ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದಿಂದ ಎಂಟುದಿನ ಹಾಸನಾಂಬೆ ದರ್ಶನ

|
Google Oneindia Kannada News

ಹಾಸನ, ಅ.15 : ಪುರಾಣ ಪ್ರಸಿದ್ಧ ಹಾಸನಾಂಬ ಜಾತ್ರೆ ಗುರುವಾರ ಆರಂಭವಾಗಲಿದ್ದು, ಜಿಲ್ಲಾಡಳಿತ ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದೆ. ಈ ಬಾರಿ ಎಂಟು ದಿನ ಮಾತ್ರ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ.

ಹಾಸನ ಜಿಲ್ಲಾಧಿಕಾರಿ ಅನ್ಬು­ಕುಮಾರ್‌ ಜಾತ್ರೆಯ ಬಗ್ಗೆ ಮಾಹಿತಿ ನೀಡಿದ್ದು, ಅ.16ರ ಗುರುವಾರದಿಂದ ಎಂಟು ದಿನಗಳ ಕಾಲ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಒಂದೇ ದಿನ 31 ಸಾವಿರ ಭಕ್ತರು ಆಗಮಿಸಿದ್ದರು. ಆದ್ದರಿಂದ ಈ ಬಾರಿ ಭಕ್ತರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. [ಎಂಟು ದಿನ ಹಾಸನಾಂಬೆ ದರ್ಶನ ಪಡೆಯಿರಿ]

Hasanamba temple

ಎಂಟು ದಿನ ಮಾತ್ರ ದೇವಾಲಯದ ಬಾಗಿಲು ತೆರೆದಿರುವುದರಿಂದ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ, ಧರ್ಮದರ್ಶನದಲ್ಲಿ ಬರುವ ಭಕ್ತರಿಗೆ ಮತ್ತು 250 ರೂ. ಪಾಸ್ ಪಡೆದು ಬರುವವರಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. [ಹಾಸನಾಂಬೆ ಸ್ಥಳಪುರಾಣ ಓದಿ]

ಬಿಗಿ ಪೊಲೀಸ್ ಭದ್ರತೆ : ಒಟ್ಟು ಎಂಟು ದಿನಗಳ ಕಾಲ ಮೂರು ಪಾಳಿಗಳಲ್ಲಿ 250 ಪೊಲೀಸರು ದೇವಾಲಯದ ಸುತ್ತಮುತ್ತ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ. ದೇವಾಲಯದೊಳಗೆ ಸಮಸ್ತ್ರಧಾರಿ ಪೊಲೀಸರು ನಿಲ್ಲುವುದಕ್ಕೆ ಭಕ್ತರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ.

ದೇವಾಲಯದ ಗರ್ಭಗುಡಿ ಸಮೀಪ ಮಫ್ತಿಯಲ್ಲಿರುವ ಪೊಲೀಸರು ಇರಲಿದ್ದು, ಶಸ್ತ್ರ ಸಜ್ಜಿತವಾದ ಪೊಲೀಸರು ಹೊರ ಭಾಗದಲ್ಲಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಎಸ್ಪಿ ರವಿ ಡಿ.ಚನ್ನಣ್ಣ ಅವರು ಮಾಹಿತಿ ನೀಡಿದ್ದಾರೆ. ಭದ್ರತಾ ದೃಷ್ಟಿಯಿಂದ ದೇವಾಲಯದ ಸುತ್ತಮುತ್ತ ಸಿಸಿಟಿವಿಗಳನ್ನು ಸಹ ಆಳವಡಿಸಲಾಗಿದೆ.

ಭಕ್ತರು ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದಾಗಿದೆ. ಪ್ರತಿ ಸಂವತ್ಸರದ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ದೇವಿಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ. 2013ರಲ್ಲಿ 13 ದಿನಗಳ ಕಾಲ ಮತ್ತು 2012ರಲ್ಲಿ 15 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಎಂಟು ದಿನ ದರ್ಶನ ಪಡೆಯಬಹುದಾಗಿದೆ.

English summary
The historic Hasanamba Temple in Hassan district, Karnataka will be open for eight days from October 16 Thursday said, Deputy Commissioner of Hassan V Anbu Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X