ಶಿಕ್ಷಕನ ವಿರುದ್ಧ 14 ಲೈಂಗಿಕ ಕಿರುಕುಳ ಎಫ್‌ಐಆರ್, ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು, ಜು.4: ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರದಲ್ಲಿರುವ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ವಿರುದ್ಧ ದಾಖಲಾಗಿದ್ದ 14 ಲೈಂಗಿಕ ಕಿರುಕುಳ ಪ್ರಕರಣಗಳ ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್)ಗಳನ್ನು ರದ್ದುಗೊಳಸಿಲು ಹೈಕೋರ್ಟ್ ನಿರಾಕರಿಸಿದೆ.
ಅಲ್ಲದೆ, ಶಿಕ್ಷಕರ ಮೂರ್ನಾಲ್ಕು ತಿಂಗಳ ಕಾಲ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದರಿಂದ, ಇದು ಗಂಭೀರ ವಿಚಾರ ಹಾಗಾಗಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆದೇಶಿಸಿದೆ. ಇದರಿಂದಾಗಿ ಶಿಕ್ಷಕ ಕೆ.ಟಿ.ಪ್ರಭುನಾಯ್ಕ ಇದೀಗ ತನಿಖೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಶಿಕ್ಷಕ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಆದೇಶ ನೀಡಿದೆ. ಬಿಇಒ ನೀಡಿದ ದೂರಿನ ಆಧಾರದ ಮೇಲೆ 2022 ರ ಜ.15ರಂದು ಮೊದಲ ಎಫ್‌ಐಆರ್ ನೋಂದಣಿಯ ನಂತರ ವಿದ್ಯಾರ್ಥಿನಿಯರ ಪೋಷಕರ ದೂರುಗಳ ಆಧಾರದ ಮೇಲೆ ಇತರ 13 ವಿವಿಧ ಎಫ್‌ಐಆರ್‌ಗಳ ನೋಂದಣಿಯ ಕಾನೂನುಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಬ್ಲಾಕ್ ಶಿಕ್ಷಣಾಧಿಕಾರಿ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರು ನೀಡಿದ ಲೈಂಗಿಕ ಕಿರುಕುಳ/ಹಲ್ಲೆ ದೂರುಗಳನ್ನು ನೀಡಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಶಾಲೆಯ ಶಿಕ್ಷಕರೊಬ್ಬರು ವರದಿ ಕಳುಹಿಸಿದ ನಂತರ ಅರ್ಜಿದಾರರ ವಿರುದ್ಧ ಬಿಇಒ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ2012ರ ಸೆಕ್ಷನ್ 8, 10 ಮತ್ತು 12 ರ ಅಡಿಯಲ್ಲಿ ಎಫ್ಐಆರ್ ಹೂಡಲಾಗಿದೆ.

ಅರ್ಜಿದಾರರ ವಾದ ನಿರಾಕರಣೆ: ಒಂದೇ ಘಟನೆಯ ಮೇಲೆ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಎಫ್‌ಐಆರ್‌ಗಳ ವಿಷಯಗಳು ಇದು ಒಂದು ನಿರ್ದಿಷ್ಟ ದಿನದಂದು ನಡೆದ ಒಂದೇ ಒಂದು ಘಟನೆಯಲ್ಲ ಎಂಬುದನ್ನು ಬಹಿರಂಗಪಡಿಸುತ್ತದೆ. ದೂರುಗಳ ಪ್ರಕಾರ 2021ರ ಸೆಪ್ಟೆಂಬರ್ 1 ಮತ್ತು 2022ರ ಜನವರಿ 3ರ ನಡುವೆ ಒಂದರಿಂದ ಮೂರು ತಿಂಗಳವರೆಗೆ ಕಿರುಕುಳ ಘಟನೆಗಳು ನಡೆದಿವೆ ಎಂದು ನ್ಯಾಯಾಲಯ ಹೇಳಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಸಂತ್ರಸ್ತರು ಸಾಮಾನ್ಯರಲ್ಲ ಆದರೆ ವಿಭಿನ್ನವಾಗಿರುವುದರಿಂದ, ಪ್ರತಿ ಸಂತ್ರಸ್ತರು ದೂರು ದಾಖಲಿಸಿದ್ದಾರೆ. ಅದು ವಿಭಿನ್ನ ಅವಧಿಯ ಘಟನೆಗಳನ್ನು ಹೇಳುತ್ತದೆ. ಈ ಪ್ರಕರಣಗಳ ವಿಚಿತ್ರ ಸಂಗತಿಗಳನ್ನು ಒಳಗೊಂಡಿರುವುದರಿಂದ ಅಪರಾಧಗಳನ್ನು ಹಲವು ಎಫ್‌ಐಆರ್‌ಗಳಲ್ಲಿ ದಾಖಲಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರತಿಯೊಬ್ಬ ಸಂತ್ರಸ್ತರ ವಿರುದ್ಧದ ಆಪಾದಿತ ಕೃತ್ಯಗಳಿಗೆ ಅರ್ಜಿದಾರನು ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕು, ಏಕೆಂದರೆ ಅರ್ಜಿದಾರರು ಬಿಇಒ ದೂರಿನ ಆಧಾರದ ಮೇಲೆ ದಾಖಲಾದ ಎಫ್‌ಐಆರ್ ಅನ್ನು ಪ್ರಶ್ನಿಸಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಅಸಂಬದ್ಧ: ಶಾಲೆಯಲ್ಲಿ ತನ್ನ ವಿರುದ್ಧ ದ್ವೇಷ ಸಾಧಿಸುವ ವ್ಯಕ್ತಿಗಳು ಪೋಷಕರಿಗೆ ಆಮಿಷವೊಡ್ಡುವ ಮೂಲಕ ದೂರುಗಳನ್ನು ಸೃಷ್ಟಿಸಲಾಗುತ್ತದೆ ಅಥವಾ ಬೆಳೆಸಲಾಗುತ್ತದೆ ಎಂಬ ಅರ್ಜಿದಾರರ ವಾದ ಅಸಂಬದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.
Recommended Video
ಯಾವುದೇ ಕಾರಣವಿಲ್ಲದೆ ತನ್ನ ಮಗುವನ್ನು ಲೈಂಗಿಕವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿ ಯಾವ ತಂದೆಯೂ ದೂರು ದಾಖಲಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications