ಹಿಂಸೆ, ದೌರ್ಜನ್ಯದ ಗೂಡಾದ ವಿಜಯಪುರ ಅಂಧ ವಸತಿ ಶಾಲೆ

Posted By:
Subscribe to Oneindia Kannada

ವಿಜಯಪುರ,ಮಾರ್ಚ್,03 'ನಾವು ಎಲ್ಲರಿಗೂ ಭಾರವಾಗಿದ್ದೇವೆ, ಯಾರಿಗೂ ಬೇಡವಾಗಿದ್ದೇವೆ, ನಾವು ಬಾವಿಗೆ ಬಿದ್ದು ಸತ್ತು ಹೋಗುತ್ತೇವೆ, ನಮ್ಮನ್ನು ಸಾಯಲು ಬಿಡಿ' ಇದು ವಿಜಯಪುರದ ಮಲ್ಲಿಕಾರ್ಜುನ ನಗರದಲ್ಲಿರುವ ಸರ್ಕಾರಿ ಅನುದಾನಿತ ಶಿವಶರಣ ಹರಳಯ್ಯ ಅಂಧ ಮಕ್ಕಳ ಶಾಲೆಯ ಮಕ್ಕಳ ನೊಂದ ಮಾತುಗಳಿವು.

ಶಿವಶರಣ ಹರಳಯ್ಯ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಎ.ಎಂ ದೊಡ್ಡಮನಿ ಹಾಗೂ ಈತನ ಪತ್ನಿಯ ಕಿರುಕುಳ, ತೀವ್ರ ಹಿಂಸೆಯಿಂದ ಜರ್ಜರಿತರಾದ ಮಕ್ಕಳು ಬುಧವಾರ ವಸತಿ ಶಾಲೆ ಬಿಟ್ಟು ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕಣ್ಣೀರಿಡುತ್ತಿದ್ದಾಗ ಈ ವಸತಿ ಶಾಲೆಯ ಹಿಂಸೆಯ ಮುಖ ಬಯಲಾಗಿದೆ.[ಮಂಡ್ಯ ಕಾಲೇಜು ವಿದ್ಯಾರ್ಥಿನಿಯ ಪ್ರಾಣಕ್ಕೆ ಕುತ್ತು ತಂದ ಹೊಟ್ಟೆನೋವು]

Harassment blind children attempted suicide in Vijayapura

ಘಟನೆಯ ವಿವರ:

ವಿಜಯಪುರದ ಮಲ್ಲಿಕಾರ್ಜುನ ನಗರದಲ್ಲಿರುವ ಸರ್ಕಾರಿ ಅನುದಾನಿತ ಶಿವಶರಣ ಹರಳಯ್ಯ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಎ.ಎಂ ದೊಡ್ಡಮನಿ. ಈತ ಮತ್ತು ಆತನ ಸಂಬಂಧಿಕರಿಗೆ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದರು. ಸುಮಾರು ದಿನಗಳಿಂದ ಇವರ ದೌರ್ಜನ್ಯವನ್ನು ಸಹಿಸಿಕೊಂಡ ಮಕ್ಕಳು ವಸತಿ ಶಾಲೆಯಲ್ಲೇ ಉಳಿದುಕೊಂಡಿದ್ದರು.[ಕಿರುಕುಳಕ್ಕೆ ಬೇಸತ್ತ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಆತ್ಮಹತ್ಯೆ]

ದೊಡ್ಡಮನಿ ಅವರ ಹಿಂಸೆ ತಾರಕ್ಕಕ್ಕೇರಿದಾಗ ಇದರಿಂದ ಬೇಸತ್ತ ಸುಮಾರು 12ಕ್ಕೂ ಹೆಚ್ಚು ಮಕ್ಕಳು ಬುಧವಾರ ವಸತಿ ಶಾಲೆಯಿಂದ ಹೊರಗೆ ಬಂದಿದ್ದಾರೆ. ಇವರಲ್ಲಿ ಕೆಲವರು ಅವರವರ ಊರು ತಲುಪಿದರೆ, ಇನ್ನು ಕೆಲವು ಮಕ್ಕಳು ಸಾರ್ವಜನಿಕರ ಬಳಿ ಬಾವಿ ಎಲ್ಲಿ ಎಂದು ಕೇಳಿದ್ದಾರೆ. ಅನುಮಾನಗೊಂಡ ಜನರು ಈ ಬಗ್ಗೆ ವಿಚಾರಿಸಿದಾಗ ವಸತಿ ಶಾಲೆಯ ಹಿಂಸೆ ವೃತ್ತಾಂತವನ್ನು ಬಿಚ್ಚಿಟ್ಟಿದ್ದಾರೆ.[ನಾಳೆಯನ್ನು ಇಂದೇ ನೋಡಬಲ್ಲ ಕನ್ನಡತಿ ಅಶ್ವಿನಿ]

ಹಿಂಸೆ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಇವರಿಂದ ನಮಗೆ ಯಾವುದೇ ಸ್ಪಂದನೆ ದೊರೆತಿಲ್ಲ. ನಾವು ಈ ವಸತಿ ಶಾಲೆಯಲ್ಲಿ ಮಾತ್ರ ಉಳಿದುಕೊಳ್ಳುವುದಿಲ್ಲ. ಅಧ್ಯಕ್ಷ ದೊಡ್ಡಮನಿ ಅವರು ವಸತಿ ಶಾಲೆ ಬಿಟ್ಟರೆ ಮಾತ್ರ ನಾವು ವಸತಿ ಶಾಲೆಗೆ ಹೋಗುತ್ತೇವೆ. ಇಲ್ಲವಾದರೆ ನಮ್ಮನ್ನು ನಮ್ಮ ಮನೆಗೆ ಕಳುಹಿಸಿಕೊಡಿ ಎಂದು ಕಣ್ಣಿರಿಡುತ್ತಾ ಜನರ ಬಳಿ ಬೇಡಿಕೊಂಡರು.

ಈ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಂಗವಿಕಲ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿ.ಎಂ ಗುಲಗಂಜಿ ವಸತಿ ಶಾಲೆ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More than 12 blind children leave their Shivasharana Haralaiah School for the vlind at Mallikarjuna Nagar. Seven of the students went to their villages and some students attempted suicide in Vijayapur on Wednesday, March 2nd.
Please Wait while comments are loading...