ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ಜೆಡಿಎಸ್ ಅಭ್ಯರ್ಥಿ ದೊಡ್ಡಗೌಡರ ಆಸ್ತಿ ಎಷ್ಟು?

By Srinath
|
Google Oneindia Kannada News

ಹಾಸನ, ಮಾರ್ಚ್ 26: ಹಾಸನದ ಹೆಮ್ಮೆಯ ಪುತ್ರ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸಬಯಸಿದ್ದು, ನಿನ್ನೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜತೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಕುರಿತಾದ ಮಾಹಿತಿಯನ್ನೂ ನೀಡಿದ್ದಾರೆ.

ಕಳೆದ ಬಾರಿಗಿಂತ ಹೆಚ್ಚು ಆಸ್ತಿ: 2009ರ ಚುನಾವಣೆಯಲ್ಲಿ ದೇವೇಗೌಡ ಅವರು ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ ಅವರ ಕುಟುಂಬ ರೂ. 1.96 ಕೋಟಿ ಮೌಲ್ಯದ ಆಸ್ತಿ ಹೊಂದಿತ್ತು. ದಂಪತಿಯ ಬಳಿ 4.4 ಲಕ್ಷ ರೂ ಮೌಲ್ಯದ 15 ತೊಲ ಚಿನ್ನಾಭರಣವಿದೆ. ದೇವೇಗೌಡ ಅವರು 1951-52ರಲ್ಲಿ ಹಾಸನದ ಶ್ರೀಮತಿ ಎಲ್ ವಿ ಪಾಲಿಟೆಕ್ನಿಕ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮೊ ಮಾಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕುಟುಂಬದವರಿಂದಲೇ ಸಾಲ ಪಡೆದಿರುವ ಗೌಡರು:

ಕುಟುಂಬದವರಿಂದಲೇ ಸಾಲ ಪಡೆದಿರುವ ಗೌಡರು:

ಗೌಡರು ಒಟ್ಟು 4.27 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಅವರ ಚರಾಸ್ತಿ ಮೌಲ್ಯ 1.20 ಕೋಟಿ ರೂ. ನಷ್ಟಿದೆ. ದೇವೇಗೌಡ ಅವರು ಒಟ್ಟು 86.48 ಲಕ್ಷ ರೂಪಾಯಿ ಸಾಲ ಮಾಡಿದ್ದು, ಇದರಲ್ಲಿ ತಮ್ಮ ಕುಟುಂಬ ಸದಸ್ಯರಿಂದಲೇ 86.22 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ.

ಗೌಡರ ಬಳಿಯಿವೆ ಹಳೆ ಕಾರುಗಳು:

ಗೌಡರ ಬಳಿಯಿವೆ ಹಳೆ ಕಾರುಗಳು:

ದೇವೇಗೌಡ ಅವರ ಬಳಿ ಯಾವುದೇ ಹೊಸ ಕಾರು ಇಲ್ಲ. 1947 ಮಾಡೆಲ್‌ ಕಾರು ಸೇರಿದಂತೆ ಒಟ್ಟು 3 ಅಂಬಾಸಿಡರ್ ಕಾರುಗಳಿವೆ. ದೇವೇಗೌಡ ಹಾಗೂ ಪತ್ನಿ ಚನ್ನಮ್ಮ ಇಬ್ಬರೂ ತಲಾ 44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.

ಗೌಡರ ಕೃಷಿ ಭೂಮಿ ಎಷ್ಟಿದೆ:

ಗೌಡರ ಕೃಷಿ ಭೂಮಿ ಎಷ್ಟಿದೆ:

ಹೊಳೆನರಸೀಪುರ ತಾಲ್ಲೂಕಿನಲ್ಲಿ ದೇವೇಗೌಡ ಅವರು 24.18 ಲಕ್ಷ ರೂಪಾಯಿ ಹಾಗೂ ಚನ್ನಮ್ಮ 6.5 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಇದಲ್ಲದೆ ಚನ್ನಮ್ಮ ಅವರು ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿ 2.3 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ.

ಪತಿ ಪತ್ನಿಗೆ, ಪತ್ನಿ ಮೊಮ್ಮಗನಿಗೆ ಸಾಲ:

ಪತಿ ಪತ್ನಿಗೆ, ಪತ್ನಿ ಮೊಮ್ಮಗನಿಗೆ ಸಾಲ:

ದೇವೇಗೌಡ ಅವರು ಪತ್ನಿ ಚನ್ನಮ್ಮ ಅವರಿಗೆ 11.27 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಚನ್ನಮ್ಮ ಅವರು ತಮ್ಮ ಮೊಮ್ಮಗ ಆರ್ ಸೂರಜ್‌ ಗೆ 20 ಲಕ್ಷ ರೂಪಾಯಿ ಸಾಲ ನೀಡಿರುವುದಾಗಿ ಅಫಿಡವಿಟ್‌ ನಲ್ಲಿ ತಿಳಿಸಲಾಗಿದೆ. (ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ)

English summary
Lok Sabha Election 2014 - Hassan JDS candidate HD Deve Gowda files nomination assets affidavit. The former Prime Minister Deve Gowda and his wife Channamma have total assets of RS. 4.27 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X