• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ?

|
Google Oneindia Kannada News

ಹಾವೇರಿ, ಫೆಬ್ರವರಿ 4: ಯಾಲಕ್ಕಿ ನಗರಿ ಹಾವೇರಿಯಲ್ಲಿ ಇದೇ ಫೆ.26ರಿಂದ 28ರವರೆಗೆ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕೊರೊನಾ ಆತಂಕದ ನಡುವೆ ವಿವಿಧ ಸಿದ್ಧತೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಿಕೊಳ್ಳುತ್ತಿದೆ. ಆದರೆ, ಸರ್ಕಾರದಿಂದ ಅನುದಾನ ಮಂಜೂರಾಗದಿರುವುದು, ಸಿದ್ಧತೆಗೆ ಸಮಯ ಕಡಿಮೆ ಇರುವುದರಿಂದಾಗಿ ನಿರ್ಧಾರಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಸುವುದು ಅಸಾಧ್ಯವಾಗಿದೆ.

ಹಾವೇರಿ; ಫೆ. 26 ರಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನಹಾವೇರಿ; ಫೆ. 26 ರಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

ರಾಜ್ಯ ಸರ್ಕಾರವೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡದಿರುವುದು ಕನ್ನಡ ಸಾಹಿತ್ಯ ಕಡೆಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಫೆಬ್ರವರಿ ಮೊದಲ ವಾರದೊಳಗೆ ಸರ್ಕಾರದಿಂದ ಹಸಿರು ನಿಶಾನೆ ಸಿಗಬೇಕಿತ್ತು. ಅನುದಾನ ಬಿಡುಗಡೆ ಕುರಿತು ಪ್ರತಿಕ್ರಿಯೆ ಬಂದಿಲ್ಲ. ಕೊರೊನಾ ಮಾರ್ಗಸೂಚಿ ಸಡಿಲಿಕೆ ಕುರಿತು ಆರೋಗ್ಯ ಇಲಾಖೆಯಿಂದಲೂ ಸ್ಪಂದನೆ ಬಂದಿಲ್ಲ.

ಅವಸರವಸರವಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಅಸಾಧ್ಯವಾಗಿದ್ದು, ಕನಿಷ್ಠ 20-25 ದಿನ ಮುಂದೂಡುವಂತೆ ಸ್ವಾಗತ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಒಂಟಿ ಸಲಗಕ್ಕೆ ಸಾಥ್ ಕೊಟ್ಟಿದ್ದು ಯಾರು ಗೊತ್ತಾ?? | Oneindia Kannada

   ಈ ಕುರಿತು ಪ್ರತಿಕ್ರಿಯೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ದಿನಾಂಕ ನಿಗದಿ, ಸ್ಥಳ ಆಯ್ಕೆ, ಸಮ್ಮೇಳನಾಧ್ಯಕ್ಷರ ಆಯ್ಕೆ, ಗೋಷ್ಠಿಗಳ ಸಮಿತಿ ರಚನೆಯಂತಹ ವೆಚ್ಚವಿಲ್ಲದ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಸಮ್ಮೇಳನ ದಿನಾಂಕದ ಕುರಿತು ಸ್ವಾಗತ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

   English summary
   The 86th Akhila Bharata Kannada Sahitya Sammelana which is scheduled to take place from 25 to 27 February in Haveri is likely to be postponed.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X