾತ್ ಇದು ರಾಜಕೀಯಕ್ಕೆ ಸಂಬಂಧಿಸಿದ ವಿಷಯ, ಆಡಳಿತದ್ದಲ್ಲ.

      ಅಧಿಕಾರ ವಹಿಸಿಕೊಂಡ ದಿನ ಮುಖ್ಯಮಂತ್ರಿ ಅವರು ಹೇಳಿದ ಮಾತು ನೆನಪಿರಲಿಕ್ಕೆ ಸಾಕು. 'ನಾನು ರಾಜಕೀಯದ ಸಾಂದರ್ಭಿಕ ಶಿಶು' ಎಂದಿದ್ದರು ಕುಮಾರಸ್ವಾಮಿ. ಆ ಮೂಲಕ ಬೇರೆಯವರು ತನ್ನನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡು ಮುಖ್ಯಮಂತ್ರಿ ಸ್ಥಾನದ ಮೇಲೆ ಕೂರಿಸಿದ್ದಾರೆ ಎಂದಿದ್ದರು.

      ಕಾಂಗ್ರೆಸ್‌ನ ಮರ್ಜಿಯಲ್ಲಿದ್ದೇನೆ

      ಕಾಂಗ್ರೆಸ್‌ನ ಮರ್ಜಿಯಲ್ಲಿದ್ದೇನೆ

      ಅದಾದ ಕೆಲವು ದಿನಗಳ ನಂತರ ಸಾಲಮನ್ನಾ ವಿಷಯ ಚರ್ಚೆಯ ಆರಂಭದಲ್ಲಿ 'ನಾನು ಜನಗಳ ಮರ್ಜಿಯಲ್ಲಿಲ್ಲ ಕಾಂಗ್ರೆಸ್‌ನ ಮರ್ಜಿಯಲ್ಲಿದ್ದೇನೆ' ಎಂದು ಬಿಟ್ಟರು. ಈ ಹೇಳಿಕೆಯಂತೂ ಮೈತ್ರಿ ಸರ್ಕಾರ ಬಿದ್ದೇ ಹೋಗುತ್ತದ್ದೇನೋ ಎಂಬ ಮಟ್ಟಿಗೆ ಅಲ್ಲೋಲ ಕಲ್ಲೋಕ ಸೃಷ್ಠಿಸಿತ್ತು. ಬಿಜೆಪಿ ಮತ್ತು ಸಾಮಾಜಿಕ ಜಾಲತಾಣವಂತೂ ಸಿಎಂ ಅವರ ಈ ಹೇಳಿಕೆಯನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡು ಬಿಟ್ಟಿತ್ತು.

      ಈಗ ಮತ್ತೆ ವರಸೆ ಬದಲು

      ಈಗ ಮತ್ತೆ ವರಸೆ ಬದಲು

      ನಿನ್ನೆ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಸಂಪೂರ್ಣ ಭಿನ್ನ ಹೇಳಿಕೆ ನೀಡಿದ್ದಾರೆ. 'ನಾನು ಯಾರ ಹಂಗಿನಲ್ಲೂ ಇಲ್ಲ' ಎಂದು ಗುಡುಗಿದ್ದಾರೆ ಸಿಎಂ. ಆ ಮೂಲಕ ತಾವು ಮುಖ್ಯಮಂತ್ರಿ ನನ್ನದೇ ಇಲ್ಲಿ ಅಂತಿಮ ನಿರ್ಧಾರ ಎಂಬ ಛಾತಿಯನ್ನೂ ಪ್ರದರ್ಶಿಸಿದ್ದಾರೆ.

      ಎಚ್‌ಡಿಕೆ ಹೇಳಿಕೆಗಳ ಹಿನ್ನೆಲೆ ಏನು?

      ಎಚ್‌ಡಿಕೆ ಹೇಳಿಕೆಗಳ ಹಿನ್ನೆಲೆ ಏನು?

      ಕುಮಾರಸ್ವಾಮಿ ಅವರ ಈ ಹೇಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುತ್ತದೆ. ಇದು ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿದ್ದರೂ ಸಹ ಹೊರಗಿನ ಶಕ್ತಿಗಳು ತಮ್ಮ ಮೇಲೆ ಪ್ರಭಾವ ಬೀರದ ಎತ್ತರಕ್ಕೆ ಏರುವ ಪ್ರಯತ್ನ ಮಾಡುತ್ತಿದ್ದಾರೆಂದು.

      ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ

      ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ

      ನಿನ್ನೆ ಅವರು ಮಾತನಾಡಿದ ಮಾತುಗಳಂತೂ ನೇರವಾಗಿ ಸಿದ್ದರಾಮಯ್ಯ ಅವರ ಕಡೆಗೆ ಗುರಿ ಮಾಡಿದ್ದವು. ಸಿದ್ದರಾಮಯ್ಯ ಅವರು ಸರ್ಕಾರವನ್ನು ಹೊರಗಿನಿಂದ ನಿಯಂತ್ರಿಸುವ ಪ್ರಯತ್ನದಲ್ಲಿರುವರು. ಅವರ ಹಿಡಿತಕ್ಕೆ ಸಿಕ್ಕದೆ ಹಾರಿ ಅವರನ್ನು ನೆಲದಲ್ಲೇ ಉಳಿಸುವ ತಂತ್ರ ಕುಮಾರಸ್ವಾಮಿ ಅವರದ್ದು.

      ಕುತೂಹಲ ಮೂಡಿಸಿದೆ ಈ ಇಬ್ಬರ ಕುಸ್ತಿ

      ಕುತೂಹಲ ಮೂಡಿಸಿದೆ ಈ ಇಬ್ಬರ ಕುಸ್ತಿ

      ಕುಮಾರಸ್ವಾಮಿ ಅವರ ನಿನ್ನೆಯ ಮಾತು ನೋಡಿದರೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಸಾಂದರ್ಭಿಕ ಗೆಲುವು ಪಡೆದಂತಿದೆ. ಸಿದ್ದರಾಮಯ್ಯ ಕೂಡ ಸುಮ್ಮನೆ ಕೂರುವರಲ್ಲ ಪಟ್ಟಿಗೆ ಪ್ರತಿ ಪಟ್ಟು ಹಾಕುವರೇ. ಇಬ್ಬರ ನಡುವಿನ ರಾಜಕೀಯ ಹೋರಾಟ ಕುತೂಹಲ ಕೆರಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+