'ಸಿದ್ದರಾಮಯ್ಯ ಮತ್ತು ಕೆ.ಜೆ.ಜಾರ್ಜ್ ಹಕ್ಕಬುಕ್ಕರು'

Posted By:
Subscribe to Oneindia Kannada

ಬೆಂಗಳೂರು, ಜುಲೈ 14 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್ ಹಕ್ಕಬುಕ್ಕರು. ವಾರದಲ್ಲಿ ಎರಡು ಬಾರಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಕಪ್ಪಕಾಣಿಕೆ ಕೊಟ್ಟುಬರುತ್ತಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಪ್ರತಿ ಬಾರಿ ಸಿದ್ದರಾಮಯ್ಯ ಮತ್ತು ಜಾರ್ಜ್ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗುತ್ತಾರೆ. ಏಕೆ ಗೊತ್ತಾ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡಲು. ಎಷ್ಟು ಬಾರಿ ಹೋಗಿದ್ದಾರೆ? ಅಂತ ದಾಖಲೆ ತೆಗೆಯಿರಿ ನಿಮಗೆ ಗೊತ್ತಾಗುತ್ತೆ' ಎಂದು ಹೇಳಿದರು. [ಜಾರ್ಜ್ ರಾಜೀನಾಮೆಗೆ ವಿಪಕ್ಷಗಳ ಬಿಗಿ ಪಟ್ಟು]

hd kumaraswamy

'ಅನುಪಮಾ ಶೆಣೈ, ಕಲ್ಲಪ್ಪ ಹಂಡಿಭಾಗ್‌ಗೆ ಕಿರುಕುಳ ಕೊಟ್ಟಿರುವುದು ನಿಮಗೆಲ್ಲ ಗೊತ್ತಿದೆ. ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿದ ಸಿದ್ದರಾಮಯ್ಯ ಪರಮಾಪ್ತ ಮರಿಗೌಡನ ಬಂಧನ ಇನ್ನೂ ಆಗಿಲ್ಲ' ಎಂದು ಕುಮಾರಸ್ವಾಮಿ ದೂರಿದರು.[ಗಣಪತಿ ಆತ್ಮಹತ್ಯೆ, ಎಡಿಜಿಪಿ ಎ.ಎಂ.ಪ್ರಸಾದ್ ಹೇಳಿದ್ದೇನು?]

'ಇವೆಲ್ಲ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯ ನಿರ್ವಹಣೆಯ ಶೈಲಿ' ಎಂದು ಲೇವಡಿ ಮಾಡಿದ ಕುಮಾರಸ್ವಾಮಿ ಅವರು, 'ಸಿದ್ದರಾಮಯ್ಯ ಅವರ ಆಡಳಿತದಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿ, ಭ್ರಷ್ಟರಿಗೆ ರಕ್ಷಣೆ ಎಂಬುದು ಸಾಬೀತಾಗಿದೆ' ಎಂದು ಹೇಳಿದರು. ['ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು']

'ಸಿದ್ದರಾಮಯ್ಯ ಅವರು ನಾನು ಕುರುಬ ಸಮಾಜದ ಸಿಂಹ ಎನ್ನುತ್ತಾರೆ. ದಲಿತ ಸಮಾಜದ ಉದ್ಧಾರಕ ಎಂದು ಬೊಬ್ಬಿಡುತ್ತಾರೆ. ಆದರೆ, ಜಿಲ್ಲಾಧಿಕಾರಿ ಸಿ.ಶಿಖಾ ದಲಿತ ಮಹಿಳೆ. ಅವರಿಗೆ ರಕ್ಷಣೆ ಸಿಗುತ್ತಿಲ್ಲ. ಇವರ ಸಾಧನೆ ಏನೆಂಬುದು ರಾಜ್ಯದ ಜನರಿಗೆ ತಿಳಿದಿದೆ' ಎಂದು ಟೀಕಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Continuing his attack on Chief Minister Siddaramaiah and Minister KJ George former chief minister H.D. Kumaraswamy said both harassed Anupama Shenoy, Kallappa Handibag and other officials.
Please Wait while comments are loading...