Get Updates
Get notified of breaking news, exclusive insights, and must-see stories!

ನಿರ್ಮಾಪಕರ ವಿರುದ್ಧ ಸುದೀಪ್ ಹೂಡಿದ್ದ ಕೇಸ್ ರದ್ದಿಗೆ ಹೈಕೋರ್ಟ್ ನಕಾರ

ಬೆಂಗಳೂರು, ಮಾರ್ಚ್‌ 27: ತಮ್ಮ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿದ್ದಾರೆಂದು ನಿರ್ಮಾಪಕರಾದ ಎನ್‌. ಎಂ. ಸುರೇಶ್‌ ಮತ್ತಿತರರ ವಿರುದ್ಧ ನಟ ಸುದೀಪ್‌ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಹಾಗಾಗಿ ಎನ್. ಎಂ. ಸುರೇಶ್ ಹಾಗೂ ಕುಮಾರ್ ಅವರುಗಳು ಇದೀಗ ವಿಚಾರಣೆಯನ್ನು ಎದುರಿಸಲೇಬೇಕಿದೆ. ಅಷ್ಟೇ ಅಲ್ಲದೆ, ವಿಚಾರಣೆಯಲ್ಲಿ ಮಾನನಷ್ಟ ಆಗಿದೆ ಎಂಬುದು ದೃಢಪಟ್ಟರೆ ಅದಕ್ಕೆ ತಕ್ಕ ಬೆಲೆಯನ್ನೂ ತೆರಬೇಕಾಗುತ್ತದೆ.

HC Refused To Quash Case Against Film producer Filed By Actor Sudeep

ವಿಚಾರಣಾ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪ್ರಕರಣ ರದ್ದು ಕೋರಿ ನಿರ್ಮಾಪಕ ಎನ್‌. ಎಂ. ಸುರೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.

ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, "ದೂರು ಮತ್ತು ಅವರು ನೀಡಿರುವ ಸ್ವಯಂ ಹೇಳಿಕೆಯಲ್ಲಿ ಅಂಶಗಳನ್ನು ಗಮನಿಸಿದರೆ ಅರ್ಜಿದಾರರ ಹೇಳಿಕೆ ಅವಹೇಳನಕಾರಿಯಾಗಿದೆ ಮತ್ತು ಅದರಿಂದ ಸಮಾಜದಲ್ಲಿಅವರ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಮೇಲ್ನೋಟಕ್ಕೆ ದೂರುದಾರರ ಅನಿಸಿಕೆ ಸರಿಯಾಗಿದೆ. ಹಾಗಾಗಿ ವಿಚಾರಣಾ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿರುವುದರಲ್ಲಿ ಯಾವುದೇ ಲೋಪವಿಲ್ಲ, ಸರಿಯಾಗಿಯೇ ಇದೆ" ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲರು ವ್ಯಾಜ್ಯ ಇರುವುದು ದೂರುದಾರರು ಮತ್ತು ಒಂದನೇ ಪ್ರತಿವಾದಿ (ಎಂ. ಎನ್‌. ಕುಮಾರ್‌) ನಡುವೆ, ಇದರಲ್ಲಿಅನಗತ್ಯವಾಗಿ ತಮ್ಮ ಕಕ್ಷಿದಾರರನ್ನು ಸೇರಿಸಲಾಗಿದ್ದು, ಅವರು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ‍್ಯದರ್ಶಿ ಆಗಿರುವುದರಿಂದ ಅವರನ್ನು ಪ್ರತಿವಾದಿ ಮಾಡಲಾಗಿದೆ. ಹಾಗಾಗಿ ಅವರ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಎಂ. ಎನ್‌. ಕುಮಾರ್‌, ಎನ್‌. ಎಂ. ಸುರೇಶ್‌ ಮತ್ತಿತರರು ನಟ ಸುದೀಪ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಸಂದೇಶಗಳನ್ನು ಹರಿಯಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ನಟ ಸುದೀಪ್‌ ನಿರ್ಮಾಪಕರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಆ ಕುರಿತು ವಿಚಾರಣೆ ನಡೆಸಿದ್ದ ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್‌, ಮೇಲ್ನೋಟಕ್ಕೆ ದೂರಿನಲ್ಲಿಸತ್ಯಾಂಶ ಇದೆ ಎಂದು ಮನಗಂಡು ಎನ್‌. ಎಂ. ಸುರೇಶ್‌ ಮತ್ತಿತರರ ನಿರ್ಮಾಪಕರಿಗೆ ಸಮನ್ಸ್‌ ಜಾರಿಗೊಳಿಸಿತ್ತು. ನಂತರ ಆರೋಪಿಗಳಿಬ್ಬರು ವಿಚಾರಣಾ ಕೋರ್ಟ್‌ನಲ್ಲಿಹಾಜರಾಗಿ ಜಾಮೀನು ಪಡೆದುಕೊಂಡಿದ್ದರರು. ಆದರೆ ಸಮನ್ಸ್‌ ರದ್ದು ಕೋರಿ ನಿರ್ಮಾಪಕ ಎನ್‌. ಎಂ. ಸುರೇಶ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+