• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿ

|

ಬೆಂಗಳೂರು, ಅಕ್ಟೋಬರ್ 17 : ಹರಿಹರ-ಹೊಸಪೇಟೆ-ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಇಂದು ಚಾಲನೆ ಸಿಗಲಿದೆ. ಅಕ್ಟೋಬರ್ 18ರಿಂದ ರೈಲುಗಳ ಸಂಚಾರ ಆರಂಭವಾಗಲಿದೆ.

ಎರಡು ದಶಕಗಳ ಬಳಿಕ ಹರಿಹರ-ಹೊಸಪೇಟೆ-ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭವಾಗುತ್ತಿದೆ. ಇದರಿಂದಾಗಿ ಬೆಂಗಳೂರು-ಹೊಸಪೇಟೆ-ಹಂಪಿ ನಡುವಿನ ಪ್ರಯಾಣದ ಅವಧಿ ಕಡಿತವಾಗಲಿದೆ.

2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ

19ನೇ ಶತಮಾನದಲ್ಲಿ ಬ್ರಿಟಿಷರು ಕೊಟ್ಟೂರಿನಿಂದ ಹತ್ತಿ ಸಾಗಣೆ ಮಾಡಲು ಈ ರೈಲು ಮಾರ್ಗವನ್ನು ಮಾಡಿದ್ದರು. 1994ರ ತನಕ ಈ ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚಾರ ನಡೆಸುತ್ತಿದ್ದು, ಬ್ರಾಡ್‌ಗೇಜ್‌ಗೆ ಬದಲಾವಣೆಯಾದ ಬಳಿಕ ರೈಲು ಸಂಚಾರ ಸ್ಥಗಿತವಾಗಿತ್ತು.

ಶೀಘ್ರದಲ್ಲೇ ಹರಿಹರ-ಕೊಟ್ಟೂರು ಮೂಲಕ ಬೆಂಗಳೂರು ರೈಲು ಸಂಚಾರ

ದರಪಟ್ಟಿ : ಹೊಸಪೇಟೆ- ದಾವಣಗೆರೆ ನಡುವಿನ ಅಂತರ 155 ಕಿ. ಮೀ. ಇದೆ. ಹರಿಹರ-ಹೊಸಪೇಟೆ-ಕೊಟ್ಟೂರು ರೈಲಿನ ದರಪಟ್ಟಿ ಹೀಗಿದೆ. ಹೊಸಪೇಟೆ-ವ್ಯಾಸ ಕಾಲೋನಿ 10 ರೂ., ಮರಿಯಮ್ಮನಹಳ್ಳಿಗೆ 10 ರೂ., ಹಂಪಾಪಟ್ಟಣಕ್ಕೆ 10 ರೂ., ಹಗರಿಬೊಮ್ಮನಹಳ್ಳಿಗೆ 10 ರೂ., ಮಾಲವಿಗೆ 15 ರೂ., ಕೊಟ್ಟೂರಿಗೆ 20 ರೂ., ಬೆಣ್ಣಿಹಳ್ಳಿಗೆ 25 ರೂ., ಹರಪನಹಳ್ಳಿಗೆ 25 ರೂ., ತೆಲಗಿಗೆ 30 ರೂ., ದಾವಣಗೆರೆ, ಅಮರಾವತಿ ಕಾಲೋನಿ ಮತ್ತು ಹರಿಹರಕ್ಕೆ 35 ರೂ.

ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು

ನಿಲ್ದಾಣಗಳು : ಹರಿಹರ-ಹೊಸಪೇಟೆ ಮಾರ್ಗ. ಪ್ರತಿದಿನ ಹರಿಹರದಿಂದ ಬೆಳಗ್ಗೆ 7.20ಕ್ಕೆ ಹೊರಡುವ ರೈಲು 7.25ಕ್ಕೆ ಅಮರಾವತಿ-ದೊಗ್ಗಳ್ಳಿ, 7.45ಕ್ಕೆ ದಾವಣಗೆರೆ, 8.03ಕ್ಕೆ ಅಮರಾವತಿ-ದೊಗ್ಗಳ್ಳಿ, 8.22ಕ್ಕೆ ತೆಲಗಿ, 8.43ಕ್ಕೆ ಹರಪನಹಳ್ಳಿ, 9.05ಕ್ಕೆ ಬೆಣ್ಣೆಹಳ್ಳಿ, 9.26ಕ್ಕೆ ಕೊಟ್ಟೂರು, 9.50ಕ್ಕೆ ಮಾಲವಿ, 10.08ಕ್ಕೆ ಹಗರಿಬೊಮ್ಮನಹಳ್ಳಿ, 10.44ಕ್ಕೆ ಮರಿಯಮ್ಮನಹಳ್ಳಿ, 11ಕ್ಕೆ ವ್ಯಾಸನಕೇರಿ, 11.32ಕ್ಕೆ ತುಂಗಭದ್ರಾ ಡ್ಯಾಂ, ಮಧ್ಯಾಹ್ನ 12.10ಕ್ಕೆ ಹೊಸಪೇಟೆ ತಲುಪಲಿದೆ.

ಹೊಸಪೇಟೆ-ಹರಿಹರ : ಹೊಸಪೇಟೆಯಿಂದ ಮಧ್ಯಾಹ್ನ 12.55ಕ್ಕೆ ಹೊರಡುವ ರೈಲು, 1.05ಕ್ಕೆ ತುಂಗಭದ್ರಾ ಡ್ಯಾಂ, 1.09ಕ್ಕೆ ವ್ಯಾಸನಕೇರಿ, 1.19ಕ್ಕೆ ವ್ಯಾಸ ಕಾಲೋನಿ, 1.34 ಮರಿಯಮ್ಮನಹಳ್ಳಿ, 1.53ಕ್ಕೆ ಹಂಪಾಪಟ್ಟಣ, 2.12ಕ್ಕೆ ಹಗರಿಬೊಮ್ಮನಹಳ್ಳಿ, 2.32ಕ್ಕೆ ಮಾಲವಿ, 3.02ಕ್ಕೆ ಕೊಟ್ಟೂರು, 3.32ಕ್ಕೆ ಬೆಣ್ಣೆಹಳ್ಳಿ, 3.45ಕ್ಕೆ ಹರಪನಹಳ್ಳಿ, 4.10ಕ್ಕೆ ತೆಲಗಿ, 5.01 ಅಮರಾವತಿ ಕಾಲೋನಿ, 5.25ಕ್ಕೆ ದಾವಣಗೆರೆ, 5.44ಕ್ಕೆ ಅಮರಾವತಿ-ದೊಗ್ಗಳ್ಳಿ, 6.30ಕ್ಕೆ ಹರಿಹರ ತಲುಪಲಿದೆ.

English summary
Harihar-Hospet-Kottur passenger train time schedule and stations. Train will run between Harihar and Hospet via Kottur from October 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X